ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, ‘MGNREGA JOBS’ ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಕಟನೆಯನ್ನು ಹೊರಡಿಸಲಾಗಿದೆ. ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಮನಿಶ್ ಮ್ಯಾನ್ ಪವರ್ ಏಜೆನ್ಸಿ, ಕಲಬುರ್ಗಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 24-ಡಿಸೆಂಬರ್-2025ರ ಒಳಗಾಗಿ ಅಧಿಕೃತ ವೆಬ್ಸೈಟ್ ಆದ http://zpraichur.karnataka.gov.in ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
MGNREGA JOBS 2025 ಉದ್ಯೋಗ ಮಾಹಿತಿ
ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 09 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಸಿವಿಲ್ ಇಂಜಿನಿಯರ್, ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿಗಾಗಿ ಹೋರಾಡಿಸಲಾದ ಹುದ್ದೆಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ಕಾಣಬಹುದು.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ತಾಂತ್ರಿಕ ಸಂಯೋಜಕರು | 02 ಹುದ್ದೆಗಳು |
| ತಾಲೂಕು ಎಂ.ಐ.ಎಸ್. ಸಂಯೋಜಕರು | 02 ಹುದ್ದೆಗಳು |
| ಆಡಳಿತ ಸಹಾಯಕರು | 03 ಹುದ್ದೆಗಳು |
| ಗಣಕಯಂತ್ರ ನಿರ್ವಾಹಕರು | 02 ಹುದ್ದೆಗಳು |
| ಒಟ್ಟು | 09 ಹುದ್ದೆಗಳು |
ಆಯ್ಕೆಯ ಸ್ಥಳ :
- ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು :
- ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಹುದ್ದೆಗಳ ಅನುಸಾರ ಕೆಳಗೆ ನೀಡಲಾಗಿದೆ. ಈ ಹುದ್ದೆಗಳು ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಇರುವ ಕಾರಣ ಫಿಕ್ಸೆಡ್ ಸ್ಯಾಲರಿ ಮತ್ತು ಭತ್ಯೆಯನ್ನು ನಿಗಡಿಮಾಡಲಾಗಿದೆ.
| ಹುದ್ದೆಯ ಹೆಸರು | ಮಾಸಿಕ ಸಂಬಳ |
| ತಾಂತ್ರಿಕ ಸಂಯೋಜಕರು | ರೂ. 33,000/- ಗಳು |
| ತಾಲೂಕು ಎಂ.ಐ.ಎಸ್. ಸಂಯೋಜಕರು | ರೂ. 28,000/- ಗಳು |
| ಆಡಳಿತ ಸಹಾಯಕರು | ರೂ. 22,000/- ಗಳು |
| ಗಣಕಯಂತ್ರ ನಿರ್ವಾಹಕರು | ರೂ. 18,420/- ಗಳು |
ಶೈಕ್ಷಣಿಕ ಅರ್ಹತಾ ವಿವರಗಳು :
- ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 24-ಡಿಸೆಂಬರ್-2025 ಕ್ಕೆ ಕೆಳಗೆ ವಿವರಿಸಲಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ತಾಂತ್ರಿಕ ಸಂಯೋಜಕರು ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ. ಅಥವಾ ಬಿ. ಟೆಕ್. ಅನ್ನು ಪೂರ್ಣಗೊಳಿಸಿರಬೇಕು.
ತಾಲೂಕು ಎಂ.ಐ.ಎಸ್. ಸಂಯೋಜಕರು ಹುದ್ದೆಗೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ. ಅಥವಾ ಬಿ. ಟೆಕ್. ನಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ ಅಥವಾ ಇನ್ಫರ್ಮೇಷನ್ ಸೈನ್ಸ್ ವಿದ್ಯಾರ್ಹತೆ ಅಥವಾ ಬಿಸಿಎ ಅಥವಾ ಬಿಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು.
ಆಡಳಿತ ಸಹಾಯಕರು ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಕಾಮರ್ಸ್ ಪದವಿಯನ್ನು ಹೊಂದಿರಬೇಕು.
- ಮತ್ತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು.
ಗಣಕಯಂತ್ರ ನಿರ್ವಾಹಕರು ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಕಾಮರ್ಸ್ ಪದವಿಯನ್ನು ಹೊಂದಿರಬೇಕು ಮತ್ತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು
ವಯಸ್ಸಿನ ಪರಿಮಿತಿ:
- ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಹುದ್ದೆಗಳಿಗೆ 24-ಡಿಸೆಂಬರ್-2025 ಕ್ಕೆ 40 ವರ್ಷ ವಯೋಮಿತಿ ನಿಗಡಿಮಾಡಲಾಗಿದೆ.
ಅರ್ಜಿ ಶುಲ್ಕದ ವಿವರಗಳು:
- ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆಯ ವಿಧಾನ:
- ಮೆರಿಟ್ ಪಟ್ಟಿಯ ವಿಧಾನದಲ್ಲಿ ನೇಮಕಾತಿ ನೇಮಕ ಮಾಡಿಕೊಳ್ಳುತ್ತಾರೆ.
- ನೇಮಕಾತಿಯ ವಿಧಾನವು ಅಂಕಗಳ ವರ್ಗೀಕರಣದಲ್ಲಿ ನಡೆಯುತ್ತದೆ. ಎಲ್ಲ ಹುದ್ದೆಗಳಿಗೆ ಸಹ ಕನಿಷ್ಠ ವಿದ್ಯಾರ್ಹತೆಗೆ 100 ಅಂಕಗಳು, ಸ್ನಾತಕೋತ್ತರ ಪದವಿಗೆ 10 ಅಂಕಗಳು, ಅನುಭವಕ್ಕೆ 10 ಅಂಕಗಳು ಒಟ್ಟು 110 ಅಂಕಗಳನ್ನು ನಿರ್ಧರಿಸಲಾಗಿದೆ.
ಹೆಚ್ಚಿನ ಮಾಹಿತಿಗಳು :
- ಮೊದಲೆನಾಯದಾಗಿ ಇದು ಖಾಯಂ ಹುದ್ದೆ ಆಗಿರುವುದಿಲ್ಲ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಮಾತ್ರ ನೇಮಕ ಮಾಡಲಾಗುತ್ತದೆ.
- ಇದಕ್ಕೂ ಮುಂಚೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ವಜಾಗೊಳಿಸಿದ, ರಾಜೀನಾಮೆ ನೀಡಿದ ಅಭ್ಯರ್ಥಿಗಳ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಿವಿರಿಸಲಾಗಿದೆ.
- ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಕೆಲಸದ ಅನುಭವದ ಬಗ್ಗೆ ಎಲ್ಲಾ ವಿವಿರಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕಾಗುತ್ತದೆ ಸರಿಯಾದ ಮಾಹಿತಿ ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
- ಈ ಹಿಂದೆ ಪಡೆಯಲಾದ ವೇತನದ ಬ್ಯಾಂಕ್ ಪ್ರತಿ ಶೀಟನ್ನು ಕಡ್ಡಾಯವಾಗಿ ಲಗತ್ತಿಸಬೇಕು.
MGNREGA JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://raichur.nic.in/en/ ವೆಬ್ ಸೈಟ್‌ಗೆ ಭೇಟಿ ನೀಡಿ.
- ಮೊದಲನೆಯದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ಕೆಳಲಾದ ವಿವಿರಗಳೊಂದಿಗೆ ಭರ್ತಿ ಮಾಡಿ.
- NOTE: ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ : 🗓️ 10-12-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ: 🗓️ 24-12-2025
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ: ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://raichur.nic.in/en/

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1 : ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1 : ತಾಂತ್ರಿಕ ಸಂಯೋಜಕರು, ತಾಲೂಕು ಎಂ.ಐ.ಎಸ್. ಸಂಯೋಜಕರು, ಆಡಳಿತ ಸಹಾಯಕರು, ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2 : ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2 : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 24-ಡಿಸೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3 : ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3 : ಒಟ್ಟು 09 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರಲ್ಲಿ ತಾಂತ್ರಿಕ ಸಂಯೋಜಕರು – 02 ಹುದ್ದೆಗಳು, ತಾಲೂಕು ಎಂ.ಐ.ಎಸ್. ಸಂಯೋಜಕರು – 02 ಹುದ್ದೆಗಳು, ಆಡಳಿತ ಸಹಾಯಕರು – 03 ಹುದ್ದೆಗಳು, ಗಣಕಯಂತ್ರ ನಿರ್ವಾಹಕರು – 02 ಹುದ್ದೆಗಳಿವೆ.
ಪ್ರಶ್ನೆ 4 : ಉದ್ಯೋಗದ ಸ್ಥಳ ಎಲ್ಲಿ ಇದೆ?
ಉತ್ತರ 4 : ಅಭ್ಯರ್ಥಿಗಳು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ಪ್ರಶ್ನೆ 5 : ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5 : ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪಿಜಿ, ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಶ್ನೆ 6 : ಅರ್ಜಿ ಶುಲ್ಕ ಎಷ್ಟು?
ಉತ್ತರ 6 : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಶ್ನೆ 7 : ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7 : ಅರ್ಜಿಯನ್ನು ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ 8 : ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8 : ಮೆರಿಟ್ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

