Jobnews4u

KSRLPS JOBS 2025 – ಬೆಂಗಳೂರು ಮತ್ತು ದಾವಣಗೆರೆಯಲ್ಲಿ ವಿವಿಧ ಹುದ್ದೆಗಳ ಅರ್ಜಿಯನ್ನು ಕರೆಯಲಾಗಿದೆ.

ನೀವು ಉದ್ಯೋಗ ನಿರೀಕ್ಷೆಯಲ್ಲಿದ್ದೀರಾ? ಹಾಗಾದರೆ ನೇಮಕಾತಿ ಮಾಹಿತಿ ತಿಳಿಯೊಣ, KSRLPS JOBS 2025 – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ (KSRLPS) ದಿಂದ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕರೆಯಲಾಗಿದೆ. ಆದಕಾರಣ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳು KSRLPS ಅಧಿಕೃತ ವೆಬ್‌ಸೈಟ್‌ ಆದ https://jobsksrlps.karnataka.gov.in ಗೆ ಕೊನೆಯ ದಿನಾಂಕ 31-ಡಿಸೆಂಬರ್-2025ರೊಳಗಾಗಿ ಆನ್ ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  

KSRLPS ಯು ಒಂದು ಕರ್ನಾಟಕ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದೆ, ಈ ಸಂಸ್ಥೆಯು ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾಯ್ದೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಕರ್ನಾಟಕದ ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯ ವಿವಿಧಡೆಯಲ್ಲಿ  ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಬಹುದು.

KSRLPS JOBS 2025 ಉದ್ಯೋಗ ಮಾಹಿತಿ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘವು (KSRLPS) ಬೆಂಗಳೂರು ಮತ್ತು ದಾವಣಗೆರೆ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಬ್ಲಾಕ್ ಮ್ಯಾನೇಜರ್, ಜಿಲ್ಲಾ ವ್ಯವಸ್ಥಾಪಕರು, ಕ್ಲಸ್ಟರ್ ಮೇಲ್ವಿಚಾರಕರು, ಕಚೇರಿ ಸಹಾಯಕರು ಹಾಗೂ ವಿವಿಧ ಹುದ್ದೆಗಳಿಗೆ ಒಟ್ಟು 23 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಸ್ನಾತಕೋತ್ತರ ಪದವಿ ಮತ್ತು ಹುದ್ದೆಗೆ ತಕ್ಕಂತೆ ಕೆಲಸದ ಅನುಭವವನ್ನು ಹೊಂದಿರಬೇಕು ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಬ್ಲಾಕ್ ಮ್ಯಾನೇಜರ್ – ಫಾರ್ಮಾ ಲೈವ್ಲಿಹುಡ್06 ಹುದ್ದೆಗಳು
ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ02 ಹುದ್ದೆಗಳು
ಕ್ಲಸ್ಟರ್ ಮೇಲ್ವಿಚಾರಕರು05 ಹುದ್ದೆಗಳು
ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆ01 ಹುದ್ದೆ
ಜಿಲ್ಲಾ ವ್ಯವಸ್ಥಾಪಕರು01 ಹುದ್ದೆ
ಜಿಲ್ಲಾ MIS(ಎಂಐಎಸ್) ಸಹಾಯಕ ಮತ್ತು ಡಿಇಓ(DEO)01 ಹುದ್ದೆ
ಕಚೇರಿ ಸಹಾಯಕರು01 ಹುದ್ದೆ
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು03 ಹುದ್ದೆಗಳು
ಕ್ಲಸ್ಟರ್ ಮೇಲ್ವಿಚಾರಕರು – ಕೌಶಲ್ಯ03 ಹುದ್ದೆಗಳು
ಒಟ್ಟು 23 ಹುದ್ದೆಗಳು

 

ಆಯ್ಕೆಯ ಸ್ಥಳ :

  • ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ (KSRLPS) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ ಮತ್ತು ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ.
ಹುದ್ದೆಯ ಹೆಸರುಆಯ್ಕೆಯ ಸ್ಥಳ 
ಬ್ಲಾಕ್ ಮ್ಯಾನೇಜರ್ – ಫಾರ್ಮಾ ಲೈವ್ಲಿಹುಡ್ದಾವಣಗೆರೆ ಜಿಲ್ಲೆಯ – Honnali, ಹರಿಹರ
ಬೆಂಗಳೂರು ಆರ್ಬನ್ ಜಿಲ್ಲೆ  –  ಬೆಂಗಳೂರು ಈಸ್ಟ್, ಬೆಂಗಳೂರು ನಾರ್ತ್, ಬೆಂಗಳೂರು ಸೌತ್, ಆನೇಕಲ್
ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯಬೆಂಗಳೂರು ಆರ್ಬನ್ ಜಿಲ್ಲೆಯ – ಆನೇಕಲ್, ಬೆಂಗಳೂರು ನಾರ್ತ್
ಕ್ಲಸ್ಟರ್ ಮೇಲ್ವಿಚಾರಕರುಬೆಂಗಳೂರು ಆರ್ಬನ್ ಜಿಲ್ಲೆಯ – ಬೆಂಗಳೂರು ಈಸ್ಟ್, ಬೆಂಗಳೂರು ನಾರ್ತ್, ಬೆಂಗಳೂರು ಸೌತ್, ದಾವಣಗೆರೆ- Honnali, ದಾವಣಗೆರೆ
ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆಬೆಂಗಳೂರು ಆರ್ಬನ್ ಜಿಲ್ಲೆ
ಜಿಲ್ಲಾ ವ್ಯವಸ್ಥಾಪಕರುಬೆಂಗಳೂರು ಆರ್ಬನ್ ಜಿಲ್ಲೆ
ಜಿಲ್ಲಾ MIS(ಎಂಐಎಸ್) ಸಹಾಯಕ ಮತ್ತು ಡಿಇಓ(DEO)ಬೆಂಗಳೂರು ಆರ್ಬನ್ ಜಿಲ್ಲೆ
ಕಚೇರಿ ಸಹಾಯಕರುಬೆಂಗಳೂರು ಆರ್ಬನ್ ಜಿಲ್ಲೆ
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರುಬೆಂಗಳೂರು ಆರ್ಬನ್ ಜಿಲ್ಲೆಯ –  ಬೆಂಗಳೂರು ಈಸ್ಟ್, ಬೆಂಗಳೂರು ನಾರ್ತ್, ಬೆಂಗಳೂರು ಸೌತ್
ಕ್ಲಸ್ಟರ್ ಮೇಲ್ವಿಚಾರಕರು – ಕೌಶಲ್ಯಬೆಂಗಳೂರು ಆರ್ಬನ್ ಜಿಲ್ಲೆಯ  –  ಬೆಂಗಳೂರು ಈಸ್ಟ್,  ಬೆಂಗಳೂರು ಸೌತ್ , ಆನೇಕಲ್

 

ವೇತನದ ವಿವರಗಳು :

  • ಹುದ್ದೆಗೆ ತಕ್ಕಂತೆ KSRLPS ಸಂಸ್ಥೆಯ ನಿಯಮಗಳ ಪ್ರಕಾರ ವೇತನ ಇರುತ್ತದೆ

 

ಶೈಕ್ಷಣಿಕ ಅರ್ಹತಾ ವಿವರಗಳು :

  • KSRLPS ನ ಬೆಂಗಳೂರು ಮತ್ತು  ದಾವಣಗೆರೆಯಲ್ಲಿ ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 31-ಡಿಸೆಂಬರ್ -2025 ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು

 

ಬ್ಲಾಕ್ ಮ್ಯಾನೇಜರ್ – ಫಾರ್ಮಾ ಲೈವ್ಲಿಹುಡ್ ಹುದ್ದೆಗೆ :

  • ಎಂ.ಎಸ್ಸಿ. ಕೃಷಿಯ ವಲಯದಲ್ಲಿ ಪದವಿ ಮತ್ತು 1 ವರ್ಷದ ಕ್ಷೇತ್ರಮಟ್ಟದ ಕೆಲಸದ ಅನುಭವ ಅಥವಾ ಬಿ.ಎಸ್ಸಿ.ಕೃಷಿಯ ವಲಯದಲ್ಲಿ ಪದವಿ ಜೊತೆಗೆ 3 ವರ್ಷಗಳ ಕ್ಷೇತ್ರಮಟ್ಟದ ಕೆಲಸದ ಅನುಭವ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ 5 ವರ್ಷಗಳ ಕ್ಷೇತ್ರಮಟ್ಟದ ಕೆಲಸದ ಅನುಭವ ಹೊಂದಿರಬೇಕು

 

ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ ಹುದ್ದೆಗೆ:

  • ಸಂಬಂದಿಸಿರುವ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಹುದ್ದೆಗೆ ಸಂಬಂದಿಸಿರುವ ಹಾಗೆ ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.

 

ಕ್ಲಸ್ಟರ್ ಮೇಲ್ವಿಚಾರಕರು ಹುದ್ದೆಗೆ :

  • ಯಾವುದಾದರೂ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು ಮತ್ತುಪದವಿ ಪಡೆದ ನಂತರ 2 ವರ್ಷಗಳ ಅನುಭವವನ್ನು ಹುದ್ದೆಗೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯುವುದು, ಓದುವುದು ಮತ್ತು ಮತನಾಡುವವರಾಗಿರಬೇಕು.
  • ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಬಲ್ಲವವರಾಗಿರಬೇಕು.

 

ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆ ಹುದ್ದೆಗೆ :

  • ಅಭ್ಯರ್ಥಿಗಳು ಎಂಬಿಎ ಇನ್ ಫೈನಾನ್ಸ್ ಅಥವಾ ಎಂಕಾಂ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.

 

ಜಿಲ್ಲಾ ವ್ಯವಸ್ಥಾಪಕರು ಹುದ್ದೆಗೆ :

  • ಎಂ.ಎಸ್ಸಿ. ಕೃಷಿಯ ವಲಯದಲ್ಲಿ ಪದವಿ ಅಥವಾ ಬಿ.ಎಸ್ಸಿ.ಕೃಷಿಯ ವಲಯದಲ್ಲಿ ಪದವಿ ಅಥವಾ ವಿಜ್ಞಾನ ಅಥವಾ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಯಾವುದಾದರೂ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

 

ಜಿಲ್ಲಾ MIS(ಎಂಐಎಸ್) ಸಹಾಯಕ ಮತ್ತು ಡಿಇಓ(DEO) ಹುದ್ದೆಗೆ :

  • ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಹೊಂದಿರಬೇಕು. ಮತ್ತು ಪದವಿ ಪಡೆದ ನಂತರ ಹುದ್ದೆಗೆ ಸಂಬಂದಿಸಿದ ಕ್ಷೇತ್ರದಲ್ಲಿ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಬರುವವರಾಗಿರಬೇಕು.
  • ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಜ್ಞಾನವನ್ನು ಹೊಂದಿರಬೇಕು.

 

ಕಚೇರಿ ಸಹಾಯಕರು ಹುದ್ದೆಗೆ :

  • ಯಾವುದಾದರೂ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು ಮತ್ತು ಸಂಬಂಡಪಟ್ಟ ವಿಭಾಗದಲ್ಲಿ 3 ವರ್ಷಗಳ ಕೆಲಸದ ಅನುಭವನ್ನು ಹೊಂದಿರಬೇಕು.

 

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :

  • ಯಾವುದೇ ವಿಷಯದಲ್ಲಿ 2 ವರ್ಷಗಳ ಸ್ನಾತಕೋತ್ತರ ಪದವಿ ಅಥವಾ ಪಿಜಿ ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು. ಮತ್ತು ಹುದ್ದೆಗೆ ಸಂಬಂದಿಸಿರುವ ಹಾಗೆ ಕನಿಷ್ಠ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದು ಕಡ್ಡಾಯವಾಗಿದೆ.
  • ಕಂಪ್ಯೂಟರ್ ನ ಜ್ಞಾನ ಅಗತ್ಯವಿದೆ.

 

ಕ್ಲಸ್ಟರ್ ಮೇಲ್ವಿಚಾರಕರು – ಕೌಶಲ್ಯ ಹುದ್ದೆಗೆ :

  • ಯಾವುದಾದರೂ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು ಮತ್ತು ಸಂಬಂಡಪಟ್ಟ ವಿಭಾಗದಲ್ಲಿ 2 ವರ್ಷಗಳ ಕೆಲಸದ ಅನುಭವನ್ನು ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದು ಕಡ್ಡಾಯವಾಗಿದೆ.
  • ಕಂಪ್ಯೂಟರ್ ನ ಜ್ಞಾನ ಅಗತ್ಯವಿದೆ.

 

ವಯಸ್ಸಿನ ಪರಿಮಿತಿ:

  • KSRLPS ನಲ್ಲಿ ನೇಮಕಾತಿಗಾಗಿ ಅರ್ಜಿಸಲ್ಲಿಸುವ ಅಭ್ಯರ್ಥಿಯ ದಿನಾಂಕ 31-ಡಿಸೆಂಬರ್-2025 ಕ್ಕೆ ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷಗಳು. 

 

ಅರ್ಜಿ ಶುಲ್ಕದ ವಿವರಗಳು:

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

 

ಆಯ್ಕೆಯ ವಿಧಾನ: 

  • ವ್ಯಯಕ್ತಿಕ ಸಂದರ್ಶನದಿಂದ ಆಯ್ಕೆ ಮಾಡಲಾಗುತ್ತದೆ.

 

KSRLPS JOBS 2025 ಅರ್ಜಿ ಸಲ್ಲಿಸುವ ವಿಧಾನಗಳು

  • ಅರ್ಜಿ ಸಲ್ಲಿಸುವ ಮೊದಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ(KSRLPS) ಬೆಂಗಳೂರು ಮತ್ತು ದಾವಣಗೆರೆ ಯಲ್ಲಿ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿಕೊಳ್ಳಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ. ಅಧಿಕೃತವಾದ https://jobsksrlps.karnataka.gov.in/viewjobs-new.aspx ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಅದರ ಮುಖಪುಟದಲ್ಲಿ `ಇತ್ತೀಚಿನ ಉದ್ಯೋಗಗಳು’ ಓಪನ್’ ಆಗುತ್ತದೆ ಅದರಲ್ಲಿ ನಿಮಗೆ ಆಸಕ್ತಿ ಇರುವ ಜಿಲ್ಲೆಯ ಸ್ಥಳಕ್ಕೆ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಅರ್ಜಿ ಮಾಹಿತಿಯನ್ನು ಸರಿಯಾಗಿ ತುಂಬಿ ಅಪ್ಲೈ ಮಾಡಿ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ : 🗓️ 16-ಡಿಸೆಂಬರ್-2025

ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ :  🗓️ 31-ಡಿಸೆಂಬರ್-2025

ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ :  ಇಲ್ಲಿ ಕ್ಲಿಕ್ ಮಾಡಿ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು :  ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ವೆಬ್ಸೈಟ್ ವಿಳಾಸ : https://ksrlps.karnataka.gov.in/en

 

KSRLPS JOBS 2025
KSRLPS JOBS 2025

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ ` KSRLPS’ ನಲ್ಲಿ ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: KSRLPS  2025 ರಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1: ಬ್ಲಾಕ್ ಮ್ಯಾನೇಜರ್ – ಫಾರ್ಮಾ ಲೈವ್ಲಿಹುಡ್, ಬ್ಲಾಕ್ ಮ್ಯಾನೇಜರ್ – ಕೃಷಿಯೇತರ ಜೀವನೋಪಾಯ, ಕ್ಲಸ್ಟರ್ ಮೇಲ್ವಿಚಾರಕರು, ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ, ಜಿಲ್ಲಾ ವ್ಯವಸ್ಥಾಪಕರು – ಜೀವನೋಪಾಯ, ಜಿಲ್ಲಾ MIS(ಎಂಐಎಸ್) ಸಹಾಯಕ ಮತ್ತು ಡಿಇಓ(DEO), ಕಚೇರಿ ಸಹಾಯಕರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಕ್ಲಸ್ಟರ್ ಮೇಲ್ವಿಚಾರಕರು – ಕೌಶಲ್ಯ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: KSRLPS 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು ?

ಉತ್ತರ 2: ಅರ್ಜಿ ಸಲ್ಲಿಸುವ 31-ಡಿಸೆಂಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 23 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 4: ಕರ್ನಾಟಕ ರಾಜ್ಯದ ಬೆಂಗಳೂರು ಆರ್ಬನ್ ಮತ್ತು ದಾವಣಗೆರೆ ಜಿಲ್ಲೆಯಲ್ಲಿ.

ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಟು?

ಉತ್ತರ 5: ಈ ಹುದ್ದೆಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

 

Leave a Comment