Jobnews4u

EMRS Jobs – ಏಕಲವ್ಯ ಮಾದರಿ ವಸತಿ ಶಾಲೆ ನೇಮಕಾತಿ 2025, ಬೇಗ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `EMRS Jobs’ಏಕಲವ್ಯ ಮಾದರಿ ವಸತಿ ಶಾಲೆ (EMRS) ದಿಂದ ಭೋದನೆ ಮತ್ತು ಭೋಧಕೇತರ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಮತ್ತು ಭಾರತದ ವಿವಿಧಡೆಯಲ್ಲಿ ಕೆಲಸ ಮಾಡಲು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. EMRS ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 23-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://nests.tribal.gov.in ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ. ಏಕಲವ್ಯ ಮಾದರಿ ವಸತಿ ಶಾಲೆ (EMRS) ಇದು ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಅಧೀನದಲ್ಲಿ ಬರುತ್ತದೆ.

 

EMRS Jobs 2025 ಉದ್ಯೋಗ ಮಾಹಿತಿ

ಏಕಲವ್ಯ ಮಾದರಿ ವಸತಿ ಶಾಲೆ (EMRS) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 7267 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, 12ನೇ ತರಗತಿ, ಪದವಿ, ಬಿ.ಎಸ್ಸಿ., ಬಿ.ಎಡ್ ಜೊತೆಗೆ ಕೆಲಸಕ್ಕೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಬೋಧನಾ ಹುದ್ದೆಗಳು ಒಟ್ಟು 5647 ಹುದ್ದೆಗಳು 
ಪ್ರಾಂಶುಪಾಲರು225 ಹುದ್ದೆಗಳು
PGT ಸ್ನಾತಕೋತ್ತರ ಶಿಕ್ಷಕರು1460 ಹುದ್ದೆಗಳು
TGT ಪದವೀಧರ ಶಿಕ್ಷಕರು3962 ಹುದ್ದೆಗಳು
ಭೋಧಕೇತರ ಹುದ್ದೆಗಳು ಒಟ್ಟು 1620 ಹುದ್ದೆಗಳು 
ಮಹಿಳಾ ಸ್ಟಾಫ್ ನರ್ಸ್550 ಹುದ್ದೆಗಳು
ಹಾಸ್ಟಲ್ ವಾರ್ಡನ್635 ಹುದ್ದೆಗಳು
ಅಕೌಂಟೆಂಟ್61 ಹುದ್ದೆಗಳು
ಕ್ಲರ್ಕ್ (JSA)228 ಹುದ್ದೆಗಳು
ಲ್ಯಾಬ್ ಅಟೆಂಡೆಂಟ್146 ಹುದ್ದೆಗಳು

 

ಆಯ್ಕೆಯ ಸ್ಥಳ:

  • ಏಕಲವ್ಯ ಮಾದರಿ ವಸತಿ ಶಾಲೆ (EMRS) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕವು ಸೇರಿದಂತೆ ಭಾರತದ ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ.

 

ವೇತನದ ವಿವರಗಳು: `

  • ಏಕಲವ್ಯ ಮಾದರಿ ವಸತಿ ಶಾಲೆ (EMRS) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕವು ಸೇರಿದಂತೆ ಭಾರತದ ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ.

 

ಹುದ್ದೆಯ ಹೆಸರುವೇತನ
ಪ್ರಾಂಶುಪಾಲರುರೂ. 78,800-2,09,200/- ಗಳು Level 12
PGT ಸ್ನಾತಕೋತ್ತರ ಶಿಕ್ಷಕರುರೂ. 47,600-1,51,100/- ಗಳು Level 8
TGT ಪದವೀಧರ ಶಿಕ್ಷಕರುರೂ. 44,900-1,42,400/- ಗಳು Level 7
ಲೈಬ್ರೇರಿಯನ್ರೂ. 44,900-1,42,400/- ಗಳು Level 7
ವಿವಿಧ ಶಿಕ್ಷಕರುರೂ. 35,400-1,12,400/- ಗಳು Level-6
ಮಹಿಳಾ ಸ್ಟಾಫ್ ನರ್ಸ್ರೂ. 29,200/- – 92,300/- ಗಳು Level-5
ಹಾಸ್ಟಲ್ ವಾರ್ಡನ್ರೂ. 29,200/- – 92,300/- ಗಳು Level-5
ಅಕೌಂಟೆಂಟ್ರೂ. 35,400-1,12,400/- ಗಳು Level-6
ಕ್ಲರ್ಕ್ (JSA)ರೂ. 19,900/- – 63,200/- ಗಳು Level-2
ಲ್ಯಾಬ್ ಅಟೆಂಡೆಂಟ್ರೂ. 18,000/- – 56,900/- Level-1

 

 

ಶೈಕ್ಷಣಿಕ ಅರ್ಹತಾ ವಿವರಗಳು:

ಏಕಲವ್ಯ ಮಾದರಿ ವಸತಿ ಶಾಲೆ (EMRS) ಅಧಿಕೃತ ನೇಮಕಾತಿ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 23-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

ಪ್ರಾಂಶುಪಾಲರು ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇಕಡಾ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಮತ್ತು NCTE ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇಕಡಾ 50% ಅಂಕಗಳೊಂದಿಗೆ ಬಿ.ಎಡ್. ಪದವಿಯನ್ನು ಹೊಂದಿರಬೇಕು.

ಮತ್ತು

  • ಸಂಬಂದಿಸಿರುವ ಕ್ಷೇತ್ರದಲ್ಲಿ ಲೆವೆಲ್ – 12 ರ್ ವೇತನ ಮ್ಯಾಟ್ರಿಕ್ಸ್ ನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸ್ವಾಯತ್ತ ಸಂಸ್ಥೆಗಳಲ್ಲಿ ಸಮಾನ ಹುದ್ದೆಯಲ್ಲಿ ಅಥವಾ ಪ್ರಾಂಶುಪಾಲರಾಗಿ ಹುದ್ದೆಗಳಲ್ಲಿ ಅನುಭವ ಹೊಂದಿರಬೇಕು.

 

PGT ಸ್ನಾತಕೋತ್ತರ ಶಿಕ್ಷಕರು ಹುದ್ದೆಗೆ :

  • NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ಸಂಬಂದಿಸಿರುವ ವಿಷಯಗಳಲ್ಲಿ ಬಿ.ಎಡ್. ಪದವಿಯನ್ನು ಹೊಂದಿರಬೇಕು.

ವಿಷಯಗಳು: ಇಂಗ್ಲೀಷ್ (English), ಹಿಂದಿ (Hindi), ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಅರ್ಥಶಾಸ್ತ್ರ, ಜೀವಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ವಾಣಿಜ್ಯ,

  • ಕಂಪ್ಯೂಟರ್ ಸೈನ್ಸ್  – ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ MSc ಪದವಿಯನ್ನು ಹೊಂದಿರಬೇಕು.

 

TGT ಪದವೀಧರ ಶಿಕ್ಷಕರು ಹುದ್ದೆಗೆ :

  • NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ನಾಲ್ಕು ವರ್ಷಗಳ ಪದವಿಯನ್ನು ಪೂರ್ಣಗೊಳಿಸಿರಬೇಕು.

 

TGT ಕಂಪ್ಯೂಟರ್ ಸೈನ್ಸ್ ಶಿಕ್ಷಕರು ಹುದ್ದೆಗೆ :

  • ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ BCA ಪದವಿಯನ್ನು ಹೊಂದಿರಬೇಕು. 

 

ಕಲೆ ಶಿಕ್ಷಕರು ಹುದ್ದೆಗೆ :

  • ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ಡ್ರಾಯಿಂಗ್ ಮತ್ತು ಪೇಂಟಿಂಗ್ ಅಥವಾ ಗ್ರಾಫಿಕ್ ಆರ್ಟ್ ಅಥವಾ ವಿಶುವಲ್ ಆರ್ಟ್ ಪದವಿಯನ್ನು ಪಡೆದಿರಬೇಕು

 

ಸಂಗೀತ ಶಿಕ್ಷಕರು ಹುದ್ದೆಗೆ :

  • ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ಸಂಗೀತ ಮತ್ತು ಪ್ರದರ್ಶನ ಕಲೆಗಳಲ್ಲಿ ಪದವಿಯನ್ನು ಹೊಂದಿರಬೇಕು. 

 

ದೈಹಿಕ ಶಿಕ್ಷಕರು ಹುದ್ದೆಗೆ  :

  • NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ನಾಲ್ಕು ವರ್ಷಗಳ ಬಿ.ಪಿ.ಎಡ್. ಪದವಿಯನ್ನು ಪೂರ್ಣಗೊಳಿಸಿರಬೇಕು. 

 

ಗ್ರಂಥಪಾಲಕರು ಶಿಕ್ಷಕರು ಹುದ್ದೆಗೆ :

  • ಮಾನ್ಯತೆ ಪಡೆದ ಸಂಸ್ಥೆಯಿಂದ ಶೇಕಡಾ 50% ಅಂಕಗಳೊಂದಿಗೆ ಗ್ರಂಥಾಲಯ ವಿಜ್ಞಾನದಲ್ಲಿ ಪದವಿಯನ್ನು ಹೊಂದಿರಬೇಕು.

 

ಸ್ಟಾಫ್ ನರ್ಸ್ ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ B.SC ನರ್ಸಿಂಗ್ ಹೊಂದಿರಬೇಕು. ಮತ್ತು ಯಾವುದೇ ರಾಜ್ಯ ನರ್ಸಿಂಗ್ ಕೌನ್ಸಿಲ್ನಲ್ಲಿ ನರ್ಸ್ ಅಥವಾ RN OR RM ಆಗಿ ನೋಂದಾಯಿಸಿರಲಪಟ್ಟಿರಬೇಕು. ಜೊತೆಗೆ ಎರಡೂವರೆ ವರ್ಷಗಳ ಕಾಲ್ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ವೃತ್ತಿ ನಿರ್ವಹಿಸರಬೇಕು.

 

ಹಾಸ್ಟೆಲ್ ವಾರ್ಡ್ ನ್  ಹುದ್ದೆಗೆ :

  • NCTE ಮಾನ್ಯತೆ ಪಡೆದ ಸಂಸ್ಥೆಯ ನಾಲ್ಕು ವರ್ಷಗಳ ಪದವಿ ಹೊಂದಿರಬೇಕು

 

ಅಕೌಂಟೆಂಟ್ ಹುದ್ದೆಗೆ :

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ವಾಣಿಜ್ಯದಲ್ಲಿ ಪದವಿ ಹೊಂದಿರಬೇಕು

ಕ್ಲರ್ಕ್ (JSA) ಹುದ್ದೆಗೆ :

  • 12 ನೇ ತರಗತಿ ಪೂರ್ಣಗೊಳಿಸಿರಬೇಕು ಮತ್ತು ಇಂಗ್ಲೀಷ್ ಟೈಪಿಂಗ್ನಲ್ಲಿ ನಿಮಿಷಕ್ಕೆ 35 ಪದಗಳು ಮತ್ತು ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳು ಟೈಪ್ ಮಾಡುವ ವೇಗ ಇರಬೇಕು.

 

ಲ್ಯಾಬ್ ಅಟೆಂಡೆಂಟ್ ಹುದ್ದೆಗೆ: 

  • 10 ನೇ ತರಗತಿ ಪೂರ್ಣಗೊಳಿಸಿರಬೇಕು ಜೊತೆಗೆ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಪ್ರಯೋಗಾಲಯ ತಂತ್ರದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು

 

ವಯಸ್ಸಿನ ಪರಿಮಿತಿ:

ಏಕಲವ್ಯ ಮಾದರಿ ವಸತಿ ಶಾಲೆ (EMRS) ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 23-ಅಕ್ಟೋಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

 

ಹುದ್ದೆಯ ಹೆಸರುವಯಸ್ಸು 
ಪ್ರಾಂಶುಪಾಲರುಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷಗಳು 
PGT ಸ್ನಾತಕೋತ್ತರ ಶಿಕ್ಷಕರುಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು 
TGT ಪದವೀಧರ ಶಿಕ್ಷಕರುಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ಲೈಬ್ರೇರಿಯನ್ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ವಿವಿಧ ಶಿಕ್ಷಕರುಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ಮಹಿಳಾ ಸ್ಟಾಫ್ ನರ್ಸ್ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ಹಾಸ್ಟಲ್ ವಾರ್ಡನ್ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ಅಕೌಂಟೆಂಟ್ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು 
ಕ್ಲರ್ಕ್ (JSA)ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು 
ಲ್ಯಾಬ್ ಅಟೆಂಡೆಂಟ್ಕನಿಷ್ಠ 18 ವರ್ಷದಿಂದ ಗರಿಷ್ಠ 30 ವರ್ಷಗಳು 

 

🔶 ವಯೋಮಿತಿ ಸಡಲಿಕೆ 

  • ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ – 5 ವರ್ಷಗಳು
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ – 3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳಿಗೆ  – 10 ರಿಂದ 15 ವರ್ಷಗಳು

 

ಅರ್ಜಿ ಶುಲ್ಕದ ವಿವರಗಳು:

ಹುದ್ದೆಯ ಹೆಸರುಅರ್ಜಿ ಶುಲ್ಕ
ಮಹಿಳೆಯರು, ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ 
ಪ್ರಾಂಶುಪಾಲರು ಹುದ್ದೆಗಳಿಗೆ ರೂ. 2000/- + ಪ್ರೋಸಸಿಂಗ್ ಫೀ ರೂ. 500/-
PGT ಮತ್ತು TGT ಹುದ್ದೆಗಳಿಗೆ ರೂ. 1500/- + ಪ್ರೋಸಸಿಂಗ್ ಫೀ ರೂ. 500/-
ಬೋಧಕೇತರ ಸಿಬ್ಬಂದಿಗಳು ಹುದ್ದೆಗಳಿಗೆ ರೂ. 1000/- + ಪ್ರೋಸಸಿಂಗ್ ಫೀ ರೂ. 500/-
ಮಹಿಳೆಯರು, ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ಅಂಗವಿಕಲಕ್ಕೆ ಸೇರಿರುವ ಅಭ್ಯರ್ಥಿಗಳಿಗೆ
ಪ್ರಾಂಶುಪಾಲರು ಹುದ್ದೆಗಳಿಗೆ ಪ್ರೋಸಸಿಂಗ್ ಫೀ ರೂ. 500/-
PGT ಮತ್ತು TGT ಹುದ್ದೆಗಳಿಗೆ ಪ್ರೋಸಸಿಂಗ್ ಫೀ ರೂ. 500/-
ಬೋಧಕೇತರ ಸಿಬ್ಬಂದಿಗಳು ಹುದ್ದೆಗಳಿಗೆ ಪ್ರೋಸಸಿಂಗ್ ಫೀ ರೂ. 500/-

 

ಆಯ್ಕೆಯ ವಿಧಾನ: 

  • ಲಿಖಿತ ಪರೀಕ್ಷೆ, Tier-1 Qualifying Exam, Tier-2 Preliminary Exam
  • ಕೌಶಲ್ಯ ಪರೀಕ್ಷೆ (ಹುದ್ದೆಗಳ ಪ್ರಕಾರ)
  • ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ’

 

EMRS Jobs 2025 ಗೆ ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು ಏಕಲವ್ಯ ಮಾದರಿ ವಸತಿ ಶಾಲೆ (EMRS) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://nests.tribal.gov.in ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅರ್ಜಿ ಹಾಕಲು ಬಯಸಿರುವ ಅಭ್ಯರ್ಥಿಗಳು ಅರ್ಜಿಹಾಕಲು ಬಯಸಿರುವ ಅರ್ಜಿ ಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
  • ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ  🗓️ 19-09-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ  🗓️ 23-10-2025  
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ 👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://nests.tribal.gov.in

 

EMRS Jobs
EMRS Jobs

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಈ ಕೆಳಗೆ ಏಕಲವ್ಯ ಮಾದರಿ ವಸತಿ ಶಾಲೆ (EMRS) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: ಏಕಲವ್ಯ ಮಾದರಿ ವಸತಿ ಶಾಲೆ (EMRS)ನಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1: ಪ್ರಾಂಶುಪಾಲರು, PGT ಸ್ನಾತಕೋತ್ತರ ಶಿಕ್ಷಕರು, TGT ಪದವೀಧರ ಶಿಕ್ಷಕರು, ಲೈಬ್ರೇರಿಯನ್, ವಿವಿಧ ಶಿಕ್ಷಕರು, ಮಹಿಳಾ ಸ್ಟಾಫ್ ನರ್ಸ್, ಹಾಸ್ಟಲ್ ವಾರ್ಡನ್, ಅಕೌಂಟೆಂಟ್, ಕ್ಲರ್ಕ್ (JSA), ಲ್ಯಾಬ್ ಅಟೆಂಡೆಂಟ್ ಒಟ್ಟು 7267 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: EMRSನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 23-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 7267 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 4: ಕರ್ನಾಟಕವು ಸೇರಿದಂತೆ ಭಾರತದ ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ.

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: EMRS ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ವಿದ್ಯಾರ್ಹತೆ ಮತ್ತು  ಅನುಭವ ಹೊಂದಿರಬೇಕು.

ಪ್ರಶ್ನೆ 6 : ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 6: ಅರ್ಜಿಯನ್ನು ಆನ್ಲೈನ್  ಮುಖಾಂತರ ಮಾತ್ರ ಸಲ್ಲಿಸಬೇಕು.

Leave a Comment