ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, ‘BWSSB JOBS’ – ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ದಿಂದ ಹಲವು ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 25-ನವೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ https://cetonline.karnataka.gov.in/kea ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
BWSSB JOBS 2025 ಉದ್ಯೋಗ ಮಾಹಿತಿ
‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)’ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 224(165 ಆರ್ ಪಿ ಸಿ ಮತ್ತು 59 ಕಲ್ಯಾಣ ಕರ್ನಾಟಕ) ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಇಂಜಿನಿಯರಿಂಗ್, ಪದವಿ, ದ್ವಿತೀಯ ಪಿಯುಸಿ, ಬೇಸಿಕ್ ಕಂಪ್ಯೂಟರ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿ ಹೋರಾಡಿಸಲಾದ ಹುದ್ದೆಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಹಾಯಕ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) | 18 ಹುದ್ದೆಗಳು |
| ಸಹಾಯಕ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) | 05 ಹುದ್ದೆಗಳು |
| ಸಹಾಯಕ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) | 03 ಹುದ್ದೆಗಳು |
| ಸಹಾಯಕ ಇಂಜಿನಿಯರ್ ಕಂಪ್ಯೂಟರ್ ಸೈನ್ಸ್ (ಗ್ರೂಪ್ -ಬಿ) | 01 ಹುದ್ದೆಗಳು |
| ಜೂನಿಯರ್ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) | 23 ಹುದ್ದೆಗಳು |
| ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) | 23 ಹುದ್ದೆಗಳು |
| ಜೂನಿಯರ್ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) | 11 ಹುದ್ದೆಗಳು |
| ಸಹಾಯಕರು (ಗ್ರೂಪ್ -ಸಿ) | 08 ಹುದ್ದೆಗಳು |
| ಕಿರಿಯ ಸಹಾಯಕರು (ಗ್ರೂಪ್ -ಸಿ) | 65 ಹುದ್ದೆಗಳು |
| ಮಾಪನ ಓದುಗ (ಗ್ರೂಪ್ -ಸಿ) | 63 ಹುದ್ದೆಗಳು |
| ಎರಡನೇ ದರ್ಜೆ ಉಗ್ರಾಣಪಾಲಕ | 04 ಹುದ್ದೆಗಳು |
| ಒಟ್ಟು | 224 ಹುದ್ದೆಗಳು |
ವೇತನದ ವಿವರಗಳು: ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)’ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಹುದ್ದೆಗೆ ಅನುಗುಣವಾಗಿ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.
| ಹುದ್ದೆಯ ಹೆಸರು | ವೇತನ |
| ಸಹಾಯಕ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) | ರೂ. 53,250-1,15,460/- ಗಳು |
| ಸಹಾಯಕ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) | ರೂ. 53,250-1,15,460/- ಗಳು |
| ಸಹಾಯಕ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) | ರೂ. 53,250-1,15,460/- ಗಳು |
| ಸಹಾಯಕ ಇಂಜಿನಿಯರ್ ಕಂಪ್ಯೂಟರ್ ಸೈನ್ಸ್ (ಗ್ರೂಪ್ -ಬಿ) | ರೂ. 53,250-1,15,460/- ಗಳು |
| ಜೂನಿಯರ್ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) | ರೂ. 39,170-99,410/- ಗಳು |
| ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) | ರೂ. 39,170-99,410/- ಗಳು |
| ಜೂನಿಯರ್ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) | ರೂ. 39,170-99,410/- ಗಳು |
| ಸಹಾಯಕರು (ಗ್ರೂಪ್ -ಸಿ) | ರೂ. 34,150-94,410/- ಗಳು |
| ಕಿರಿಯ ಸಹಾಯಕರು (ಗ್ರೂಪ್ -ಸಿ) | ರೂ. 27,750-86,910/- ಗಳು |
| ಮಾಪನ ಓದುಗ (ಗ್ರೂಪ್ -ಸಿ) | ರೂ. 27,750-86,910/- ಗಳು |
| ಎರಡನೇ ದರ್ಜೆ ಉಗ್ರಾಣಪಾಲಕ | ರೂ. 27,750-86,910/- ಗಳು |
ಶೈಕ್ಷಣಿಕ ಅರ್ಹತಾ ವಿವರಗಳು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 26-ನವೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಸಹಾಯಕ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ನ್ನು ಮುಗಿಸಿರಬೇಕು.
ಸಹಾಯಕ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಸಹಾಯಕ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಸಹಾಯಕ ಇಂಜಿನಿಯರ್ ಕಂಪ್ಯೂಟರ್ ಸೈನ್ಸ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಜೂನಿಯರ್ ಇಂಜಿನಿಯರ್ ಸಿವಿಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರ್ ಅಥವಾ ತಂತ್ರಜ್ಞಾನದಲ್ಲಿ 3 ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ಅಥವಾ ತಂತ್ರಜ್ಞಾನದಲ್ಲಿ 3 ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಜೂನಿಯರ್ ಇಂಜಿನಿಯರ್ ಮೆಕಾನಿಕಲ್ (ಗ್ರೂಪ್ -ಬಿ) ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಇಂಜಿನಿಯರ್ ಅಥವಾ ತಂತ್ರಜ್ಞಾನದಲ್ಲಿ 3 ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ಪದವಿ ಪಡೆದಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಸಹಾಯಕರು (ಗ್ರೂಪ್ -ಸಿ) ಹುದ್ದೆಗೆ :
- ಕಲಾ ಅಥವಾ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಪದವಿ ಪಾಸ್ ಆಗಿರಬೇಕು.
- ಅಥವಾ ಮತ್ತು ಕಂಪ್ಯೂಟರ್ ಬೇಸಿಕ್ಸ್ ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿರಬೇಕು.
ಕಿರಿಯ ಸಹಾಯಕರು (ಗ್ರೂಪ್ -ಸಿ) ಹುದ್ದೆಗೆ :
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಮತ್ತು ಕಂಪ್ಯೂಟರ್ ಬೇಸಿಕ್ಸ್ ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿರಬೇಕು.
ಮಾಪನ ಓದುಗ (ಗ್ರೂಪ್ -ಸಿ) ಹುದ್ದೆಗೆ :
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ಎರಡನೇ ದರ್ಜೆ ಉಗ್ರಾಣಪಾಲಕ ಹುದ್ದೆಗೆ :
- ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಮಾಣಪತ್ರ ಕೋರ್ಸ್ನೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು.
- ಮತ್ತು ಕಂಪ್ಯೂಟರ್ ನಲ್ಲಿ 6 ತಿಂಗಳ ಕೋರ್ಸ್ ಮಾಡಿರಬೇಕು.
ವಯಸ್ಸಿನ ಪರಿಮಿತಿ:
‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)’ ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 25-ನವೆಂಬರ್-2025ಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯಸ್ಸು ವರ್ಗದ ಪ್ರಕಾರ ಈ ಕೆಳಗಿನಂತಿವೆ.
- ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 43 ವರ್ಷ ಮೀರಿರಬಾರದು.
- ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 41 ವರ್ಷ ಮೀರಿರಬಾರದು.
- ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 38 ವರ್ಷ ಮೀರಿರಬಾರದು.
🔶 ವಯೋಮಿತಿ ಸಡಲಿಕೆ
- ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷಗಳು
- ಮಾಜಿ ಸೈನಿಕರು – ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿರುವ ಸೇವೆ + 3 ವರ್ಷಗಳ
- ವಿಧವೆಯರಿಗೆ – 10 ವರ್ಷಗಳು
ಅರ್ಜಿ ಶುಲ್ಕದ ವಿವರಗಳು:
- ಸಾಮನ್ಯ ವರ್ಗ, ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 750/- ಗಳು
- ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 500/- ಗಳು
- ವಿಶೇಷ ಚೇತನ ಅಭ್ಯರ್ಥಿಗಳು ಮತ್ತು ತೃತೀಯ ಲಿಂಗಿಗಳು – ಅರ್ಜಿ ಶುಲ್ಕ ರೂ. 250/- ಗಳು
ನೋಟ್ : ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
BWSSB JOBS ನೇಮಕಾತಿಯ ಆಯ್ಕೆಯ ವಿಧಾನ:
- ಕನ್ನಡ ಭಾಷಾ ಪರೀಕ್ಷೆ (ಅನ್ವಯವಾಗಿದ್ದಾರೆ)
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ,
- ದಾಖಲೆ ಪರಿಶೀಲನೆ
- ಕೊನೆಯದಾಗಿ ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿ
BWSSB JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)’ ಅಧಿಕೃತ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://cetonline.karnataka.gov.in/kea ವೆಬ್ ಸೈಟ್‌ಗೆ ಭೇಟಿ ನೀಡಿ.
- ಮೊದಲನೆಯದಾಗಿ ಅಭ್ಯರ್ಥಿಗಳು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಯನ್ನು ನೋಂದಾಯಿಸಿಕೊಳ್ಳಿ.
- ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ವಿವಿರಗಳೊಂದಿಗೆ)
- ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿಕೊಳ್ಳಿ (ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಮಾತ್ರ ಪಾವತಿ ಮಾಡಬೇಕು. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಮ್ ಪಿಎಸ್, ಯುಪಿಐ, ಮೊಬೈಲ್ ವ್ಯಾಲೇಟ್ ಗಳು, ನಗದು ಕಾರ್ಡ್ ಇದರಲ್ಲಿ ಯಾವುದಾದರೊಂದು ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕು).
- ನೋಟ್ : ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರಿಗಿಸುವುದಿಲ್ಲ ಮತ್ತು ಮುಂದಿನ ಯಾವುದೇ ಪರೀಕ್ಷೆಗೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 17-11-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 25-11-2025 |
| KK ಅಭ್ಯರ್ಥಿಗಳು ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| NON-HK ಅಭ್ಯರ್ಥಿಗಳು ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| NON-HK ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು | 👉🏻 ಇಲ್ಲಿ ಕ್ಲಿಕ್ ಮಾಡಿ |
ನೇಮಕಾತಿ ವೆಬ್ಸೈಟ್ ವಿಳಾಸ : https://cetonline.karnataka. gov.in/kea | |

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ `ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)‘ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1 : `ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)‘ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 1 : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 25-ನವೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 2 : ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 2 : ಒಟ್ಟು 224 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಆರ್ ಪಿ ಸಿ -165 ಮತ್ತು ಕಲ್ಯಾಣ ಕರ್ನಾಟಕ -59 ವಿಂಗಡಿಸಲಾಗಿದೆ.

