Jobnews4u

Mangalore Jobs: ಮಹಿಳೆಯರಿಗೆ ಅಂಗನವಾಡಿಯಲ್ಲಿ ಉದ್ಯೋಗ ಅವಕಾಶಗಳು

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `Mangalore Jobs’ ಲೇಖನವನ್ನು ಓದುವ ಮೂಲಕ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತವಾಗಿ ನೋಟಿಫಿಕೇಷನ್’ ಬಿಡುಗಡೆಮಾಡಲಾಗಿದೆ. ಕರ್ನಾಟಕದ ದಕ್ಷಿಣ ಕನ್ನಡ ಅಥವಾ ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 10-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ `https://karnemakaone.kar.nic.in/abcd ಮೂಲಕ ಆನ್‌ ಲೈನ್‌ ಅರ್ಜಿಯನ್ನು ಸಲ್ಲಿಸಬಹುದು.

Mangalore Jobs 2025 ಉದ್ಯೋಗ ಮಾಹಿತಿ

Mangalore Jobs
Mangalore Jobs

`ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಂಗಳೂರು ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಒಟ್ಟು 277 ಹುದ್ದೆಗಳು ಅದರಲ್ಲಿ 56  ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಮತ್ತು 221 ಅಂಗನವಾಡಿ ಸಹಾಯಕಿ ಹುದ್ದಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ದ್ವಿತೀಯ ಪಿ. ಯು. ಸಿ. ಮತ್ತು ಎಸ್. ಎಸ್. ಎಲ್. ಸಿ. ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ. ನೇರ ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು:

  • ಅಂಗನವಾಡಿ ಕಾರ್ಯಕರ್ತೆ
  • ಅಂಗನವಾಡಿ ಸಹಾಯಕಿ

 

ಖಾಲಿ ಇರುವ ಹುದ್ದೆಗಳ ಸಂಖ್ಯೆ:

  • ಅಂಗನವಾಡಿ ಕಾರ್ಯಕರ್ತೆ – 56 ಹುದ್ದೆಗಳು 
  • ಅಂಗನವಾಡಿ ಸಹಾಯಕಿ – 221 ಹುದ್ದೆಗಳು 

 

 ಆಯ್ಕೆಯ ಸ್ಥಳ:

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಖಾಲಿ ಹುದ್ದೆಗಳಿವೆ ಆದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಗ್ರಾಮಾಂತರ ಪ್ರದೇಶದ ಆಯಾ ಕಂದಾಯ ಗ್ರಾಮದವರಾಗಿರಬೇಕು ಮತ್ತು 3 ವರ್ಷಗಳ ಕಾಲ ವಾಸವಿರಬೇಕು. ನಗರ ಪ್ರದೇಶ ಅಭ್ಯರ್ಥಿಗಳು ಆಯಾ ಕಂದಾಯ ವಾರ್ಡ್ ನಲ್ಲಿ 3 ವರ್ಷಗಳ ಕಾಲ ವಾಸವಿರಬೇಕು. ಮಜಿರೆ, ತಾಂಡಾದವರು 3 ವರ್ಷಗಳ ಕಾಲ ವಾಸವಿರವ ಪ್ರಮಾಣ ಪತ್ರ ಹೊಂದಿರಬೇಕು.

ದಕ್ಷಿಣ ಕನ್ನಡ ತಾಲ್ಲೂಕುಗಳ ಹೆಸರುಗಳು ಕೆಳಗಿನಂತಿವೆ. 

  1. ಮಂಗಳೂರು 
  2. ಬಂಟ್ವಾಳ 
  3. ಬೆಳ್ತಂಗಡಿ 
  4. ಪುತ್ತೂರು 
  5. ಸುಲ್ಲಿಯಾ 

 

ಶೈಕ್ಷಣಿಕ ಅರ್ಹತಾ ವಿವರಗಳು:

`ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 10-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ದ್ವಿತೀಯ ಪಿ.ಯು.ಸಿ. ತರಗತಿಯನ್ನು ತೇರ್ಗಡೆ ಹೊಂದಿರಬೇಕು.
  • ಎಸ್. ಎಸ್. ಎಲ್. ಸಿ. ಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಮತ್ತು ಗಣಿತ, ಸಮಾಜ, ಸಮಾಜ ವಿಜ್ಞಾನ, ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕು. 
  • ಅಥವಾ D.S.E.R.T ಸರ್ಕಾರದಿಂದ ಮಾನ್ಯತೆ ಪಡೆದ ECCE ಡಿಪ್ಲೋಮಾ ಕೋರ್ಸ್, ಜೆಒಸಿ ಕೋರ್ಸ್, ಒಂದು ವರ್ಷದ ಡಿಪ್ಲೋಮಾ ಕೋರ್ಸ್ (ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಭೇತಿ) ಪ್ರಮಾಣ ಪತ್ರ ಹೊಂದಿರುವವರಿಗೆ ಮೊದಲ ಆದ್ಯತೆ ಮತ್ತು  +5 ಬೋನಸ್ ಅಂಕ ಕೊಡಲಾಗುವುದು. 

ಅಂಗನವಾಡಿ ಸಹಾಯಕಿ ಹುದ್ದೆಗೆ :

  • ಎಸ್. ಎಸ್. ಎಲ್. ಸಿ (10 ನೇ) ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
  • ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು.
  • ಗರಿಷ್ಠ 625 ಕ್ಕೆ ಕನಿಷ್ಠ 219 ಅಂಕಗಳು ಕೂಡ ಪರಿಗಣಿಸಲಾಗುವುದು. 

 

ವಯಸ್ಸಿನ ಪರಿಮಿತಿ:

`ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ದಿನಾಂಕ 10-ಅಕ್ಟೋಬರ್-2025ಕ್ಕೆ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

ಮಹಿಳೆಯರು ಮಾತ್ರ 

  • ಕನಿಷ್ಠ ವಯಸ್ಸಿನ ಪರಿಮಿತಿ – 19 ವರ್ಷಗಳು 
  • ಗರಿಷ್ಠ ವಯಸ್ಸಿನ ಪರಿಮಿತಿ – 35 ವರ್ಷಗಳು 
  • ಅಂಗವಿಕಲ ಅಭ್ಯರ್ಥಿಗಳಿಗೆ -10 ವರ್ಷಗಳ ಕಾಲ ಸಡಲಿಕೆ ಇರುತ್ತದೆ. 

 

ಅರ್ಜಿ ಶುಲ್ಕದ ವಿವರಗಳು:

ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. 

 

Mangalore Jobs 2025 ಆಯ್ಕೆಯ ವಿಧಾನ: 

  • ಮೆರಿಟ್ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುವುದು. 

ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ +5 ಬೋನಸ್ ಅಂಕ ಕೊಡಲಾಗುವುದು. 

ವಿಧವೆಯರಾಗಿದ್ದಲ್ಲಿ +5 ಬೋನಸ್ ಅಂಕ ಕೊಡಲಾಗುವುದು. 

ಅಂಗವಿಕಲರಾಗಿದ್ದಲ್ಲಿ ದೈಹಿಕ ಅಂಗವಿಕತೆ ಶೇಕಡಾ. 40%ಕ್ಕಿಂತ ಕಡಿಮೆ ಹೊಂದಿರಬೇಕು ಮತ್ತು +5 ಬೋನಸ್ ಅಂಕ ಕೊಡಲಾಗುವುದು. 

ವಿಚ್ಛೇದಿತ ಅಭ್ಯರ್ಥಿಗಳಾಗಿದ್ದಲ್ಲಿ +5 ಬೋನಸ್ ಅಂಕ ಕೊಡಲಾಗುವುದು. 

ಯೋಜನಾ ನಿರಾಶ್ರಿತರಾಗಿದ್ದಲ್ಲಿ +5 ಬೋನಸ್ ಅಂಕ ಕೊಡಲಾಗುವುದು. 

ಮಾಜಿ ದೇವದಾಸಿ ಮಗಳಾಗಿದ್ದಲ್ಲಿ ಗಿದ್ದಲ್ಲಿ +5 ಬೋನಸ್ ಅಂಕ ಕೊಡಲಾಗುವುದು. 

 

Mangalore Jobs 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

ಅರ್ಜಿ ಸಲ್ಲಿಸುವ ನೀವು ಮೊದಲು ” https://karnemakaone.kar.nic.in/abcd ವೆಬ್‌ ಸೈಟ್‌ಗೆ ಭೇಟಿ ನೀಡಬೇಕು. 

ಅದರ ಮುಖಪಟದಲ್ಲಿ ನಾಲ್ಕು ಹಂತಗಳಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.  

ಹಂತ 1 ರಲ್ಲಿ – ಅರ್ಜಿ ಸಲ್ಲಿಸಲು ಜಿಲ್ಲೆ, ಪೊಜೆಕ್ಟ್, ಅಧಿಸೂಚನೆ, ಹುದ್ದೆ, ವರ್ಗವನ್ನು ಒಂದಾದ ನಂತರ ಒಂದರಂತೆ ಆಯ್ಕೆ ಮಾಡಿ ನಂತರ `submit’ ನ್ನು ಒತ್ತಿ.

ಆನಂತರದಲ್ಲಿ  ನಿಮ್ಮ ಆಯ್ಕೆ ರೀತ್ಯಾ ನೀವು ಅರ್ಜಿ ಸಲ್ಲಿಸುವ ಗ್ರಾಮ, ತಾಲೂಕು ಆಯ್ಕೆ ಮಾಡಿ,

ಅರ್ಜಿ ಓಪನ್ ಆಗುತ್ತದೆ ತದನಂತರದಲ್ಲಿ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.  

ಹಂತ 2 ರಲ್ಲಿ – ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿರಿ. 

ಹಂತ 3  ರಲ್ಲಿ – ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರಿ. ದಾಖಲೆಗಳ ವಿವರಗಳು

  • ಎಸ್. ಎಸ್. ಎಲ್. ಸಿ. ಮಾರ್ಕ್ಸ್ ಕಾರ್ಡ್ 
  • ವಾಸಸ್ಥಳ ಪ್ರಮಾಣ ಪತ್ರ (3 ವರ್ಷದೊಳಗಿರಬೇಕು) 
  • ಜಾತಿ ಪ್ರಮಾಣ ಪತ್ರ 
  • ವಿಧವೆಯರಾದಲ್ಲಿ ಪತಿಯ ಮರಣ ಪತ್ರ ಜೊತೆಗೆ ವಿಧವಾ ಪ್ರಮಾಣ ಪತ್ರ 
  • ಅಂಗವಿಕಲರಾದಲ್ಲಿ ಅಂಗವಿಕಲ ಪ್ರಮಾಣ ಪತ್ರ 
  • ವಿಚ್ಛೇದಿತ ಅಭ್ಯರ್ಥಿಗಳಾದಲ್ಲಿ ವಿಚ್ಛೇದನ ಪ್ರಮಾಣ ಪತ್ರ 
  • ಯೋಜನಾ ನಿರಾಶ್ರಿತರಾಗಿದ್ದಲ್ಲಿ ಸಂಬಂದಸಿರುವ ಪ್ರಮಾಣ ಪತ್ರ 
  • ಆಧಾರಕಾರ್ಡ್ ದೃಢೀಕರಣ ಪತ್ರ

Note: ಮೇಲೆ ತಿಳಿಸಿದ ಎಲ್ಲ ದಾಖಲೆಗಳು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿರುವ ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ.

ಹಂತ 4 ರಲ್ಲಿ – ಕೊನೆಯದಾಗಿ ಅರ್ಜಿಯನ್ನು ಮುದ್ರಿಸಿ. 

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ 🗓️ 02-08-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ 🗓️ 10-10-2025  
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ

👉🏻 ಇಲ್ಲಿ ಕ್ಲಿಕ್ ಮಾಡಿ  

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://karnemakaone.kar.nic.in/abcd ಅರ್ಜಿ ಸಲ್ಲಿಸಲು ಆಯ್ಕೆ ಮಾಡಿದಾಗ ಗ್ರಾಮ ಮತ್ತು ತಾಲ್ಲೂಕು ಗಳಲ್ಲಿ ಖಾಲಿ ಇರುವ  ಹುದ್ದೆಯನ್ನು ನೋಡಬಹುದು.

 

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ `ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ’, ಮಂಗಳೂರು ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: `ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ’ ಮಂಗಳೂರಿನಲ್ಲಿ ನಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1:  ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: `ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ’, ಮಂಗಳೂರು ನೇಮಕಾತಿ 2025 ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 2: ಆಸಕ್ತಿ ಇರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 10-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?

ಉತ್ತರ 3: ಒಟ್ಟು 277 ಹುದ್ದೆಗಳು ಅದರಲ್ಲಿ 56  ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಮತ್ತು 221 ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ?

ಉತ್ತರ 4: ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮತ್ತು  ಜಿಲ್ಲೆಗೆ ಒಳಪಟ್ಟ ಗ್ರಾಮಗಳಲ್ಲಿ ಇರುತ್ತದೆ. ದಕ್ಷಿಣ ಕನ್ನಡ ತಾಲ್ಲೂಕುಗಳ ಹೆಸರುಗಳು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಲ್ಲಿಯಾ.

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕೃತ ನೇಮಕಾತಿ ಪ್ರಕಾರ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವಂತೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ದ್ವಿತೀಯ ಪಿ.ಯು.ಸಿ. ತರಗತಿಯನ್ನು ತೇರ್ಗಡೆ ಹೊಂದಿರಬೇಕು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್. ಎಸ್. ಎಲ್. ಸಿ (10 ನೇ) ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. 

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿಯನ್ನು ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 8: ವಿದ್ಯಾರ್ಹತೆ ಪಡೆದ ಅಂಕಗಳು ಮತ್ತು ಬೋನಸ್ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಆನ್ಲೈನ್ ನಲ್ಲಿ ಪ್ರಕಟಿಸಲಾಗುವುದು. 

ಪ್ರಶ್ನೆ 9: ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿದ್ದಾರೆ?

ಉತ್ತರ 9: ಅರ್ಜಿ ಸಲ್ಲಿಸಲು ಮಹಿಳಾ ಅಭ್ಯರ್ಥಿಗಳು (ಆಸಿಡ್ ದಾಳಿಗೆ ಒಳಗೊಂಡವರು, ವಿಧವೆಯರು, ಅಂಗವಿಕಲರು) ಮಾತ್ರ ಅರ್ಹರಾಗಿದ್ದಾರೆ. 

 

 

Leave a Comment