Jobnews4u

NAVALAGI Jobs – ಕೃಷಿ ಪತ್ತಿನ ಸಹಕಾರಿ ಸಂಘ, ನಾವಲಗಿಯಲ್ಲಿ ನೇರ ನೇಮಕಾತಿ, ಬೇಗ ಅರ್ಜಿ sallisi

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, NAVALAGI Jobs 2025: `ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ‘ ಯಲ್ಲಿ ಸಿಬ್ಬಂದಿಗಳ ನೇರ ನೇಮಕಾತಿಗಾಗಿ ಅಧಿಕೃತವಾಗಿ `ಜಾಬ್ ನೋಟಿಫಿಕೇಷನ್’ ಬಿಡುಗಡೆಮಾಡಲಾಗಿದೆ. ಕರ್ನಾಟಕದ ನಾವಲಗಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 21-ನವಂಬರ್-2025 ರಂದು ಅಥವಾ ಆದರೊಳಗಾಗಿ ಅಧಿಕೃತ ವಿಳಾಸಕ್ಕೆ ಆಫ್ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

 

NAVALAGI Jobs ನೇಮಕಾತಿ 2025 ಉದ್ಯೋಗ ಮಾಹಿತಿ

`ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ’ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಕ್ಲರ್ಕ್, ಸೇಲ್ಸಮೆನ್ ಮತ್ತು ಸಿಪಾಯಿ ಹುದ್ದೆಗಳಿಗೆ ಒಟ್ಟು 03 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ, 10ನೇ ತರಗತಿಯನ್ನು ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇರ ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಕ್ಲರ್ಕ್01 ಹುದ್ದೆ
ಸೇಲ್ಸಮೆನ್01 ಹುದ್ದೆ
ಸಿಪಾಯಿ01 ಹುದ್ದೆ
ಒಟ್ಟು 03 ಹುದ್ದೆಗಳು 

 

ಆಯ್ಕೆಯ ಸ್ಥಳ:

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿಯ ಅಧಿಕೃತ ನೇಮಕಾತಿಯ ಆಯ್ಕೆಯ ಪ್ರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ತಾII ರಬಕವಿ ಬನಹಟ್ಟಿ ಜಿII ಬಾಗಲಕೋಟೆ ಶಾಖೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. 

 

ವೇತನದ ವಿವರಗಳು:

`ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ’ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.

ಹುದ್ದೆಯ ಹೆಸರುವೇತನ
ಕ್ಲರ್ಕ್ರೂ. 44,425-83,700/- ಗಳು
ಸೇಲ್ಸಮೆನ್ರೂ. 29,600-52,800/- ಗಳು
ಸಿಪಾಯಿರೂ. 27,000-46,675/- ಗಳು

 

ಶೈಕ್ಷಣಿಕ ಅರ್ಹತಾ ವಿವರಗಳು:

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 21-ನವಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

ಕ್ಲರ್ಕ್ ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು.
  • ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಜ್ಞಾನ ಹೊಂದಿರಬೇಕು ಮತ್ತು ಸರ್ಟಿಫಿಕೇಟ್ ಹೊಂದಿರಬೇಕು. 

 

ಸೇಲ್ಸಮೆನ್ ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. 

 

ಸಿಪಾಯಿ ಹುದ್ದೆಗೆ :

  • 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು. ಕನ್ನಡವನ್ನು ಓದಲು, ಬರೆಯಲು, ಸ್ಪಷ್ಟ ವಾಗಿ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳುವವರಾಗಿರಬೇಕು. 

 

ವಯಸ್ಸಿನ ಪರಿಮಿತಿ:

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ 2025 ನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21-ನವಂಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

  • ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 40 ವರ್ಷ ಮೀರಿರಬಾರದು
  • ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 38 ವರ್ಷ ಮೀರಿರಬಾರದು
  • ಸಾಮನ್ಯ ವರ್ಗದ  ಅಭ್ಯರ್ಥಿಗಳಿಗೆ –  ಕನಿಷ್ಠ 18 ವರ್ಷಗಳಿಂದ ಗರಿಷ್ಟ 35 ವರ್ಷ ಮೀರಿರಬಾರದು

 

ಅರ್ಜಿ ಶುಲ್ಕದ ವಿವರಗಳು:

  • ಸಾಮನ್ಯ ವರ್ಗದ  ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,000/- ಗಳು
  • ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,000/- ಗಳು
  • ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 500/- ಗಳು

 

NAVALAGI Jobs 2025 ಆಯ್ಕೆಯ ವಿಧಾನ: 

  • ಅರ್ಹತಾ ಪರೀಕ್ಷೆ
  • ಸಂದರ್ಶನ
  • ನೋಟ್ :  ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಅನುಸಾರ 1:5 ಅನುಪಾತದಲ್ಲಿ  ಅರ್ಹತೆ ಇರುವ ಅಭ್ಯರ್ಥಿಗಳಿಗೆ ನಂತರದಲ್ಲಿ ಸಂದರ್ಶನವನ್ನು ನಡೆಸಲಾಗುವುದು.

 

ಅಗತ್ಯ ಮಾಹಿತಿಗಳು : 

  1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವದಾದರೆ ಪ್ರತ್ಯೇಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  2. ಎಲ್ಲ ವರ್ಷಗಳ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರಗಳಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿರಬೇಕು. 
  3. ಸರಿಯಾಗಿ ಭರ್ತಿ ಮಾಡದ, ಭಾವಚಿತ್ರವಿರದ ಅರ್ಜಿ, ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸದ ಪ್ರಮಾಣ ಪತ್ರಗಳು ಇರದ ಅರ್ಜಿ, ಜಾತಿ ಪ್ರಮಾಣ ಪತ್ರ ಇರದ ಅರ್ಜಿ, ಅರ್ಜಿ ಶುಲ್ಕವಿಲ್ಲದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. 
  4. ನಿಗಡಿಪಡಿಸಿರುವ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅರ್ಜಿ ಶುಲ್ಕವನ್ನು ಹಿಂದಿರುಗುಸುವುದಿಲ್ಲ. 
  5. ಅರ್ಜಿ ನಮೂನೆಯನ್ನು ಸಂಘದ ಮುಖ್ಯ ಕಚೇರಿಯಲ್ಲಿ ರೂ. 100/- ಪಾವತಿಸಿ ಪಡೆಯಬೇಕು. 
  6. ನೇಮಕಾತಿಯನ್ನು ಯಾವುದೇ ಸಮಯದಲ್ಲಿ ರದ್ದು ಮಾಡುವ ಹಕ್ಕನ್ನು ಸಮಿತಿಗೆ ಇರುತ್ತದೆ.

 

NAVALAGI Jobs 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ನೇಮಕಾತಿ 2025 https://currentaffairstest.com/wp-content/uploads/2025/11/Primary-Agricultural-Credit-Society-Bagalkot.pdf ವೆಬ್‌ ಸೈಟ್‌ಗೆ ಭೇಟಿ ನೀಡಿ ನಂತರ ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • ಅರ್ಜಿಯನ್ನು ಆಫ್ ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.  
  • ಮೊದಲನೆಯದಾಗಿ ಡಿಡಿಯನ್ನು ತೆಗೆಸಬೇಕಾಗುತ್ತದೆ. “ಮುಖ್ಯ ಕಾರ್ಯನಿರ್ವಾಹಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ತಾII ರಬಕವಿ ಬನಹಟ್ಟಿ ಜಿII ಬಾಗಲಕೋಟೆ” ಸ್ಥಳದಲ್ಲಿ  ಸಂದಾಯವಾಗುವಂತೆ ಡಿಡಿಯನ್ನು ಪಡೆಯಬೇಕು.
  • ಅರ್ಜಿ ನಮೂನೆಯನ್ನು ಸಂಘದ ಮುಖ್ಯ ಕಚೇರಿಯಲ್ಲಿ ರೂ. 100/- ಪಾವತಿಸಿ ಪಡೆಯಬೇಕು
  • ಅರ್ಜಿಯ ನಮೂನೆಯಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಭಾವಚಿತ್ರವನ್ನು ಅರ್ಜಿಯ ಮೇಲ್ಬಾಗದಲ್ಲಿ ಅಂಟಿಸಬೇಕು.  
  • ನಂತರದಲ್ಲಿ ವಿದ್ಯಾರ್ಹತೆ ಸಂಬಂದಿಸಿರುವ ದೃಢೀಕರಿಸಿರುವ 10ನೇ ತರಗತಿ, ಪದವಿ ಪ್ರಮಾಣ ಪತ್ರಗಳ ಪ್ರತಿ, ಜಾತಿ ಪ್ರಮಾಣ ಪತ್ರಗಳ ಪ್ರತಿಗಳು, ಕಂಪ್ಯೂಟರ್ ನ ಪ್ರಮಾಣ ಪ್ರತಿ, ಡಿಡಿಯನ್ನು ಮುಚ್ಚಿರುವ ಲಕೋಟೆಯಲ್ಲಿ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ತಾII ರಬಕವಿ ಬನಹಟ್ಟಿ ಜಿII ಬಾಗಲಕೋಟೆ ಪಿನ್ ಕೋಡ್ : 587311” ವಿಳಾಸಕ್ಕೆ ದಿನಾಂಕ 21-11-2025 ರ ಸಂಜೆ 5-00 ಗಂಟೆಯ ಒಳಗಡೆ ಅಂಚೆಯ ಮೂಲಕ ಅಥವಾ ಅರ್ಜಿದಾರರೆ ಸ್ವತಃ ಬಂದು ತಲುಪಿಸಬಹುದು.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಘದವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ. 

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ  🗓️ 29 -10-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ 🗓️ 21-11-2025 ಸಂಜೆ 5.00 ಗಂಟೆವರೆಗೆ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ

 

NAVALAGI JOBS
NAVALAGI JOBS

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ `ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ’ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: `ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ’’ ಯಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1:  ಕ್ಲರ್ಕ್, ಸೇಲ್ಸಮೆನ್, ಸಿಪಾಯಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 21-ನವೆಂಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಕ್ಲರ್ಕ್ 01 ಹುದ್ದೆ, ಸೇಲ್ಸಮೆನ್ 01 ಹುದ್ದೆ, ಸಿಪಾಯಿ 01 ಹುದ್ದೆ ಒಟ್ಟು 03 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ ಇದೆ?

ಉತ್ತರ 4: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ತಾII ರಬಕವಿ ಬನಹಟ್ಟಿ ಜಿII ಬಾಗಲಕೋಟೆ ಉದ್ಯೋಗದ ಸ್ಥಳವಾಗಿದೆ. 

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ನಾವಲಗಿ ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವಂತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು 10ನೇ ತರಗತಿ ಉತ್ತೀರ್ಣರಾಗಿರಬೇಕು. 

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ. 500/- ಗಳು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 1,000/- ಗಳನ್ನು ನಿಗಡಿಪಡಿಸಲಾಗಿದೆ . 

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿಯನ್ನು ಆಫ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 8: ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಅನುಸಾರ 1:5 ಅನುಪಾತದಲ್ಲಿ  ಅರ್ಹತೆ ಇರುವ ಅಭ್ಯರ್ಥಿಗಳಿಗೆ ನಂತರದಲ್ಲಿ ಸಂದರ್ಶನವನ್ನು ನಡೆಸಲಾಗುವುದು.

 

Leave a Comment