Jobnews4u

IPPB JOBS – ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಎಗ್ಜಿಕ್ಯೂಟಿವ್ ಹುದ್ದೆಗಳ ನೇಮಕಾತಿ 2025 , ಬೇಗ ಅರ್ಜಿ ಸಲ್ಲಿಸಿ.

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `IPPB JOBS’ –  ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ದಿಂದ ಎಗ್ಜಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕವು ಸೇರಿದಂತೆ ಭಾರತದ ವಿವಿಧಡೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. IPPB ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 29-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://ibpsonline.ibps.in/ippblaug25 ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.

IPPB JOBS 2025 ಉದ್ಯೋಗ ಮಾಹಿತಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ಒಟ್ಟು 348 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.

ರಾಜ್ಯದ ಪ್ರಕಾರ ಖಾಲಿ ಇರುವ ಹುದ್ದೆಗಳ ಸಂಖ್ಯೆ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಕರ್ನಾಟಕ19 ಹುದ್ದೆಗಳು
ಆಂಧ್ರಪ್ರದೇಶ 08 ಹುದ್ದೆಗಳು
ಅಸ್ಸಾಂ12 ಹುದ್ದೆಗಳು
ಬಿಹಾರ17 ಹುದ್ದೆಗಳು
ಛತ್ತೀಸ್ ಗಢ್  09 ಹುದ್ದೆಗಳು
ಗುಜರಾತ್30 ಹುದ್ದೆಗಳು
ಹರಿಯಾಣ11 ಹುದ್ದೆಗಳು
ಹಿಮಾಚಲ ಪ್ರದೇಶ04 ಹುದ್ದೆಗಳು
ಜಮ್ಮು ಕಾಶ್ಮೀರ 03 ಹುದ್ದೆಗಳು
ಜಾರ್ಖಂಡ್12 ಹುದ್ದೆಗಳು
ಕೇರಳ06 ಹುದ್ದೆಗಳು
ಮಧ್ಯಪ್ರದೇಶ 29 ಹುದ್ದೆಗಳು
ಮಹಾರಾಷ್ಟ್ರ32 ಹುದ್ದೆಗಳು
ಈಶಾನ್ಯ ಪ್ರದೇಶಗಳು (ಅರುಣಾ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ)30 ಹುದ್ದೆಗಳು
ಓಡಿಶಾ11 ಹುದ್ದೆಗಳು
ಪಂಜಾಬ್15 ಹುದ್ದೆಗಳು
ರಾಜಸ್ಥಾನ10 ಹುದ್ದೆಗಳು
ತಮಿಳನಾಡು17 ಹುದ್ದೆಗಳು
ತೆಲಂಗಾಣ09 ಹುದ್ದೆಗಳು
ಉತ್ತರಪ್ರದೇಶ40 ಹುದ್ದೆಗಳು
ಉತ್ತರಾಖಂಡ11 ಹುದ್ದೆಗಳು
ಪಶ್ಚಿಮ ಬಂಗಾಳ  13 ಹುದ್ದೆಗಳು
  
ಒಟ್ಟು 348  ಹುದ್ದೆಗಳು

 

ಕರ್ನಾಟಕ ರಾಜ್ಯದಲ್ಲಿ ಒಟ್ಟು 19 ಹುದ್ದೆಗಳ ಖಾಲಿ ಇರುವ ಹುದ್ದೆಗಳ ವಿಂಗಡಣೆ :

ಜಿಲ್ಲೆಯ ಹೆಸರು ಹುದ್ದೆಗಳ ಸಂಖ್ಯೆ
ದೊಡ್ಡ ಬಳ್ಳಾಪುರ 01 ಹುದ್ದೆ 
ಬೆಂಗಳೂರು02 ಹುದ್ದೆಗಳು 
ಅಂಕೋಲಾ01 ಹುದ್ದೆ 
ಬೆಳಗಾವಿ01 ಹುದ್ದೆ 
ಬೀದರ್01 ಹುದ್ದೆ 
ಚಿಕ್ಕೋಡಿ02 ಹುದ್ದೆಗಳು 
ಗದಗ01 ಹುದ್ದೆ 
ಚಾಮರಾಜನಗರ01 ಹುದ್ದೆ 
ಚಿಕ್ಕಬಳ್ಳಾಪುರ01 ಹುದ್ದೆ 
ಚಿಕ್ಕಮಗಳೂರು 01 ಹುದ್ದೆ 
ಹಾಸನ01 ಹುದ್ದೆ 
ಮಡಿಕೇರಿ01 ಹುದ್ದೆ 
ಮಂಗಳೂರು 02 ಹುದ್ದೆಗಳು 
ಶಿವಮೊಗ್ಗ01 ಹುದ್ದೆ 
ತುಮಕೂರು01 ಹುದ್ದೆ 
ಉಡುಪಿ01 ಹುದ್ದೆ 
  
ಒಟ್ಟು19 ಹುದ್ದೆಗಳು 

 

ಆಯ್ಕೆಯ ಸ್ಥಳ :

  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕವು ಸೇರಿದಂತೆ ಭಾರತದ ವಿವಿಧಡೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.

 

ವೇತನದ ವಿವರಗಳು: 

  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಎಕ್ಸಿಕುಟಿವ್ ಹುದ್ದೆಗೆ ಮಾಸಿಕವಾಗಿ ಕಡಿತಗಳು ಮತ್ತು ಭ್ಯತೆಗಳು ಸೇರಿದಂತೆ ತಿಂಗಳಿಗೆ ರೂ. 30,000/- ನಿಗಡಿಮಾಡಲಾಗಿದೆ.

ವೇತನದ ಬಗ್ಗೆ ಹೆಚ್ಚಿನ ಮಾಹಿತಿ 

  • IT ಕಾಯ್ದೆಯ ಪ್ರಕಾರದಲ್ಲಿ ತೆರಿಗೆ ಕಡಿತ ಇರುತ್ತದೆ.
  • ಪ್ರೊತ್ಸಾಹಕಗಳ ಧನವನ್ನು ವಾರ್ಷಿಕವಾಗಿ ಹೆಚ್ಚಳ ಮಾಡಲಾಗುತ್ತದೆ.
  • ಅಭ್ಯರ್ಥಿಗಳಿಗೆ ತಿಂಗಳ ವೇತನ ಹೊರತುಪಡಿಸಿ ಮತ್ಯಾವುದೇ ವೇತನ ಅಂದರೆ HA, DRA, BONUS ಪಾವತಿ ಮಾಡಲಾಗುವುದಿಲ್ಲ ಎಂದು IPPB ಬ್ಯಾಂಕ್ ತಿಳಿಸಲಾಗಿದೆ

 

ಶೈಕ್ಷಣಿಕ ಅರ್ಹತಾ ವಿವರಗಳು:

  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 29-ಅಕ್ಟೋಬರ್-2025ಕ್ಕೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.

ಮುಖ್ಯ ಸೂಚನೆ

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯಕ್ಕೆ ಶಿಸ್ತು ಪ್ರಕರಣ ಬಾಕಿ ಇರುವಂತಿಲ್ಲ ಹಾಗೂ ಶಿಕ್ಷೆ ಯನ್ನು ಅನುಭವಿಸುತ್ತಿರುವಂತಿಲ್ಲ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು.

 

IPPB ನ ಜೊತೆ ಅಗ್ರೀಮೆಂಟ್ ನ ಅವಧಿ

  • ಆಯ್ಕೆಯಾದ ನಂತರದಲ್ಲಿ ಒಂದು ವರ್ಷದ ಅವಧಿಯಾಗಿದೆ. ಅಭ್ಯರ್ಥಿಗಳ ಕಾರ್ಯ ಕ್ಷಮತೆಯ ಆಧಾರದ ಮೇಲೆ 02 ವರ್ಷಗಳ ಅವಧಿಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಆರು ತಿಂಗಳಿಗೆ  ಒಮ್ಮೆ ಕಾರ್ಯ ಕ್ಷಮತೆಯನ್ನು ಪರಿಗಣನೆ ಮಾಡಲಾಗುತ್ತದೆ.

 

ಕೆಲಸ ಜವಾಬ್ದಾರಿಗಳು 

  • ಬ್ಯಾಂಕ್ ನ ಉತ್ಪನ್ನಗಳನ್ನು ಮಾರಾಟ ಮಾಡಬೇಕು.
  • ಬ್ಯಾಂಕ್ ನ ಸೇವೆಗಳು ಮತ್ತು ನ ಉತ್ಪನ್ನಗಳ ಕುರಿತು ಶಿಕ್ಷಣ ಹಾಗೂ ತರಬೇತಿ ನಡೆಸಬೇಕು.
  • ಬ್ಯಾಂಕ್ ನ ಉತ್ಪನ್ನಗಳ ಬಗ್ಗೆ ಪ್ರಚಾರಗಳನ್ನು ಕೈಗೊಳ್ಳಬೇಕು ಮತ್ತು ಎಲ್ಲಾ ಚಾನೆಲ್ ಗಳ ಕಾರ್ಯತಂತ್ರದ ಸಂಬಂದವನ್ನು ನಿರ್ವಹಿಸುವುದು.
  • IPPB ಅಧಿಕಾರಿಗಳಿಗೆ ಸಹಾಯ ಮಾಡುವುದು.
  • ಬ್ಯಾಂಕ್ ಇತರ ಕರ್ತವ್ಯಗಳಲ್ಲಿ  ತೊಡಗಿಕೊಳ್ಳಬೇಕು.

 

ವಯಸ್ಸಿನ ಪರಿಮಿತಿ:

  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 01-ಆಗಸ್ಟ್-2025ಕ್ಕೆ ಬ್ಯಾಂಕ್ ನ ಆಯ್ಕೆ ರೀತ್ಯಾ ಕನಿಷ್ಠ 20 ವರ್ಷಗಳು ಹಾಗೂ ಗರಿಷ್ಠ 35 ವರ್ಷಗಳು ವಯೋಮಿತಿ ಮೀರಿರಬಾರದು.

 

ಅರ್ಜಿ ಶುಲ್ಕದ ವಿವರಗಳು:

  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ. 750/- ಗಳನ್ನು ಪಾವತಿಸಬೇಕು.
  • ಮುಖ್ಯ ಸೂಚನೆ – ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

 

ಆಯ್ಕೆಯ ವಿಧಾನ: 

  • ಮೆರಿಟ್ ಆಯ್ಕೆ ಪಟ್ಟಿ – ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರವಾಗಿ ಶಾರ್ಟ್ ಲಿಸ್ಟ್ ಮಾಡುತ್ತಾರೆ.
  • ಆನ್ಲೈನ್ ಪರೀಕ್ಷೆ – ಅಗತ್ಯ ವಿದ್ದರೆ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ.
  • ಶಾರ್ಟ್ ಲಿಸ್ಟ್ ನಲ್ಲಿ ಅಥವಾ ಆನ್ಲೈನ್ ಪರೀಕ್ಷೆಯಲ್ಲಿ ಸಮಾನತೆ ಉಂಟಾದರೆ ಜನ್ಮ ದಿನಾಂಕ ಹಾಗೂ ಸಿಬ್ಬಂದಿ ಸೇವಾ ಅವಧಿಯಾ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
  • ಕೊನೆಯದಾಗಿ ಮೆರಿಟ್ ಪಟ್ಟಿಯನ್ನು IPPS ವೆಬ್ ಸೈಟ್ನಲ್ಲಿ ಮಾತ್ರ ಪ್ರಕಟಿಸುತ್ತಾರೆ

 

IPPB JOBS 2025 ಗೆ ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://ippbonline.bank.in ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಮೊದಲನೆಯದಾಗಿ ಅಭ್ಯರ್ಥಿಗಳು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಯನ್ನು ನೋಂದಾಯಿಸಿಕೊಳ್ಳಿ  
  • ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿಕೊಳ್ಳಿ.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ 🗓️ 09-10-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ 🗓️ 29-10-2025
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://ippbonline.bank.in/

 

IPPB JOBS
IPPB JOBS

FAQ ಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕೆಳಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1: ಎಕ್ಸಿಕುಟಿವ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 29-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 348 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ 19 ಹುದ್ದೆಗಳಿವೆ.

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 4: ಕರ್ನಾಟಕವು ಸೇರಿದಂತೆ ಭಾರತಾದ್ಯಾಂತ ವಿವಿಧಡೆಯಲ್ಲಿ ಅಥವಾ ಅಭ್ಯರ್ಥಿಗಳು ಆಯ್ಕೆಯಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸಬೇಕು. 

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಧಿಕೃತ ನೇಮಕಾತಿ ನಿಯಮಗಳ ಪ್ರಕಾರ, ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಎಸ್ಸಿ, ಎಸ್ಟಿ, ಪ್ರವರ್ಗ-1, ಹಿಂದುಳಿದ ವರ್ಗಗಳು, ಸಾಮಾನ್ಯ ಅಭ್ಯರ್ಥಿಗಳಿಗೆ ಅಥವಾ ಎಲ್ಲಾ ಅಭ್ಯರ್ಥಿಗಳು ರೂ. 750/- ಗಳನ್ನು ಪಾವತಿಸಬೇಕು.

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ ಸೈಟ್‌ ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ

ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 8: ಮೆರಿಟ್ ಆಯ್ಕೆ ಪಟ್ಟಿ, ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರವಾಗಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. 

 

Leave a Comment