ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `Shivamogga Jobs’ – ಕರ್ನಾಟಕದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಶಿವಮೊಗ್ಗ (SHIMUL) ಸಂಸ್ಥೆಯು ಹೊಸ ತಿದ್ದುಪಡಿ ಮಾಡಿದ ನೇರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ತಿದ್ದುಪಡಿ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 29-ಸೆಪ್ಟೆಂಬರ್-2025 ರೊಳಗಾಗಿ ನಿಗದಿಪಡಿಸಿದ SHIMUL ಅಧಿಕೃತ ವೆಬ್ ಸೈಟ್ ಆದ https://www.shimul.coop ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
SHIMUL ನಲ್ಲಿ ಈ ಹಿಂದೆ ಅಂದರೆ ದಿನಾಂಕ: 31-01-2023 ರಂದು ಖಾಲಿ ಇರುವ ಒಟ್ಟು 194 ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆದರೆ ಕೆಲವು ಹುದ್ದೆಗಳು ಕರ್ನಾಟಕ ಸಹಕಾರ ಸಂಘಗಳ ನಿಯಾಮ 1960 ರ ನಿಯಮ 17 ಮತ್ತು 18 ರ ಅವಕಾಶಗಳಿಗೆ ವಿರುದ್ದವಾಗಿರುವದರಿಂದ ರದ್ದಾದ ಕಾರಣ ಅದರಲ್ಲಿ 27 ಹುದ್ದೆಗಳಿಗೆ ಪರಿಷ್ಕೃತ ನೇಮಕಾತಿ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಅರ್ಹತೆ ಇರುವ ಅಭ್ಯರ್ಥಿಗಳಾಗಿದ್ದಲ್ಲಿ ಪರಿಷ್ಕೃತ ಪ್ರಕ್ರಿಯೆಯ ಅಡಿಯಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
Shivamogga Job 2025 (SHIMUL) ಉದ್ಯೋಗ ಮಾಹಿತಿ
`ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ’, ಶಿವಮೊಗ್ಗ (SHIMUL) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಹೊಸ ತಿದ್ದುಪಡಿ ಮಾಡಿದ ನೇರ ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 27 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, ಪದವಿ, ಬಿಎಸ್ಸಿ ಜೊತೆಗೆ ಕೆಲಸಕ್ಕೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು. ನೇರ ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) | 3 ಹುದ್ದೆಗಳು |
| ವಿಸ್ತರಣಾಧಿಕಾರಿ ದರ್ಜೆ -III | 5 ಹುದ್ದೆಗಳು |
| ಕೆಮಿಸ್ಟ್ ದರ್ಜೆ -II (ಕೆಮಿಸ್ಟ್ರಿ) | 4 ಹುದ್ದೆಗಳು |
| ಕೆಮಿಸ್ಟ್ ದರ್ಜೆ -II (ಮೈಕ್ರೋ ಬಯಲಾಜಿ) | 2 ಹುದ್ದೆಗಳು |
| ಕಿರಿಯ ಸಿಸ್ಟಂ ಆಪರೇಟರ್ | 3 ಹುದ್ದೆಗಳು |
| ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) | 5 ಹುದ್ದೆಗಳು |
| ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಮ್. ಆರ್. ಎ. ಸಿ.) | 2 ಹುದ್ದೆಗಳು |
| ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) | 3 ಹುದ್ದೆಗಳು |
| ಒಟ್ಟು | 27 ಹುದ್ದೆಗಳು |
ಆಯ್ಕೆಯ ಸ್ಥಳ:
- `ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ’, ಶಿವಮೊಗ್ಗ (SHIMUL) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕೇಂದ್ರ ಕಚೇರಿ ಅಥವಾ ಸಂಬಂದಿಸಿರುವ ಯಾವುದೇ ಶಾಖೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು: `
- ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ (SHIMUL) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.
| ಹುದ್ದೆಯ ಹೆಸರು | ವೇತನ |
| ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) | ರೂ. 83,700/- – 1,55,200/- ಗಳು |
| ವಿಸ್ತರಣಾಧಿಕಾರಿ ದರ್ಜೆ -III | ರೂ. 54,175/- 99,400/- ಗಳು |
| ಕೆಮಿಸ್ಟ್ ದರ್ಜೆ -II (ಕೆಮಿಸ್ಟ್ರಿ) | ರೂ. 44,425/- 83,700/- ಗಳು |
| ಕೆಮಿಸ್ಟ್ ದರ್ಜೆ -II (ಮೈಕ್ರೋ ಬಯಲಾಜಿ) | ರೂ. 44,425/- 83,700/- ಗಳು |
| ಕಿರಿಯ ಸಿಸ್ಟಂ ಆಪರೇಟರ್ | ರೂ. 44,425/- 83,700/- ಗಳು |
| ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) | ರೂ. 34,100/- 67,600/- ಗಳು |
| ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಮ್. ಆರ್. ಎ. ಸಿ.) | ರೂ. 34,100/- 67,600/- ಗಳು |
| ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) | ರೂ. 34,100/- 67,600/- ಗಳು |
ಶೈಕ್ಷಣಿಕ ಅರ್ಹತಾ ವಿವರಗಳು:
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ (SHIMUL) ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 29-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕೃಷಿ) ಪದವಿಯನ್ನು ಹೊಂದಿರಬೇಕು.
ವಿಸ್ತರಣಾಧಿಕಾರಿ ದರ್ಜೆ -III ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಯಾವುದೇ ಪದವಿ.
- ಕಂಪ್ಯೂಟರ್ ನಿರ್ವಹಣೆಯಲ್ಲಿ ಜ್ಞಾನದ ಅಗತ್ಯವಿದೆ.
ಕೆಮಿಸ್ಟ್ ದರ್ಜೆ -II (ಕೆಮಿಸ್ಟ್ರಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ, ಅದರಲ್ಲಿ ಕೆಮಿಸ್ಟ್ರಿ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು.
- ಕಂಪ್ಯೂಟರ್ ನಿರ್ವಹಣೆಯಲ್ಲಿ ಜ್ಞಾನದ ಅಗತ್ಯವಿದೆ.
ಕೆಮಿಸ್ಟ್ ದರ್ಜೆ -II (ಮೈಕ್ರೋ ಬಯಲಾಜಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ, ಅದರಲ್ಲಿ ಮೈಕ್ರೋ ಬಯಲಾಜಿ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು.
- ಕಂಪ್ಯೂಟರ್ ನಿರ್ವಹಣೆಯಲ್ಲಿ ಜ್ಞಾನದ ಅಗತ್ಯವಿದೆ.
ಕಿರಿಯ ಸಿಸ್ಟಂ ಆಪರೇಟರ್ ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಯಾವುದೇ ಪದವಿ.
- ಒಂದು ವರ್ಷದ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಜೊತೆಗೆ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) ಹುದ್ದೆಗೆ :
- 10 ನೇ ತರಗತಿಯೊಂದಿಗೆ ಎಲೆಕ್ಟ್ರಿಕಲ್ ಟ್ರೇಡ್ ನಲ್ಲಿ NCT ಅಥವಾ NCVT ಪ್ರಮಾಣ ಪತ್ರ ಹೊಂದಿರಬೇಕು.
ರಿಯ ತಾಂತ್ರಿಕರು ರೆಫ್ರಿಜರೇಷನ್ (ಎಮ್. ಆರ್. ಎ. ಸಿ.) ಹುದ್ದೆಗೆ :
- 10 ನೇ ತರಗತಿಯೊಂದಿಗೆ ರೆಫ್ರಿಜರೇಷನ್ ಟ್ರೇಡ್ ನಲ್ಲಿ NCT ಅಥವಾ NCVT ಪ್ರಮಾಣ ಪತ್ರ ಹೊಂದಿರಬೇಕು.
ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) ಹುದ್ದೆಗೆ :
- 10 ನೇ ತರಗತಿಯೊಂದಿಗೆ ಬಾಯ್ಲರ್ ಅಟೆಂಡರ್ ಗ್ರೇಡ್ -1 ಅಥವಾ ಗ್ರೇಡ್ -2 ನಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.
ವಯಸ್ಸಿನ ಪರಿಮಿತಿ:
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ (SHIMUL) ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 29-ಸೆಪ್ಟೆಂಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.
- ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 40 ವರ್ಷ ಮೀರಿರಬಾರದು
- ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 38 ವರ್ಷ ಮೀರಿರಬಾರದು
- ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 35 ವರ್ಷ ಮೀರಿರಬಾರದು
🔶 ವಯೋಮಿತಿ ಸಡಲಿಕೆ
- ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷಗಳು
- ವಿಧವೆಯರು – 10 ವರ್ಷಗಳು
- ಮಾಜಿ ಸೈನಿಕರಿಗೆ – ಸೇವೆ ಸಲ್ಲಿಸಿದ ಅವಧಿ
ಅರ್ಜಿ ಶುಲ್ಕದ ವಿವರಗಳು:
| ಹುದ್ದೆಯ ಹೆಸರು | ಅರ್ಜಿ ಶುಲ್ಕ |
| ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ಅಂಗವಿಕಲಕ್ಕೆ ಸೇರಿರುವ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 500/- ಗಳು + ಬ್ಯಾಂಕ್ ಶುಲ್ಕ |
| ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ ಹಾಗೂ ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 1,000/- ಗಳು + ಬ್ಯಾಂಕ್ ಶುಲ್ಕ |
ಆಯ್ಕೆಯ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನಕ್ಕೆ 15 ಅಂಕಗಳು ಇರುತ್ತವೆ)
ಲಿಖಿತ ಪರೀಕ್ಷೆಯ ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ.
- ಕನ್ನಡ ಭಾಷೆಗೆ 50 ಅಂಕಗಳು
- ಸಾಮಾನ್ಯ ಇಂಗ್ಲೀಷ್ 25 ಅಂಕಗಳು
- ಸಾಮಾನ್ಯ ಜ್ಞಾನ 25 ಅಂಕಗಳು
- ಸಹಕಾರಿ ವಿಷಯಗಳಿಗಾಗಿ 50 ಅಂಕಗಳು
- ಭಾರತದ ಸಂವಿಧಾನ 25 ಅಂಕಗಳು
- ಚಟುವಟಿಕೆಗಳು ಮತ್ತು ವಸ್ತುನಿಷ್ಠೆ ವಿಷಯ ವಸ್ತುಗಳು 25 ಅಂಕಗಳು
Shivamogga Jobs 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ” ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ (SHIMUL) “ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://virtualofficeerp.com/shimul_2025/instruction ವೆಬ್ ಸೈಟ್ಗೆ ಭೇಟಿ ನೀಡಿ.
- ಅರ್ಜಿ ಹಾಕಲು ಬಯಸಿರುವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ.
- ನಂತರದಲ್ಲಿ ವಿದ್ಯಾರ್ಹತೆ, ಸೇವಾ ಅನುಭವ ಹಾಗೂ ಹುದ್ದೆಗೆ ಸಂಬಂದಿಸಿರುವ ಎಲ್ಲಾ ವಿವರಗಳನ್ನು ಸಲ್ಲಿಸಿ.
- ಪಾಸ್ಪೋರ್ಟ್ ಗಾತ್ರದ ಸಹಿ ಇರುವ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ, ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ.
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 29-08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 29-09-2025 |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು | 👉🏻 ಇಲ್ಲಿ ಕ್ಲಿಕ್ ಮಾಡಿ |
| ನೇಮಕಾತಿ ವೆಬ್ಸೈಟ್ ವಿಳಾಸ : https://www.shimul.coop | |

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ `ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಶಿವಮೊಗ್ಗ (SHIMUL) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: “SHIMUL’’ ನಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1: ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್), ವಿಸ್ತರಣಾಧಿಕಾರಿ ದರ್ಜೆ -III, ಕೆಮಿಸ್ಟ್ ದರ್ಜೆ -II (ಕೆಮಿಸ್ಟ್ರಿ), ಕೆಮಿಸ್ಟ್ ದರ್ಜೆ -II (ಮೈಕ್ರೋ ಬಯಲಾಜಿ), ಕಿರಿಯ ಸಿಸ್ಟಂ ಆಪರೇಟರ್, ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್), ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಮ್. ಆರ್. ಎ. ಸಿ.), ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2: SHIMUL 2025 ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 29-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಒಟ್ಟು 27 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ
ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ ಇದೆ?
ಉತ್ತರ 4: ಕರ್ನಾಟಕ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಕೇಂದ್ರ ಕಚೇರಿ ಅಥವಾ ಸಂಬಂದಿಸಿರುವ ಯಾವುದೇ ಶಾಖೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5: SHIMU ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವಂತೆ 10ನೇ ತರಗತಿ, ಪದವಿ, ಬಿ.ಎಸ್ಸಿ. ಹಾಗೂ ಕೆಲಸದ ಅನುಭವ ಹೊಂದಿರಬೇಕು.
ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?
ಉತ್ತರ 6: ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ಅಂಗವಿಕಲಕ್ಕೆ ಸೇರಿರುವ ಅಭ್ಯರ್ಥಿಗಳಿಗೆ-ಅರ್ಜಿ ಶುಲ್ಕ ರೂ. 500/- ಗಳು + ಬ್ಯಾಂಕ್ ಶುಲ್ಕ ಮತ್ತು ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,000/- ಗಳು + ಬ್ಯಾಂಕ್ ಶುಲ್ಕ.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

