ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಕರ್ನಾಟಕ (WCD JOBS 2025) ಪೋಷಣ್ ಅಭಿಯಾನ ಯೋಜನೆಯ ಅಡಿಯಲ್ಲಿ ಅಭ್ಯರ್ಥಿಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರು ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 23-ಡಿಸೆಂಬರ್-2025 ಸಂಜೆ 5.30 ಗಂಟೆಯೊಳಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
WCD JOBS 2025 ಉದ್ಯೋಗ ಮಾಹಿತಿ
ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರು ದಿಂದ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 04 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪಿಜಿ, ಪದವಿ, 12ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ನೇಮಕಾತಿ ಹೋರಾಡಿಸಲಾದ ಹುದ್ದೆಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಲಹೆಗಾರರು | 01 ಹುದ್ದೆ |
| ಪ್ರಾಜೆಕ್ಟ್ ಅಸೋಸಿಯೇಟ್ | 01 ಹುದ್ದೆ |
| ಸೆಕ್ರೆಟೇರಿಯಲ್ ಅಸಿಸ್ಟೆಂಟ್ | 01 ಹುದ್ದೆ |
| ಆಫೀಸ್ ಮೆಸೆಂಜರ್ | 01 ಹುದ್ದೆ |
| ಒಟ್ಟು | 04 ಹುದ್ದೆಗಳು |
ಆಯ್ಕೆಯ ಸ್ಥಳ :
- ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ನ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಅಥವಾ ಕರ್ನಾಟಕದಲ್ಲಿ ಕೆಲಸ ಮಾಡಬೇಕಾಗುತ್ತದೆ
ವೇತನದ ವಿವರಗಳು :
- ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ನ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಹುದ್ದೆಗಳ ಅನುಸಾರ ಕೆಳಗೆ ನೀಡಲಾಗಿದೆ. ಈ ಹುದ್ದೆಗಳು ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಇರುವ ಕಾರಣ ಫಿಕ್ಸೆಡ್ ಸ್ಯಾಲರಿ ಯನ್ನು ನಿಗಡಿಮಾಡಲಾಗಿದೆ.
| ಹುದ್ದೆಯ ಹೆಸರು | ಮಾಸಿಕ ಸಂಬಳ |
| ಸಲಹೆಗಾರರು | ರೂ. 60,000/- |
| ಪ್ರಾಜೆಕ್ಟ್ ಅಸೋಸಿಯೇಟ್ | ರೂ. 25,000/- |
| ಸೆಕ್ರೆಟೇರಿಯಲ್ ಅಸಿಸ್ಟೆಂಟ್ | ರೂ. 15,000/- |
| ಆಫೀಸ್ ಮೆಸೆಂಜರ್ | ರೂ. 8000/- |
ಶೈಕ್ಷಣಿಕ ಅರ್ಹತಾ ವಿವರಗಳು :
- ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ನ ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 23-ಡಿಸೆಂಬರ್-2025 ಕ್ಕೆ ಕೆಳಗೆ ವಿವರಿಸಲಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸಲಹೆಗಾರರು ಹುದ್ದೆಗೆ :
- ಸೋಷಲ್ ಸೈನ್ಸ್ ಅಥವಾ ಹೆಲ್ತ್ ಕಮ್ಯೂನಿಕೇಷನ್ ಅಥವಾ ಮಸ್ಸಾ ಕಮ್ಯೂನಿಕೇಷನ್ ಅಥವಾ ಟ್ರೈನಿಂಗ್ ನೊಂದಿಗೆ ರೂರಲ್ ಡೆವಲಪ್ಮೆಂಟ್ ಅಥವಾ ನುಟ್ರಿಷನ್ ನಲ್ಲಿ ಕ್ಯಾಪಸಿಟಿ ಬಿಲ್ಡಿಂಗ್ ಮೇನೇಜ್ಮೆಂಟ್ ಅಥವಾ ಪಬ್ಲಿಕ್ ಹೆಲ್ತ್ ನಲ್ಲಿ ಶೇಕಡಾ 55% ಅಂಕಗಳೊಂದಿಗೆ ಪಿಜಿ ಪದವಿ ಯನ್ನು ಹೊಂದಿರಬೇಕು.
- ಮತ್ತು ಕನಿಷ್ಠ 3 ವರ್ಷಗಳ ಕಾಲ ಕೆಲಸದ ಅನುಭವ ಅಗತ್ಯವಿದೆ.
- MS OFFICE ನಲ್ಲಿ ಪರಿಣಿತಿ ಹೊಂದಿರಬೇಕು (WORD, EXCEL, POWERPOINT).
- ಇಂಗ್ಲೀಷ್ ಭಾಷೆಯನ್ನು ಲೋಕಲ್ ಭಾಷೆಯಲ್ಲಿ ಕನ್ವರ್ಟ್ ಮಾಡುವ ಪರಿಜ್ಞಾನ ಹೊಂದಿರಬೇಕು.
- ಕಂಪ್ಯೂಟರ್ ಜ್ಞಾನ ಅಗತ್ಯವಿದೆ.
ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ:
- ಕಂಪ್ಯೂಟರ್ ಸೈನ್ಸ್ ಅಥವಾ ಐಟಿ ಯಲ್ಲಿ ಪದವಿ ಹೊಂದಿರಬೇಕು. ಮತ್ತು ಕನಿಷ್ಠ 2 ವರ್ಷಗಳ ಕಾಲ ಕೆಲಸದ ಅನುಭವವನ್ನು ಹೊಂದಿರಬೇಕು.
- ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಅಗತ್ಯವಿದೆ
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವವರಾಗಿರಬೇಕು.
ಸೆಕ್ರೆಟೇರಿಯಲ್ ಅಸಿಸ್ಟೆಂಟ್ (DEO) ಹುದ್ದೆಗೆ :
- ಶೇಕಡಾ 50% ರೊಂದಿಗೆ ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
- ಉದ್ಯೋಗಕ್ಕೆ ಸಂಬಂದಿಸಿರುವ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಅಗತ್ಯವಿದೆ.
- ಮತ್ತು ಕಡ್ಡಾಯವಾಗಿ ಎಮ್. ಎಸ್. ಆಫೀಸ್ ನಲ್ಲಿ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ನಲ್ಲಿ ಜ್ಞಾನ ಅಗತ್ಯವಿದೆ.
- ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಟೈಪಿಂಗ್ ನ್ನು ಬಲ್ಲವಾರಾಗಿರಬೇಕು.
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವವರಾಗಿರಬೇಕು.
ಆಫೀಸ್ ಮೆಸೆಂಜರ್ ಹುದ್ದೆಗೆ :
- ಶೇಕಡಾ 50% ರೊಂದಿಗೆ ಎಸ್. ಎಸ್. ಎಲ್. ಸಿ. ವಿದ್ಯಾರ್ಹತೆಯನ್ನು ಪಡೆದಿರಬೇಕು.
- ಉದ್ಯೋಗಕ್ಕೆ ಸಂಬಂದಿಸಿರುವ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷಗಳ ಅನುಭವ ಅಗತ್ಯವಿದೆ.
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವವರಾಗಿರಬೇಕು.
ವಯಸ್ಸಿನ ಪರಿಮಿತಿ:
- ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ನೇಮಕಾತಿ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 23-ಡಿಸೆಂಬರ್-2025 ಕ್ಕೆ 60 ವರ್ಷ ವಯೋಮಿತಿ ಮೀರಿರಬಾರದು.
ಅರ್ಜಿ ಶುಲ್ಕದ ವಿವರಗಳು:
- ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆಯ ವಿಧಾನ:
- ಯಾವುದೇ ಮಾಹಿತಿ ನೀಡಲಾಗಿರುವುದಿಲ್ಲ.
WCD JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://dwcd.karnataka.gov.in ವೆಬ್ ಸೈಟ್‌ಗೆ ಭೇಟಿ ನೀಡಿ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು resumeನ್ನು ಕೆಳಗೆ ನೀಡಲಾದ ವಿಳಾಸಕ್ಕೆ ದಿನಾಂಕ: 23-ಡಿಸೆಂಬರ್-2025 ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕಾಗುತ್ತದೆ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ವಿವಿರಗಳೊಂದಿಗೆ).
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಥವಾ ಕಳಿಸುವ ವಿಳಾಸ :ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪಿಡಬ್ಲೂಡಿ ಕಟ್ಟಡ, ಆನಂದ ರಾವ್ ವೃತ್ತ, ಬೆಂಗಳೂರು – 560009. ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳಿಸಬೇಕು.
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 01-ಡಿಸೆಂಬರ್-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 23-ಡಿಸೆಂಬರ್-2025 |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| ಅಭ್ಯರ್ಥಿಗಳು ಅರ್ಜಿಯನ್ನು | ಆಫ್ ಲೈನ್ ಮೂಲಕ ಸಲ್ಲಿಸಬೇಕು. |
ನೇಮಕಾತಿ ವೆಬ್ಸೈಟ್ ವಿಳಾಸ : https://dwcd.karnataka.gov.in/

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಕರ್ನಾಟಕ (WCD JOBS 2025) ಪೋಷಣ್ ಅಭಿಯಾನ ಯೋಜನೆಯ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1 : ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರಿನಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1 : ಸಲಹೆಗಾರರು, ಪ್ರಾಜೆಕ್ಟ್ ಅಸೋಸಿಯೇಟ್ , ಸೆಕ್ರೆಟೇರಿಯಲ್ ಅಸಿಸ್ಟೆಂಟ್ (DEO), ಆಫೀಸ್ ಮೆಸೆಂಜರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2 : ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರು ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2 : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 23-ಡಿಸೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3 : ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3 : ಒಟ್ಟು 04 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 4 : ಉದ್ಯೋಗದ ಸ್ಥಳ ಎಲ್ಲಿ ಇದೆ?
ಉತ್ತರ 4 : ಅಭ್ಯರ್ಥಿಗಳು ಬೆಂಗಳೂರು ಅಥವಾ ಕರ್ನಾಟಕದಲ್ಲಿ ಕೆಲಸ ಮಾಡಬೇಕಾಗುತ್ತದೆ.
ಪ್ರಶ್ನೆ 5 : ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5 : ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪಿಜಿ, ಪದವಿ, 12ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಶ್ನೆ 6 : ಅರ್ಜಿ ಶುಲ್ಕ ಎಷ್ಟು?
ಉತ್ತರ 6 : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಶ್ನೆ 7 : ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7 : ಅರ್ಜಿಯನ್ನು ಆಫ್ ಲೈನ್ ಮುಖಾಂತರ ಅಂದರೆ ಅಂಚೆ ಅಥವಾ ಖುದ್ದಾಗಿ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ 8 : ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8 : ಸಂದರ್ಶನ, ಕೆಲಸ ಅನುಭವ ಮತ್ತು ಕೊನೆಯದಾಗಿ ಮೆರಿಟ್ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

