ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `NIUM Jobs’ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಶಿನ್, ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಮಾಡಲು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. `NIUM’ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 04-ನವೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ https://nium.in ಮೂಲಕ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಆಫ್ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
NIUM Jobs 2025 ಉದ್ಯೋಗ ಮಾಹಿತಿ
ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ಯು ಭಾರತ ಸರಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಸ್ವಾಯುತ್ತ ಸಂಸ್ಥೆಯಾಗಿದೆ. ಇದರಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿ ಮತ್ತು ಷಾರ್ಟ್ ಟರ್ಮ್ ಗುತ್ತಿಗೆ ಆಧಾರದಲ್ಲಿ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 31 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, ಮುಂತಾದ ಹುದ್ದೆಗೆ ತಕ್ಕಂತೆ ಪದವಿ ವಿಧ್ಯಾಭ್ಯಾಸ ಜೊತೆಗೆ ಕೆಲಸಕ್ಕೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಜಂಟಿ ನಿರ್ದೇಶಕರು(ಅಡ್ಮಿನ್) | 1 ಹುದ್ದೆ |
| ರೇಸಿಡೆಂಟ್ ಮೆಡಿಕಲ್ ಆಫೀಸರ್ | 1 ಹುದ್ದೆ |
| ವಿಕಿರಣಶಾಸ್ತ್ರಜ್ಞ (Radiologist) | 1 ಹುದ್ದೆ |
| ಅರವಳಿಕೆ ತಜ್ಞ (Anesthetist) | 2 ಹುದ್ದೆಗಳು |
| ಸಹಾಯಕ ಗ್ರಂಥಪಾಲಕ | 1 ಹುದ್ದೆ |
| ನರ್ಸಿಂಗ್ ಆಫೀಸರ್ | 1 ಹುದ್ದೆ |
| ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) | 1 ಹುದ್ದೆ |
| ಇಇಜಿ ತಂತ್ರಜ್ಞ | 1 ಹುದ್ದೆ |
| ವೈದ್ಯಕೀಯ ಪ್ರಯೋಗಾಲಯ | 10 ಹುದ್ದೆಗಳು |
| ಸ್ಟೆನೋ ಟೈಪಿಸ್ಟ್ | 1 ಹುದ್ದೆ |
| ಎಲ್. ಡಿ.ಸಿ./ಕ್ಯಾಶಿಯರ್/ಟೈಪಿಸ್ಟ್ | 05 ಹುದ್ದೆಗಳು |
| ಔಷಧಾಲಯ ಸಹಾಯಕ | 1 ಹುದ್ದೆ |
| ಔಷಧಾಲಯ ಅಟೆಂಡೆಂಟ್ | 1 ಹುದ್ದೆ |
| ಸ್ವಾಗತಕಾರ (ರಿಸೆಪ್ಷನಿಸ್ಟ್ | 1 ಹುದ್ದೆ |
| ಡ್ರೈವರ್ | 1 ಹುದ್ದೆ |
| ಸ್ಟೋರ್ ಅಟೆಂಡೆಂಟ್1 | 1 ಹುದ್ದೆ |
| ಆಂಬ್ಯುಲೆನ್ಸ್ ಅಸಿಸ್ಟೆಂಟ್ | 1 ಹುದ್ದೆ |
ಆಯ್ಕೆಯ ಸ್ಥಳ :
- ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು :
- ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.
| ಹುದ್ದೆಯ ಹೆಸರು | ವೇತನ |
| ಜಂಟಿ ನಿರ್ದೇಶಕರು(ಅಡ್ಮಿನ್) | ರೂ. 78,800-2,09,200/- ಗಳು Level 12 |
| ರೇಸಿಡೆಂಟ್ ಮೆಡಿಕಲ್ ಆಫೀಸರ್ | ರೂ. 56,100-1,77500/- ಗಳು Level 10 |
| ವಿಕಿರಣಶಾಸ್ತ್ರಜ್ಞ (Radiologist) | ರೂ. 56,100-1,77500/- ಗಳು Level 10 |
| ಅರವಳಿಕೆ ತಜ್ಞ (Anesthetist) | ರೂ. 56,100-1,77500/- ಗಳು Level 10 |
| ಸಹಾಯಕ ಗ್ರಂಥಪಾಲಕ | ರೂ. 35,400-1,12,400/- ಗಳು Level-6 |
| ನರ್ಸಿಂಗ್ ಆಫೀಸರ್ | ರೂ. 44,900-1,42,400/- ಗಳು Level-7 |
| ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) | ರೂ. 29,200/- – 92,300/- ಗಳು Level-5 |
| ಇಇಜಿ ತಂತ್ರಜ್ಞ | ರೂ. 35,400-1,12,400/- ಗಳು Level-6 |
| ವೈದ್ಯಕೀಯ ಪ್ರಯೋಗಾಲಯ | ರೂ. 35,400-1,12,400/- ಗಳು Level-6 |
| ಸ್ಟೆನೋ ಟೈಪಿಸ್ಟ್ | ರೂ. 25,500-81,100/- ಗಳು Level-4 |
| ಎಲ್. ಡಿ.ಸಿ./ಕ್ಯಾಶಿಯರ್/ಟೈಪಿಸ್ಟ್ | ರೂ. 19,900/- – 63,200/- ಗಳು Level-2 |
| ಔಷಧಾಲಯ ಸಹಾಯಕ | ರೂ. 19,900/- – 63,200/- ಗಳು Level-2 |
| ಔಷಧಾಲಯ ಅಟೆಂಡೆಂಟ್ | ರೂ. 18,000/- – 56,900/- Level-1 |
| ಸ್ವಾಗತಕಾರ (ರಿಸೆಪ್ಷನಿಸ್ಟ್ | ರೂ. 25,500-81,100/- ಗಳು Level-4 |
| ಡ್ರೈವರ್ | ರೂ. 19,900/- – 63,200/- ಗಳು Level-2 |
| ಸ್ಟೋರ್ ಅಟೆಂಡೆಂಟ್1 | ರೂ. 18,000/- – 56,900/- Level-1 |
| ಆಂಬ್ಯುಲೆನ್ಸ್ ಅಸಿಸ್ಟೆಂಟ್ | ರೂ. 18,000/- – 56,900/- Level-1 |
ಶೈಕ್ಷಣಿಕ ಅರ್ಹತಾ ವಿವರಗಳು :
ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ಅಧಿಕೃತ ನೇಮಕಾತಿ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 04-ನವಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಜಂಟಿ ನಿರ್ದೇಶಕರು(ಅಡ್ಮಿನ್) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಪದವಿ ನಂತರ ಎಕೌಂಟ್, ಆಡಳಿತದಲ್ಲಿ ಅನುಭವವನ್ನು ಹೊಂದಿರಬೇಕು.
ರೇಸಿಡೆಂಟ್ ಮೆಡಿಕಲ್ ಆಫೀಸರ್ ಹುದ್ದೆಗೆ :
- CCIM/ISM ನಿಂದ ರಿಜಿಸ್ಟರ್ ಮಾಡಿಕೊಂಡಿರಬೇಕು ಮತ್ತು ಯುನಾನಿಯಲ್ಲಿ MD/MS ಪದವಿ.
- ಅರಬಿಕ್ ಅಥವಾ ಉರ್ದು ಅಥವಾ ಪರ್ಶಿಯನ್ ಭಾಷೆಯ ಜ್ಞಾನ ಹೊಂದಿರಬೇಕು.
ವಿಕಿರಣಶಾಸ್ತ್ರಜ್ಞ (Radiologist) ಹುದ್ದೆಗೆ :
- ಸಂಬಂದಿಸಿರುವ ವಿಷಯದಲ್ಲಿ ಪದವಿ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು.
ಅರವಳಿಕೆ ತಜ್ಞ (Anaesthetist) ಹುದ್ದೆಗೆ:
- MCI ಯಲ್ಲಿ ನೋಂದಾಯಿತ MBBS with M.D. ಯಲ್ಲಿ ಅರವಳಿಕೆ ಶಾಸ್ತ್ರ.
ಸಹಾಯಕ ಗ್ರಂಥಪಾಲಕ ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.
- ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ.
- ಹಿಂದಿ, ಉರ್ದು,ಇಂಗ್ಲೀಷ್, ಯಾವುದಾದರು ಒಂದು ಭಾಷೆಯಲ್ಲಿ ಜ್ಞಾನ ಹೊಂದಿರಬೇಕು.
ನರ್ಸಿಂಗ್ ಆಫೀಸರ್ ಹುದ್ದೆಗೆ :
- ಭಾರತದ ನರ್ಸಿಂಗ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಬಿ. ಎಸ್ಸಿ. ನರ್ಸಿಂಗ್ ಕೋರ್ಸ್.
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಮಂಡಳಿಯಿಂದ 3 ವರ್ಷಗಳ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಹೊಂದಿರಬೇಕು.
ಇಇಜಿ ತಂತ್ರಜ್ಞ ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ. ಎಸ್ಸಿ. ಪದವಿಯನ್ನು ಜೊತೆಗೆ 2 ವರ್ಷಗಳ ಕಾಲ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಅನುಭವ ಹೊಂದಿರಬೇಕು.
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ :
- ವೈದ್ಯಕೀಯ ಪ್ರಯೋಗಾಲಯದ ವಿಜ್ಞಾನದಲ್ಲಿ ಪದವಿ ಜೊತೆಗೆ 2 ವರ್ಷಗಳ ಕಾಲ ಸಂಬಂದಿಸಿರುವ ಕ್ಷೇತ್ರದಲ್ಲಿ ಅನುಭವವಿರಬೇಕು.
ಸ್ಟೆನೋ ಟೈಪಿಸ್ಟ್ ಹುದ್ದೆಗೆ :
- 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಮತ್ತು ಇಂಗ್ಲಿಷನಲ್ಲಿ ನಿಮಿಷಕ್ಕೆ 40 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 80 ಷಾರ್ಟ್ ಹ್ಯಾಂಡ್ ಟೈಪಿಂಗ್ ವೇಗ ಹೊಂದಿರಬೇಕು.
- ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ.
ಎಲ್. ಡಿ.ಸಿ./ಕ್ಯಾಶಿಯರ್/ಟೈಪಿಸ್ಟ್ ಹುದ್ದೆಗೆ :
- 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಮತ್ತು ಇಂಗ್ಲಿಷನಲ್ಲಿ ನಿಮಿಷಕ್ಕೆ 30 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 25 ಟೈಪಿಂಗ್ ವೇಗ ಹೊಂದಿರಬೇಕು.
- ಕಂಪ್ಯೂಟರ್ ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಔಷಧಾಲಯ ಸಹಾಯಕ ಹುದ್ದೆಗೆ :
- 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಒಂದು ವರ್ಷದ ಯುನಾನಿ ಫಾರ್ಮಾಸಿ ಪ್ರಮಾಣ ಪತ್ರಹೊಂದಿರಬೇಕು.
- ಹಿಂದಿ, ಉರ್ದು,ಇಂಗ್ಲೀಷ್, ಕನ್ನಡ ಯಾವುದಾದರು ಒಂದು ಭಾಷೆಯಲ್ಲಿ ಜ್ಞಾನ ಹೊಂದಿರಬೇಕು.
ಔಷಧಾಲಯ ಅಟೆಂಡೆಂಟ್ ಹುದ್ದೆಗೆ :
- 10 ನೇ ತರಗತಿ ಜೊತೆಗೆ 3 ವರ್ಷಗಳ ಕಾಲ ಔಷಧ ವಿತರಣೆಯಲ್ಲಿ ಅನುಭವವಿರಬೇಕು ಮತ್ತು ಹಿಂದಿ ಅಥವಾ ಉರ್ದು ಭಾಷಾ ಜ್ಞಾನವಿರಬೇಕು.
ಸ್ವಾಗತಕಾರ (ರಿಸೆಪ್ಷನಿಸ್ಟ್) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗಗಳಲ್ಲಿ ಪದವಿ ಜೊತೆಗೆ EPBAX ಕಾರ್ಯಾಚರಣೆಯಲ್ಲಿ 1 ವರ್ಷದ ಪ್ರಮಾಣ ಪತ್ರ ಹೊಂದಿರಬೇಕು.
ಡ್ರೈವರ್ ಹುದ್ದೆಗೆ :
- 8ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು LTV ಅಥವಾ HTV ಚಾಲನ ಪರವಾನಗಿ ಜೊತೆಗೆ 2 ವರ್ಷಗಳ ಅನುಭವವಿರಬೇಕು.
ಸ್ಟೋರ್ ಅಟೆಂಡೆಂಟ್ ಹುದ್ದೆಗೆ :
- 10 ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
ಆಂಬ್ಯುಲೆನ್ಸ್ ಅಸಿಸ್ಟೆಂಟ್ ಹುದ್ದೆಗೆ:
- 10 ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಹಿಂದಿ ಅಥವಾ ಉರ್ದು ಭಾಷೆಯನ್ನು ಮಾತಾನಾಡಲು ಬರುವವರಾಗಿರಬೇಕು.
ವಯಸ್ಸಿನ ಪರಿಮಿತಿ :
ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 04-ನವಂಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.
| ಹುದ್ದೆಯ ಹೆಸರು | ವಯಸ್ಸು |
| ಜಂಟಿ ನಿರ್ದೇಶಕರು(ಅಡ್ಮಿನ್) | ಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷಗಳು |
| ರೇಸಿಡೆಂಟ್ ಮೆಡಿಕಲ್ ಆಫೀಸರ್ | ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು |
| ವಿಕಿರಣಶಾಸ್ತ್ರಜ್ಞ (Radiologist) | ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷಗಳು |
| ಅರವಳಿಕೆ ತಜ್ಞ (Anesthetist) | ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು |
| ಸಹಾಯಕ ಗ್ರಂಥಪಾಲಕ | ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು |
| ನರ್ಸಿಂಗ್ ಆಫೀಸರ್ | ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು |
| ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) | ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು |
| ಇಇಜಿ ತಂತ್ರಜ್ಞ | ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು |
| ವೈದ್ಯಕೀಯ ಪ್ರಯೋಗಾಲಯ | ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು |
| ಸ್ಟೆನೋ ಟೈಪಿಸ್ಟ್ | ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು |
| ಎಲ್. ಡಿ.ಸಿ./ಕ್ಯಾಶಿಯರ್/ಟೈಪಿಸ್ಟ್ | ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷಗಳು |
| ಔಷಧಾಲಯ ಸಹಾಯಕ | ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು |
| ಔಷಧಾಲಯ ಅಟೆಂಡೆಂಟ್ | ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷಗಳು |
| ಸ್ವಾಗತಕಾರ (ರಿಸೆಪ್ಷನಿಸ್ಟ್ | ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು |
| ಡ್ರೈವರ್ | ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು |
| ಸ್ಟೋರ್ ಅಟೆಂಡೆಂಟ್1 | ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷಗಳು |
| ಆಂಬ್ಯುಲೆನ್ಸ್ ಅಸಿಸ್ಟೆಂಟ್ | ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷಗಳು |
ಅರ್ಜಿ ಶುಲ್ಕದ ವಿವರಗಳು:
➡️. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ- ರೂ. 1,600/- ಗಳು
➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ – ರೂ. 2,000/- ಗಳು
- ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಇದೆ.
- ಶುಲ್ಕ ಪಾವತಿಸುವ ವಿಧಾನ : “The Director, National Institute of Unani Medicine, Bengaluru” ಬೆಂಗಳೂರು ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಬೇಕು.
🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯ ವಿಧಾನ:
- ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
- ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ)
NIUM Jobs 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- ಮೊದಲು https://nium.in ವೆಬ್ ಸೈಟ್‌ಗೆ ಭೇಟಿ ನೀಡಿ.
- ಅರ್ಜಿ ಹಾಕಲು ಬಯಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ ಇನ್ನೂ ಮುಂತಾದ ವಿವಿರಗಳೊಂದಿಗೆ)
- ತದನಂತರ ಅರ್ಜಿ ಶುಲ್ಕವನ್ನು ಲಗತ್ತಿಸಿ.
- ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಿರಿ.
- ಅರ್ಜಿ ಕಳಿಸುವ ವಿಳಾಸ :
The Director,
National Institute of Unani Medicine,
Kottigepalya, Magadi main Road,
Bengaluru – 560091
ಸಂಜೆ 5.00 PM 45 ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 20-09-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 23-10-2025 |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| ಅಭ್ಯರ್ಥಿಗಳು ಅರ್ಜಿಯನ್ನು ಡೌನ್ಲೋಡ್ ಮಾಡಲು | 👉🏻 ಇಲ್ಲಿ ಕ್ಲಿಕ್ ಮಾಡಿ |
| ನೇಮಕಾತಿ ವೆಬ್ಸೈಟ್ ವಿಳಾಸ : https://nium.in |

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಈ ಕೆಳಗೆ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು (NIUM) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1 : `NIUM’ ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 1 : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನದಿಂದ 45 ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಪ್ರಶ್ನೆ 2 : ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 2 : ಅರ್ಜಿಯನ್ನು ಆಫ್ ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

