Jobnews4u

KEA JOBS – ಪಿಯುಸಿ ಪದವಿ ಐಟಿಐ ಮತ್ತು ಪಿಜಿ ಮುಗಿಸಿದವರಿಗೆ ಸುವರ್ಣ ಅವಕಾಶ, ಬೇಗ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, KEA JOBS ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ ಹಲವು ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಸರ್ಕಾರದ ವಿವಿಧ ಸಂಸ್ಥೆ ಅಥವಾ ನಿಗಮ ಅಥವಾ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಿಗೆ ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 31-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://cetonline.karnataka.gov.in/kea ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.

KEA JOBS 2025 ಉದ್ಯೋಗ ಮಾಹಿತಿ

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ (KEA) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 384 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ದ್ವಿತೀಯ ಪಿಯುಸಿ, ಐಟಿಐ, ಪದವಿ, ಪಿಜಿ ಇನ್ನೂ ಮುಂತಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿ ಹೋರಾಡಿಸಲಾದ ಹುದ್ದೆಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.

 

ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:

1. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿರುವ ಹುದ್ದೆಗಳು

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪ್ರಥಮ ದರ್ಜೆ ಸಹಾಯಕರು (ಕ್ಲರ್ಕ್ / ರೆವಿನ್ಯೂ ಇನ್ಸ್ಪೆಕ್ಟರ್)  04 ಹುದ್ದೆಗಳು
ದ್ವಿತೀಯ ದರ್ಜೆ ಸಹಾಯಕರು 14 ಹುದ್ದೆಗಳು 
  
ಒಟ್ಟು 18 ಹುದ್ದೆಗಳು 

 

2. ಕರ್ನಾಟಕ ಸೋಪ್ಸ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನಲ್ಲಿ ಇರುವ ಹುದ್ದೆಗಳು 

ಹುದ್ದೆಯ ಹೆಸರುವಿಂಗಡಣೆ ಹುದ್ದೆಗಳ ಸಂಖ್ಯೆ
ಕಿರಿಯ ಅಧಿಕಾರಿ  ಗುಣ ಆಶ್ವಾಸನೆ01 ಹುದ್ದೆಗಳು 
ಉತ್ಪಾದನೆ ನಿರ್ವಹಣೆ 02 ಹುದ್ದೆಗಳು 
ಸಾಮಗ್ರಿ /ಉಗ್ರಾಣ ವಿಭಾಗ  01 ಹುದ್ದೆಗಳು
   
ಒಟ್ಟು  04 ಹುದ್ದೆಗಳು 

 

3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇರುವ ಹುದ್ದೆಗಳು

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಜೂನಿಯರ್ ಪ್ರೋಗ್ರಾಮರ್  04 ಹುದ್ದೆಗಳು 
ಸಹಾಯಕ ಇಂಜಿನಿಯರ್ ಸಿವಿಲ್  01 ಹುದ್ದೆಗಳು 
ಸಹಾಯಕ ಗ್ರಂಥಪಾಲಕ  01 ಹುದ್ದೆಗಳು 
ಸಹಾಯಕರು 11 ಹುದ್ದೆಗಳು 
ಕಿರಿಯ ಸಹಾಯಕರು   23 ಹುದ್ದೆಗಳು 
  
ಒಟ್ಟು 40

 

4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಇರುವ ಹುದ್ದೆಗಳು 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ಲೆಕ್ಕಿಗರು 03 ಹುದ್ದೆಗಳು 
ನಿರ್ವಾಹಕರು 60 ಹುದ್ದೆಗಳು 
  
ಒಟ್ಟು 63 ಹುದ್ದೆಗಳು 

 

5. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇರುವ ಹುದ್ದೆಗಳು

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ಸಂಚಾರ ನಿರೀಕ್ಷಕರು 15 ಹುದ್ದೆಗಳು 
ಸಹಾಯಕ ಸಂಚಾರ ನಿರೀಕ್ಷಕರು (ಹಿಂಬಾಕಿ) 04 ಹುದ್ದೆಗಳು 
  
ಒಟ್ಟು 19 ಹುದ್ದೆಗಳು 

 

6. ಕೃಷಿ ಮಾರಾಟ ಇಲಾಖೆಯಲ್ಲಿ ಇರುವ ಹುದ್ದೆಗಳು 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರರು ಸಿವಿಲ್ 10 ಹುದ್ದೆಗಳು 
ಕಿರಿಯ ಅಭಿಯಂತರರು ಸಿವಿಲ್05 ಹುದ್ದೆಗಳು 
ಮಾರುಕಟ್ಟೆ ಮೇಲ್ವಿಚಾರಕರು 30 ಹುದ್ದೆಗಳು 
ಪ್ರಥಮ ದರ್ಜೆ ಸಹಾಯಕರು 30 ಹುದ್ದೆಗಳು 
ದ್ವಿತೀಯ ದರ್ಜೆ ಸಹಾಯಕರು 30 ಹುದ್ದೆಗಳು 
ಮಾರಾಟ ಸಹಾಯಕರು 75 ಹುದ್ದೆಗಳು 
  
ಒಟ್ಟು 180 ಹುದ್ದೆಗಳು 

 

7. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಇರುವ ಹುದ್ದೆಗಳು 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪ್ರಥಮ ದರ್ಜೆ ಸಹಾಯಕರು 50 ಹುದ್ದೆಗಳು 
  
ಒಟ್ಟು 50 ಹುದ್ದೆಗಳು 

 

8. ಶಾಲಾ ಶಿಕ್ಷಣ ಇಲಾಖೆಯಲ್ಲಿ ಇರುವ ಹುದ್ದೆಗಳು 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಗ್ರಂಥಪಾಲಕರು 10 ಹುದ್ದೆಗಳು 
  
ಒಟ್ಟು 10 ಹುದ್ದೆಗಳು 

 

 

ವೇತನದ ವಿವರಗಳು: `

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಹುದ್ದೆಗೆ ಅನುಗುಣವಾಗಿ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.

 

ಹುದ್ದೆಯ ಹೆಸರುವೇತನ
ಪ್ರಥಮ ದರ್ಜೆ ಸಹಾಯಕರು (ಕ್ಲರ್ಕ್ / ರೆವಿನ್ಯೂ ಇನ್ಸ್ಪೆಕ್ಟರ್)   ರೂ. 44,425-83700/- ಗಳು
ದ್ವಿತೀಯ ದರ್ಜೆ ಸಹಾಯಕರು ರೂ. 34,100-67,600/- ಗಳು
ಕಿರಿಯ ಅಧಿಕಾರಿ  (ಗುಣ ಆಶ್ವಾಸನೆ, ಉತ್ಪಾದನೆ ನಿರ್ವಹಣೆ, ಸಾಮಗ್ರಿ /ಉಗ್ರಾಣ ವಿಭಾಗ)ರೂ. 61,300-1,12,900/- ಗಳು
ಜೂನಿಯರ್ ಪ್ರೋಗ್ರಾಮರ್ರೂ. 43,100-83900/- ಗಳು
ಸಹಾಯಕ ಇಂಜಿನಿಯರ್ ಸಿವಿಲ್ರೂ. 43,100-83900/- ಗಳು
ಸಹಾಯಕ ಗ್ರಂಥಪಾಲಕರು ರೂ. 30,350-58,250/- ಗಳು
ಸಹಾಯಕರು ರೂ. 37,900-70,850/- ಗಳು
ಕಿರಿಯ ಸಹಾಯಕರು   ರೂ. 21,400-42,000/- ಗಳು
ಸಹಾಯಕ ಲೆಕ್ಕಿಗರು   ರೂ. 23,990-42,800/- ಗಳು
ನಿರ್ವಾಹಕರು ರೂ. 18,660-25,300/- ಗಳು
ಸಹಾಯಕ ಸಂಚಾರ ನಿರೀಕ್ಷಕರು ರೂ. 22,390-33,320/- ಗಳು
ಸಹಾಯಕ ಸಂಚಾರ ನಿರೀಕ್ಷಕರು (ಹಿಂಬಾಕಿ)ರೂ. 22,390-33,320/- ಗಳು
ಸಹಾಯಕ ಅಭಿಯಂತರರು ಸಿವಿಲ್ರೂ. 69,250-1,34,200/- ಗಳು
ಕಿರಿಯ ಅಭಿಯಂತರರು ಸಿವಿಲ್ ರೂ. 54,175-99,400/- ಗಳು
ಮಾರುಕಟ್ಟೆ ಮೇಲ್ವಿಚಾರಕರು ರೂ. 27,650-52,650/- ಗಳು
ಪ್ರಥಮ ದರ್ಜೆ ಸಹಾಯಕರು ರೂ. 44,425-83,700/- ಗಳು
ದ್ವಿತೀಯ ದರ್ಜೆ ಸಹಾಯಕರು ರೂ. 34,100-67,600/- ಗಳು
ಮಾರಾಟ ಸಹಾಯಕರು ರೂ. 34,100-67,600/- ಗಳು
ಪ್ರಥಮ ದರ್ಜೆ ಸಹಾಯಕರು ರೂ. 44,425-83,700/- ಗಳು
ಗ್ರಂಥಪಾಲಕರು ರೂ. 54,175-99,400/- ಗಳು

 

ಶೈಕ್ಷಣಿಕ ಅರ್ಹತಾ ವಿವರಗಳು:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 31-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

 

ಪ್ರಥಮ ದರ್ಜೆ ಸಹಾಯಕರು (ಕ್ಲರ್ಕ್ / ರೆವಿನ್ಯೂ ಇನ್ಸ್ಪೆಕ್ಟರ್), ಸಹಾಯಕ, ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

 

ದ್ವಿತೀಯ ದರ್ಜೆ ಸಹಾಯಕರು, ಮಾರಾಟ ಸಹಾಯಕರು, ಕಿರಿಯ ಸಹಾಯಕ ಹುದ್ದೆಗೆ :

  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.

 

ಸಹಾಯಕ ಸಂಚಾರ ನಿರೀಕ್ಷಕರು ಹುದ್ದೆಗೆ :

  • ಕಲಾ ಅಥವಾ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಾಸ್ ಆಗಿರಬೇಕು. 

       ಅಥವಾ 

  • ಡಿಪ್ಲೋಮಾ 3 ವರ್ಷಗಳ ಕೋರ್ಸ್ ಅನ್ನು ಮುಗಿಸಿರಬೇಕು. 

 

ನಿರ್ವಾಹರು ಹುದ್ದೆಗೆ :

  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.

        ಮತ್ತು 

  • ಮಾನ್ಯವಾದ ಕಂಡಕ್ಟರ್ ಪರವಾನಿಗೆ ಮತ್ತು ಬ್ಯಾಡ್ಜ್  ಹೊಂದಿರಬೇಕು. 

 

ಸಹಾಯಕ ಲೆಕ್ಕಿಗರು ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 3 ವರ್ಷಗಳ ವಾಣಿಜ್ಯ ಪದವಿ ಪಡೆದಿರಬೇಕು.
  • ಕಂಪ್ಯೂಟರ್ ನ ತಿಳುವಳಿಕೆ ಹೊಂದಿರಬೇಕು. 

 

ಕಿರಿಯ ಅಧಿಕಾರಿ  (ಗುಣ ಆಶ್ವಾಸನೆ, ಉತ್ಪಾದನೆ ನಿರ್ವಹಣೆ, ಸಾಮಗ್ರಿ /ಉಗ್ರಾಣ ವಿಭಾಗ) ಹುದ್ದೆಗೆ :

  • ಎಂ. ಎಸ್ಸಿ. ಕೆಮಿಸ್ಟ್ರಿ , ಬಿ. ಇ . ಅಥವಾ ಬಿ. ಟೆಕ್ ಅಥವಾ ಎಂ.ಬಿ.ಎ.  ಹುದ್ದೆಗೆ ತಕ್ಕಂತೆ ಪದವಿ ಪಡೆದಿರಬೇಕು. 

 

ಸಹಾಯಕ ಗ್ರಂಥಪಾಲಕರು ಹುದ್ದೆಗೆ :

  • ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾಲದಿಂದ ಲೈಬ್ರರಿ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪದವಿ ಪಡೆದಿರಬೇಕು. 
  • ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಪರಿಣಿತಿ ಹೊಂದಿರಬೇಕು. 

 

ಗ್ರಂಥಪಾಲಕರು ಹುದ್ದೆಗೆ :

  • ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ನಲ್ಲಿ ಶೇಕಡಾ 55% ಅಂಕಗಳೊಂದಿಗೆ ಪದವಿ ಹೊಂದಿರಬೇಕು. 

 

ಜೂನಿಯರ್ ಪ್ರೋಗ್ರಾಮರ್ ಹುದ್ದೆಗೆ :

  • ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಅಥವಾ ಎಂ.ಸಿ.ಎ. ಪದವಿ ಯನ್ನು ಹೊಂದಿರಬೇಕು. 

 

ಸಹಾಯಕ ಇಂಜಿನಿಯರ್ ಸಿವಿಲ್ ಹುದ್ದೆಗೆ :

  • ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾಲದಿಂದ ಬಿ. ಇ. ಪದವಿ ಅಥವಾ ಅದಕ್ಕೆ ಸಮಾನವಾದ ಪದವಿ ಹೊಂದಿರಬೇಕು. 

 

ಸಹಾಯಕ ಅಭಿಯಂತರರು ಸಿವಿಲ್ ಹುದ್ದೆಗೆ :

  • ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾಲದಿಂದ ಬಿ. ಇ. ಪದವಿಯನ್ನು ಹೊಂದಿಯಬೇಕು. 

 

ಕಿರಿಯ ಅಭಿಯಂತರರು ಸಿವಿಲ್ ಹುದ್ದೆಗೆ :

  • ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾಲದಿಂದ ಡಿಪ್ಲೋಮಾವನ್ನು ಪೂರ್ಣಗೊಳಿಸಿರಬೇಕು. 

 

ಮಾರುಕಟ್ಟೆ ಮೇಲ್ವಿಚಾರಕರು ಸಿವಿಲ್ ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಬಿ.ಎಸ್ಸಿ. ಪದವಿ ಪಡೆದಿರಬೇಕು. 

 

ವಯಸ್ಸಿನ ಪರಿಮಿತಿ:

  • `ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)’ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 31-ಅಕ್ಟೋಬರ್-2025ಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯಸ್ಸು ವರ್ಗದ ಪ್ರಕಾರ ಈ ಕೆಳಗಿನಂತಿವೆ. 
ಸಾಮಾನ್ಯ ಅಭ್ಯರ್ಥಿಗಳಿಗೆ38 ವರ್ಷಗಳು 
ಓಬಿಸಿ ಅಭ್ಯರ್ಥಿಗಳಿಗೆ (ಪ್ರವರ್ಗ 2A, 2B, 3A, 3B ವರ್ಗದವರು)41 ವರ್ಷಗಳು 
ಎಸ್ಸಿ/ಎಸ್ಟಿ, ಪ್ರವರ್ಗ ಅಭ್ಯರ್ಥಿಗಳಿಗೆ43 ವರ್ಷಗಳು 

 

🔶 ವಯೋಮಿತಿ ಸಡಲಿಕೆ 

  • ಅಂಗವಿಕಲ ಅಭ್ಯರ್ಥಿಗಳಿಗೆ  – 10 ವರ್ಷಗಳು
  • ಮಾಜಿ ಸೈನಿಕರು – ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿರುವ ಸೇವೆ + 3 ವರ್ಷಗಳ
  • ವಿಧವೆಯರಿಗೆ – 10 ವರ್ಷಗಳು 

 

ಆಯ್ಕೆಯ ವಿಧಾನ: 

  • ಲಿಖಿತ ಪರೀಕ್ಷೆ,
  • ದಾಖಲೆ ಪರಿಶೀಲನೆ
  • ಕೊನೆಯದಾಗಿ ಆಯ್ಕೆ ಪ್ರಕ್ರಿಯೆ 

 

KEA JOBS
KEA JOBS

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA JOBS 2025 ಗೆ ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು `ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)’ಅಧಿಕೃತ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://cetonline.karnataka.gov.in/kea ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಮೊದಲನೆಯದಾಗಿ ಅಭ್ಯರ್ಥಿಗಳು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಯನ್ನು ನೋಂದಾಯಿಸಿಕೊಳ್ಳಿ. 
  • ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿಕೊಳ್ಳಿ.
  • ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಪಾವತಿಸುವದಾದರೆ ಹೆಚ್ಚುವರಿ ಅರ್ಜಿ ಶುಲ್ಕವನ್ನು ಪಾವತಿಮಾಡಬೇಕಾಗುತ್ತದೆ.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ 🗓️ 08-10-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ🗓️ 31-10-2025
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ
HK ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು  👉🏻 ಇಲ್ಲಿ ಕ್ಲಿಕ್ ಮಾಡಿ
NON-HK ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://cetonline.karnataka.gov.in/kea

 

 

Leave a Comment