Jobnews4u

CUK Jobs – 10th, 12th, ಪದವಿ ಪಾಸ್ ಆದವರಿಗೆ ಸುವರ್ಣ ಅವಕಾಶ, ಬೇಗ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, CUK JOBS’ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ (CUK) ಯಲ್ಲಿ ಹಲವು ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲಿರುವ ವಿದ್ಯಾಲಯ ಸಂಸ್ಥೆ, ಕಲಬುರ್ಗಿಯಲ್ಲಿ ನೇರ ನೇಮಕಾತಿ ಮತ್ತು ಡೆಪುಟೆಶನ್ ರೀತಿಯಲ್ಲಿ ನಾನ್-ಟಿಚಿಂಗ್ ಹಲವು ಹುದ್ದೆಗಳಿಗೆ ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 30-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://www. cuknt.samarth.edu.in ನ ಆನ್ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.  

 

CUK Jobs 2025 ಉದ್ಯೋಗ ಮಾಹಿತಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇರ ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 25 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, ದ್ವಿತೀಯ ಪಿಯುಸಿ, ಐಟಿಐ, ಪದವಿ, ಇನ್ನೂ ಮುಂತಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿ ಹೋರಾಡಿಸಲಾದ ಹುದ್ದೆಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಗ್ರೂಪ್ – ಎ 
ಇಂಟರ್ನಲ್ ಆಡಿಟ್ ಆಫೀಸರ್1 ಹುದ್ದೆ
ಎಗ್ಜಿಕ್ಯೂಟಿವ್ ಇಂಜಿನಿಯರ್1 ಹುದ್ದೆ
ಅಸಿಸ್ಟೆಂಟ್ ರಿಜಿಸ್ಟ್ರಾರ್1 ಹುದ್ದೆ
ಮೆಡಿಕಲ್ ಆಫೀಸರ್1 ಹುದ್ದೆ
ಗ್ರೂಪ್ – ಬಿ 
ಪ್ರೈವೇಟ್ ಸೆಕ್ರೆಟರಿ4 ಹುದ್ದೆಗಳು
ಪರ್ಸನಲ್ ಅಸಿಸ್ಟೆಂಟ್3 ಹುದ್ದೆಗಳು
ಗ್ರೂಪ್ – ಸಿ  
ಸೆಕ್ಯೂರಿಟಿ inspector1 ಹುದ್ದೆ
ಲ್ಯಾಬರೇಟರಿ ಅಸಿಸ್ಟೆಂಟ್4 ಹುದ್ದೆಗಳು
ಲೈಬ್ರರೀ ಅಸಿಸ್ಟೆಂಟ್1 ಹುದ್ದೆ
ಅಪ್ಪರ್ ಡಿವಿಜನ್ ಕ್ಲರ್ಕ್1 ಹುದ್ದೆ
ಲೋವರ್ ಡಿವಿಜನ್ ಕ್ಲರ್ಕ್2 ಹುದ್ದೆಗಳು
ಕುಕ್1 ಹುದ್ದೆ
ಮೆಡಿಕಲ್ ಅಟೆಂಡರ್1 ಹುದ್ದೆ
ಲೈಬ್ರರೀ ಅಟೆಂಡರ್2 ಹುದ್ದೆಗಳು
ಅಡುಗೆಮನೆ ಅಟೆಂಡರ್1 ಹುದ್ದೆ
  
ಒಟ್ಟು25 ಹುದ್ದೆಗಳು

 

ಆಯ್ಕೆಯ ಸ್ಥಳ :

  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕದ ಕಲಬುರ್ಗಿಯ ವಿದ್ಯಾಲಯದಲ್ಲಿ ಕೆಲಸ ಮಾಡಬೇಕಾಗುತ್ತದೆ.

 

ವೇತನದ ವಿವರಗಳು : 

  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.
ಹುದ್ದೆಯ ಹೆಸರುವೇತನ
ಗ್ರೂಪ್ – ಎ 
ಇಂಟರ್ನಲ್ ಆಡಿಟ್ ಆಫೀಸರ್ರೂ. 78,800-2,09,200/- ಗಳು Level 12
ಎಗ್ಜಿಕ್ಯೂಟಿವ್ ಇಂಜಿನಿಯರ್ರೂ. 67,700-2,08,700/- ಗಳು Level 11
ಅಸಿಸ್ಟೆಂಟ್ ರಿಜಿಸ್ಟ್ರಾರ್ರೂ. 56,100-1,77500/- ಗಳು Level 10
ಮೆಡಿಕಲ್ ಆಫೀಸರ್ರೂ. 56,100-1,77500/- ಗಳು Level 10
ಗ್ರೂಪ್ – ಬಿ 
ಪ್ರೈವೇಟ್ ಸೆಕ್ರೆಟರಿರೂ. 44,900-1,42,400/- ಗಳು Level-7
ಪರ್ಸನಲ್ ಅಸಿಸ್ಟೆಂಟ್ರೂ. 35,400-1,12,400/- ಗಳು Level-6
ಗ್ರೂಪ್ – ಸಿ  
ಸೆಕ್ಯೂರಿಟಿ inspectorರೂ. 25,500-81,100/- ಗಳು Level-4
ಲ್ಯಾಬರೇಟರಿ ಅಸಿಸ್ಟೆಂಟ್ರೂ. 25,500-81,100/- ಗಳು Level-4
ಲೈಬ್ರರೀ ಅಸಿಸ್ಟೆಂಟ್ರೂ. 29,200/- – 92,300/- ಗಳು Level-5
ಅಪ್ಪರ್ ಡಿವಿಜನ್ ಕ್ಲರ್ಕ್ರೂ. 25,500-81,100/- ಗಳು Level-4
ಲೋವರ್ ಡಿವಿಜನ್ ಕ್ಲರ್ಕ್ರೂ. 19,900/- – 63,200/- ಗಳು Level-2
ಕುಕ್ರೂ. 19,900/- – 63,200/- ಗಳು Level-2
ಮೆಡಿಕಲ್ ಅಟೆಂಡರ್ರೂ. 18,000/- – 56,900/- Level-1
ಲೈಬ್ರರೀ ಅಟೆಂಡರ್ರೂ. 18,000/- – 56,900/- Level-1
ಅಡುಗೆಮನೆ ಅಟೆಂಡರ್ರೂ. 18,000/- – 56,900/- Level-1

 

ಶೈಕ್ಷಣಿಕ ಅರ್ಹತಾ ವಿವರಗಳು :

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ಅಧಿಕೃತ ನೇಮಕಾತಿ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.  

ಇಂಟರ್ನಲ್ ಆಡಿಟ್ ಆಫೀಸರ್ ಹುದ್ದೆಗೆ :

  1. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಆಡಿಟ್ ಮತ್ತು ಎಕೌಂಟ್ಸ್ ಅಥವಾ ಅದಕ್ಕೆ ಸರಿಸಮಾನವಾದ ಹುದ್ದೆಯಲ್ಲಿ ರೆಗ್ಯುಲರ್ ಬೇಸಿಸ್ ನಲ್ಲಿ ಕಾರ್ಯ ನಿರ್ವಹಿಸಿರಬೇಕು.
  2. ಅಥವಾ ಆಡಿಟ್ ಮತ್ತು ಎಕೌಂಟ್ಸ್ ನಲ್ಲಿ level -11 ರ್ ಪ್ರಕಾರ 3 ವರ್ಷಗಳ ಸೇವೆ ಸಲ್ಲಿಸಿರಬೇಕು.
  3. ಅಥವಾ  ಆಡಿಟ್ ಮತ್ತು ಎಕೌಂಟ್ಸ್ ನಲ್ಲಿ level -10  ರ ಪ್ರಕಾರ 5  ವರ್ಷಗಳ ಸೇವೆ ಸಲ್ಲಿಸಿರಬೇಕು. 

ಎಗ್ಜಿಕ್ಯೂಟಿವ್ ಇಂಜಿನಿಯರ್ ಹುದ್ದೆಗೆ :

  1. ಬಿಇ ಅಥವಾ ಬಿಟೆಕ್ ಅನ್ನು ಪ್ರಥಮ ದರ್ಜೆಯಲ್ಲಿ ಸಿವಿಲ್ ಇಂಜಿನಿಯರ್ ಯನ್ನು ಅಥವಾ ಸಾರಿಸಮಾನವಾದದನ್ನು ಪೂರ್ಣಗೊಳಿಸಿರಬೇಕು.
  2. ಮತ್ತು ಇದೆ ವೃತ್ತಿಯಲ್ಲಿ 8 ವರ್ಷಗಳ ಅನುಭವ ಅಗತ್ಯವಾಗಿದೆ. 

ಅಸಿಸ್ಟೆಂಟ್ ರಿಜಿಸ್ಟ್ರಾರ್ ಹುದ್ದೆಗೆ :

  1. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
  2. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 5 ವರ್ಷಗಳ ಅನುಭವವನ್ನು ಹೊಂದಿರಬೇಕು.

ಮೆಡಿಕಲ್ ಆಫೀಸರ್ ಹುದ್ದೆಗೆ:

  1. MCI ಯಲ್ಲಿ ನೋಂದಾಯಿತ MBBS ಪದವಿ ಹೊಂದಿರಬೇಕು.
  2. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 3 ವರ್ಷಗಳ ಅನುಭವವನ್ನು ಹೊಂದಿರಬೇಕು.

ಪ್ರೈವೇಟ್ ಸೆಕ್ರೆಟರಿ ಹುದ್ದೆಗೆ :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು.
  2. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
  3. ಸ್ಟೆನೋಗ್ರಾಫಿ ಸ್ಪೀಡ್ ಇಂಗ್ಲೀಷ್ ನಲ್ಲಿ 120 wpm ಅಥವಾ ಹಿಂದಿ ಯಲ್ಲಿ 100 wpm ವೇಗದ ಮಿತಿ ಹೊಂದಿರಬೇಕು.
  4. ಟೈಪಿಂಗ್ ಸ್ಪೀಡ್ ಇಂಗ್ಲೀಷ್ ನಲ್ಲಿ 35 wpm ಅಥವಾ ಹಿಂದಿ ಯಲ್ಲಿ 30  wpm ವೇಗದ ಮಿತಿ ಹೊಂದಿರಬೇಕು.
  5. ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ.

ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು.
  2. ಸ್ಟೆನೋಗ್ರಾಫಿ ಸ್ಪೀಡ್ ಇಂಗ್ಲೀಷ್ ನಲ್ಲಿ ಅಥವಾ ಅಥವಾ ಹಿಂದಿ ಯಲ್ಲಿ 100 wpm ವೇಗದ ಪರಿಣಿತಿ ಹೊಂದಿರಬೇಕು.
  3. ಟೈಪಿಂಗ್ ಸ್ಪೀಡ್ ಇಂಗ್ಲೀಷ್ ನಲ್ಲಿ 35 wpm ಅಥವಾ ಹಿಂದಿ ಯಲ್ಲಿ 30  wpm ವೇಗದ ಮಿತಿ ಹೊಂದಿರಬೇಕು.
  4. ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ.
  5. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 2 ವರ್ಷಗಳ ಅನುಭವವನ್ನು ಹೊಂದಿರಬೇಕು.

ಸೆಕ್ಯೂರಿಟಿ inspector ಹುದ್ದೆಗೆ :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು.
  2. ಭದ್ರತಾ ಮೇಲ್ವಿಚಾರಕರಾಗಿ 3 ವರ್ಷಗಳ ಕಾರ್ಯ ನಿರ್ವಹಿಸಿರಬೇಕು.
  3. LMV ಮೋಟರ್ ಸೈಕಲ್ ಚಾಲನ ಪರವಾನಗಿಯನ್ನು ಹೊಂದಿರಬೇಕು.

ಲ್ಯಾಬರೇಟರಿ ಅಸಿಸ್ಟೆಂಟ್ ಹುದ್ದೆಗೆ :

  1. ಸೈನ್ಸ್ ಅಥವಾ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಯಲ್ಲಿ ಪದವಿಯನ್ನು ಪಡೆದಿರಬೇಕು.
  2. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 2 ವರ್ಷಗಳ ಅನುಭವವನ್ನು ಹೊಂದಿರಬೇಕು

ಲೈಬ್ರರೀ ಅಸಿಸ್ಟೆಂಟ್ ಹುದ್ದೆಗೆ :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ಯಲ್ಲಿ ಪದವಿ ಅಥವಾ ಸಾರಿಸಮಾನವಾದ ಪದವಿಯನ್ನು ಹೊಂದಿರಬೇಕು.
  2. ಟೈಪಿಂಗ್ ಸ್ಪೀಡ್ ಇಂಗ್ಲೀಷ್ ನಲ್ಲಿ 35 wpm ಅಥವಾ ಹಿಂದಿ ಯಲ್ಲಿ 30  wpm ವೇಗದ ಮಿತಿ ಹೊಂದಿರಬೇಕು
  3. ಕಂಪ್ಯೂಟರ್ ಆಪರೇಷನ್ ನಲ್ಲಿ ನೈಪುಣ್ಯತೆ ಹೊಂದಿರಬೇಕು.

ಅಪ್ಪರ್ ಡಿವಿಜನ್ ಕ್ಲರ್ಕ್ ಹುದ್ದೆಗೆ :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು
  2. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 2 ವರ್ಷಗಳ ಅನುಭವವನ್ನು ಹೊಂದಿರಬೇಕು
  3. ಟೈಪಿಂಗ್ ಸ್ಪೀಡ್ ಇಂಗ್ಲೀಷ್ ನಲ್ಲಿ 35 wpm ಅಥವಾ ಹಿಂದಿ ಯಲ್ಲಿ 30  wpm ವೇಗದ ಮಿತಿ ಹೊಂದಿರಬೇಕು
  4. ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ.

ಲೋವರ್ ಡಿವಿಜನ್ ಕ್ಲರ್ಕ್ ಹುದ್ದೆಗೆ  :

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು.
  2. ಟೈಪಿಂಗ್ ಸ್ಪೀಡ್ ಇಂಗ್ಲೀಷ್ ನಲ್ಲಿ 35 wpm ಅಥವಾ ಹಿಂದಿ ಯಲ್ಲಿ 30  wpm ವೇಗದ ಮಿತಿ ಹೊಂದಿರಬೇಕು.
  3. ಕಂಪ್ಯೂಟರ್ ಆಪರೇಷನ್ ನಲ್ಲಿ ನೈಪುಣ್ಯತೆ ಹೊಂದಿರಬೇಕು.

ಕುಕ್ ಹುದ್ದೆಗೆ :

  1. 10 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಒಂದು ವರ್ಷದ ಬೇಕರಿಯಲ್ಲಿ ITI ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
  2. 3 ಸ್ಟಾರ್ ಹೊಟೇಲ್ ನಲ್ಲಿ 3 ವರ್ಷಗಳ ಕುಕಿಂಗ್ ಮತ್ತು ಕಾಟರಿಂಗ್ ನಲ್ಲಿ ಅನುಭವ ಹೊಂದಿರಬೇಕು.

ಮೆಡಿಕಲ್ ಅಟೆಂಡರ್ ಹುದ್ದೆಗೆ :

  1. 10 ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
  2. ಫಸ್ಟ್ ಆಯಿಡ್ ಮಾಡುವ ಜ್ಞಾನವನ್ನು ಹೊಂದಿರಬೇಕು.
  3. ಯಾವುದೇ ಹಾಸ್ಪಿಟಲ್ ನಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.

ಲೈಬ್ರರೀ ಅಟೆಂಡರ್ ಹುದ್ದೆಗೆ :

  1. 12ನೇ ತರಗತಿ ಅಥವಾ ಅದಕ್ಕೆ ಸಾರಿಸಮಾನವಾಗಿ ಉತ್ತೀರ್ಣರಾಗಿರಬೇಕು
  2. ಮಾನ್ಯತೆ ಪಡೆದ ಸಂಸ್ಥೆಯಿಂದ ಲೈಬ್ರರೀ ಸೈನ್ಸ್ ಕೋರ್ಸ್ನ ಸರ್ಟಿಫಿಕೇಟ್ ನ್ನು ಪಡೆದಿರಬೇಕು.
  3. ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 1 ವರ್ಷದ ಅನುಭವವನ್ನು ಹೊಂದಿರಬೇಕು
  4.  ಕಂಪ್ಯೂಟರ್ ನ ಜ್ಞಾನದ ಅಗತ್ಯವಿದೆ

ಅಡುಗೆಮನೆ ಅಟೆಂಡರ್ ಹುದ್ದೆಗೆ :

  1. 10 ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
  2. ಅಥವಾ ಸಂಬಂದಿಸಿರುವ  ಕ್ಷೇತ್ರದಲ್ಲಿ ITI ಸರ್ಟಿಫಿಕೇಟ್ ಹೊಂದಿರಬೇಕು ಮತ್ತು ವೃತ್ತಿಗೆ ಸಂಬಂದಿಸಿರುವ ಹಾಗೆ 2 ವರ್ಷಗಳ ಅನುಭವವನ್ನು ಹೊಂದಿರಬೇಕು. 

 

ವಯಸ್ಸಿನ ಪರಿಮಿತಿ :

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ಅಧಿಕೃತ ಪ್ರಕಟಣೆ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 31-ಅಕ್ಟೋಬರ್-2025ಕ್ಕೆ ಭಾರತ ಸರ್ಕಾರ ಮತ್ತು UGC ರೂಲ್ಸ್ ನ ಪ್ರಕಾರ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

ಹುದ್ದೆಯ ಹೆಸರುವಯಸ್ಸು
ಇಂಟರ್ನಲ್ ಆಡಿಟ್ ಆಫೀಸರ್ಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷಗಳು
ಎಗ್ಜಿಕ್ಯೂಟಿವ್ ಇಂಜಿನಿಯರ್ಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷಗಳು
ಅಸಿಸ್ಟೆಂಟ್ ರಿಜಿಸ್ಟ್ರಾರ್ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು
ಮೆಡಿಕಲ್ ಆಫೀಸರ್ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು
ಪ್ರೈವೇಟ್ ಸೆಕ್ರೆಟರಿಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷಗಳು
ಪರ್ಸನಲ್ ಅಸಿಸ್ಟೆಂಟ್ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು
ಸೆಕ್ಯೂರಿಟಿ inspectorಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಲ್ಯಾಬರೇಟರಿ ಅಸಿಸ್ಟೆಂಟ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಲೈಬ್ರರೀ ಅಸಿಸ್ಟೆಂಟ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಅಪ್ಪರ್ ಡಿವಿಜನ್ ಕ್ಲರ್ಕ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಲೋವರ್ ಡಿವಿಜನ್ ಕ್ಲರ್ಕ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಕುಕ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಮೆಡಿಕಲ್ ಅಟೆಂಡರ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಲೈಬ್ರರೀ ಅಟೆಂಡರ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು
ಅಡುಗೆಮನೆ ಅಟೆಂಡರ್ಕನಿಷ್ಠ 18 ವರ್ಷದಿಂದ ಗರಿಷ್ಠ 32 ವರ್ಷಗಳು

 

🔶 ವಯೋಮಿತಿ ಸಡಲಿಕೆ 

  • ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ – 5 ವರ್ಷಗಳು
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ – 3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳಿಗೆ  – 10 ವರ್ಷಗಳು
  • ಮಾಜಿ ಸೈನಿಕರು – ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿರುವ ಸೇವೆ + 3 ವರ್ಷಗಳ

 

ಅರ್ಜಿ ಶುಲ್ಕದ ವಿವರಗಳು:

➡️. ಎಸ್ಸಿ/ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ-  ಅರ್ಜಿ ಶುಲ್ಕ ಇರುವುದಿಲ್ಲ ➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ – ರೂ. 1,000/- ಗಳು

  • ಅರ್ಜಿ ಶುಲ್ಕವನ್ನು ಸಮರ್ಥ ಪೋರ್ಟಲ್ ಆನ್ಲೈನ್ ಮುಖಾಂತರ ಪಾವತಿಸಬೇಕು. Cuknt.samarth.edu.in

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.  

 

ಆಯ್ಕೆಯ ವಿಧಾನ: 

  • ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
  • ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ)
  • ದಾಖಲೆ ಪರಿಶೀಲನೆ
  • ಅರ್ಹತೆ ಪಟ್ಟಿ

 

CUK Jobs 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ’, ಕಲಬುರ್ಗಿ (CUK) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • ಮೊದಲು https://www. cuknt.samarth.edu.in ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅರ್ಜಿ ಹಾಕಲು ಬಯಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಆಯ್ದು ಕೊಂಡು ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಸ್ವಯಂ ದೃಢಿಕರಿಸಿದ ಪ್ರಮಾಣ ಪತ್ರಗಳ ಹಾರ್ಡ್ ಕಾಪಿಯನ್ನು ಕೆಳಗೆ ವಿವರಿಸಿದ ವಿಳಾಸಕ್ಕೆ 10 ದಿನಗಳ ಒಳಗಾಗಿ ಕಳುಹಿಸಬೇಕು.

 

  • ಪ್ರಮಾಣ ಪತ್ರಗಳ ಹಾರ್ಡ್ ಕಾಪಿಯನ್ನು ಕಳಿಸುವ ವಿಳಾಸ :

“The Deputy Registrar, Recruitment Cell, Central University of Karnataka, Kadaganchi, Aland Road, Kalaburagi District -585367 ಲಕೋಟೆಯ ಮೇಲೆ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಖಂಡಿತವಾಗಿ ಬರೆಯಬೇಕು.

  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ 🗓️ 01-10-2025 
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ🗓️ 30-10-2025
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು   👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://www.cuk.ac.in/#/jobs 

 

CUK Jobs
CUK Jobs

Leave a Comment