Jobnews4u

CIMS ಸಿಬ್ಬಂದಿ ನೇಮಕಾತಿ 2025 ಮಾಹಿತಿ ಕೊನೆಯ ದಿನಾಂಕ – 10-09-2025 – Chikkamagaluru Jobs

CIMS ಸಿಬ್ಬಂದಿ ನೇಮಕಾತಿ 2025: `ಚಿಕ್ಕಮಗಳೂರು ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆ‘ ಚಿಕ್ಕಮಗಳೂರಿನಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಮಾಹಿತಿ ನೀಡಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 22 ಆಗಸ್ಟ್ 2025 ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 12 ವಿವಿಧ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಈ ಹುದ್ದೆಗಳಿಗೆ ಆಫ್ಲೈನ್ ಮೂಖಾಂತರ ಮಾತ್ರ ‘ಕೊನೆಯ ದಿನಾಂಕ 10 ಸೆಪ್ಟೆಂಬರ್ 2025‘ ರ ಸಂಜೆ 5.00 ಗಂಟೆ ಒಳಗಾಗಿ ಅರ್ಜಿಯನ್ನು ಸಲ್ಲಿಸಿ. 

 

CIMS ಸಿಬ್ಬಂದಿ ನೇಮಕಾತಿ 2025 ಉದ್ಯೋಗ ಮಾಹಿತಿ

Chikkamagaluru Jobs
Chikkamagaluru Jobs

 

ಚಿಕ್ಕಮಗಳೂರು ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಮಗಳೂರು (CIMS) 2025 ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಸಹಾಯಕ ಗ್ರಂಥಪಾಲಕ, ಮೆಡಿಕಲ್ ರೆಕಾರ್ಡ್ ತಂತ್ರಜ್ಞ, ಆಡಿಯೋ ವಿಷುವಲ್ ತಂತ್ರಜ್ಞ  ಹಾಗೂ ವಿವಿಧ ಹುದ್ದೆಗಳಿಗೆ ಒಟ್ಟು 12 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಕೆಲಸಕ್ಕೆ ಸಂಬಂದಸಿರುವ ಅನುಭವವನ್ನು ಹೊಂದಿರಬೇಕು. 

 

ಖಾಲಿ ಇರುವ ಹುದ್ದೆಯ ಹೆಸರು
  1. ಸಹಾಯಕ ಗ್ರಂಥಪಾಲಕ   
  2. ಮೆಡಿಕಲ್ ರೆಕಾರ್ಡ್ ತಂತ್ರಜ್ಞ (Technician)
  3. ಆಡಿಯೋ ವಿಷುವಲ್ ತಂತ್ರಜ್ಞ (Technician)
  4. ಡೆಂಟಲ್ ತಂತ್ರಜ್ಞ (Technician)
  5. OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician) 
  6. ಎಕ್ಸ್-ರೇ ತಂತ್ರಜ್ಞ (Technician)
  7. ವೆಂಟಿಲೇಟರ್ ತಂತ್ರಜ್ಞ (Technician)
  8. ಆಕ್ಸಿಜನ್ ತಂತ್ರಜ್ಞ (Technician)
  9. ಬ್ಲಡ್ ಬ್ಯಾಂಕ್  ತಂತ್ರಜ್ಞ (Technician)

 

ಖಾಲಿ ಇರುವ ಹುದ್ದೆಗಳ ಸಂಖೈ

  • ಒಟ್ಟು – 12 ಹುದ್ದೆಗಳು, ಮೇಲೆ ತಿಳಿಸಿದ ಹುದ್ದೆಗೆ ತಲಾ ಒಂದರಂತೆ ನೇಮಕಾತಿ, ಅದರಲ್ಲಿ  
  • OT ತಂತ್ರಜ್ಞ (Technician) ಮಾತ್ರ 4 ಹುದ್ದೆಗಳಿವೆ.

 

ಆಯ್ಕೆಯ ಸ್ಥಳ
  • ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ

 

ವೇತನದ ವಿವರಗಳು
ಹುದ್ದೆಯ ಹೆಸರು ಅಧಿಕೃತ ನೇಮಕಾತಿಯ ವೇತನ
ಸಹಾಯಕ ಗ್ರಂಥಪಾಲಕ   ರೂ. 21,600/- ಗಳು 
ಮೆಡಿಕಲ್ ರೆಕಾರ್ಡ್  ತಂತ್ರಜ್ಞ (Technician)ರೂ. 17,435/- ಗಳು 
ಆಡಿಯೋ ವಿಷುವಲ್ ತಂತ್ರಜ್ಞ (Technician)ರೂ. 17,435/- ಗಳು 
ಡೆಂಟಲ್ ತಂತ್ರಜ್ಞ (Technician)ರೂ. 17,278/- ಗಳು 
OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician) ರೂ. 17,435/- ಗಳು 
ಎಕ್ಸ್-ರೇ ತಂತ್ರಜ್ಞ (Technician)ರೂ. 17,435/- ಗಳು 
ವೆಂಟಿಲೇಟರ್ ತಂತ್ರಜ್ಞ (Technician)ರೂ. 17,435/- ಗಳು 
ಆಕ್ಸಿಜನ್ ತಂತ್ರಜ್ಞ (Technician)ರೂ. 17,435/- ಗಳು 
ಬ್ಲಡ್ ಬ್ಯಾಂಕ್  ತಂತ್ರಜ್ಞ (Technician)ರೂ. 17,435/- ಗಳು 

 

ಶೈಕ್ಷಣಿಕ ಅರ್ಹತಾ ವಿವರಗಳು ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 10-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕಅರ್ಹತೆಗಳನ್ನು ಹೊಂದಿರಬೇಕು.  ಸಹಾಯಕ ಗ್ರಂಥಪಾಲಕ:
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಎಂಎಸ್ಸಿ ಪದವಿ.  
ಮೆಡಿಕಲ್ ರೆಕಾರ್ಡ್  ತಂತ್ರಜ್ಞ (Technician):   
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿ/ಸಂಸ್ಥೆಯಿಂದ ವೈದ್ಯಕೀಯ ದಾಖಲೆ ತಂತ್ರಜ್ಞಾನ ಅಥವಾ ತರಬೇತಿ ಕೋರ್ಸ್ ನಲ್ಲಿ ಮೂರು ವರ್ಷಗಳ  ಬಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ದಾಖಲೆ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವ ಹೊಂದಿರಬೇಕು.
ಆಡಿಯೋ ವಿಷುವಲ್ ತಂತ್ರಜ್ಞ (Technician):
  • ಡಿಪ್ಲೋಮಾ ಇನ್ ಸಿನೆಮಾಟೋಗ್ರಫಿ ಅಥವಾ ಡಿಪ್ಲೋಮಾ ಇನ್ ಸೌಂಡ್ ರೆಕಾರ್ಡಿಂಗ್ & ಇಂಜಿನಿಯರಿಂಗ್ ಪದವಿ.
  • ಮಾನ್ಯತೆ ಪಡೆದ ಸಂಸ್ಥೆಯಿಂದ ಆಡಿಯೋ ವಿಷುವಲ್ ಟೆಕ್ ನಿಷಿಯನ್ ನಲ್ಲಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವ ಹೊಂದಿರಬೇಕು.
ಡೆಂಟಲ್ ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ಸಂಸ್ಥೆಯಿಂದ ಡೆಂಟಲ್ ಮೇಕ್ಯಾನಿಕ್ಸ್ ಟೆಕ್ನಿನಿಷಿಯನ್ ಅಥವಾ ಡೆಂಟಲ್ ಹೈಜೀನ್ ನಲ್ಲಿ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವ ಹೊಂದಿರಬೇಕು.
OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಬಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರಾಗಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವದ ಅಗತ್ಯ ಇದೆ.
ಎಕ್ಸ್-ರೇ ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯಲಾಜಿ ತಂತ್ರಜ್ಞರಾಗಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವ ಹೊಂದಿರಬೇಕು.
ವೆಂಟಿಲೇಟರ್ ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಬಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರಾಗಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವದ ಅಗತ್ಯ ಇದೆ.
ಆಕ್ಸಿಜನ್ ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಬಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಅರವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರಾಗಿ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವದ ಅಗತ್ಯ ಇದೆ.
ಬ್ಲಡ್ ಬ್ಯಾಂಕ್  ತಂತ್ರಜ್ಞ (Technician):
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ವಿಜ್ಞಾನದ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣತೆ.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಬಿ.ಎಸ್ಸಿ. ಪದವಿ.
  • ಮಾನ್ಯತೆ ಪಡೆದ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಹುದ್ದಗೆ ಸಂಬಂದಿಸಿರುವ ಹಾಗೆ ಮೂರು ವರ್ಷಗಳ ಕಾಲ ಕೆಲಸದಲ್ಲಿ ಅನುಭವ ಹೊಂದಿರಬೇಕು.

 

ವಯಸ್ಸಿನ ಪರಿಮಿತಿ
ಸಹಾಯಕ ಗ್ರಂಥಪಾಲಕ18-45
ಮೆಡಿಕಲ್ ರೆಕಾರ್ಡ್  ತಂತ್ರಜ್ಞ (Technician)18-35
ಆಡಿಯೋ ವಿಷುವಲ್ ತಂತ್ರಜ್ಞ (Technician)18-35
ಡೆಂಟಲ್ ತಂತ್ರಜ್ಞ (Technician)18-35
OT ತಂತ್ರಜ್ಞ (Technician)18-35
ಎಕ್ಸ್-ರೇ ತಂತ್ರಜ್ಞ (Technician)18-35
ವೆಂಟಿಲೇಟರ್ ತಂತ್ರಜ್ಞ (Technician)18-35
ಆಕ್ಸಿಜನ್ ತಂತ್ರಜ್ಞ (Technician)18-35
ಬ್ಲಡ್ ಬ್ಯಾಂಕ್  ತಂತ್ರಜ್ಞ (Technician)18-35

 

ಆಯ್ಕೆಯ ವಿಧಾನ

  • CIMSನ ಅಧಿಕೃತ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಮೂಲಕ ನೇಮಕ ಮಾಡಲಾಗುವುದು. 

 

ಅರ್ಜಿ ಶುಲ್ಕದ  ವಿವರಗಳು 
  • ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ. 250/- ಗಳು
  • ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 500/- ಗಳು 
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮಾತ್ರ ಸಲ್ಲಿಸಬೇಕು. 
  •  
🔶 Imp Note:  ಅರ್ಜಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. 

 

CIMS ನೇಮಕಾತಿ 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ 

  • ಅರ್ಜಿ ಸಲ್ಲಿಸುವ ಮೊದಲು “ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಿಕ್ಕಮಗಳೂರು” ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • ಅಭ್ಯರ್ಥಿಗಳು https://cimschikkamagaluru.karnataka.gov.in ವೆಬ್‌ಸೈಟ್‌ನಲ್ಲಿ ಮೂಲಕ ಅಧಿಕೃತ ನೇಮಕಾತಿಯ ಅಧಿಸೂಚನೆಯನ್ನು ಓದಬಹುದು.
  • ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಅರ್ಜಿಗಳನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಮಾತ್ರ ಕಳಿಸಬೇಕು. 
  • ಅರ್ಜಿಯನ್ನು ಕಳಿಸುವ ವಿಳಾಸ:

DEEN AND DIRECTOR,

CHIKKAMAGALURU INSTITUTE OF MEDICAL SCIENCES,

TEGURU VILLAGE,

CHIKKAMAGALURU – 577133

  • ಅರ್ಜಿಯ ಲಕೋಟೆಯ ಮೇಲೆ “ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು” ಖಂಡಿತವಾಗಿ ಬರೆಯಬೇಕು.
  • ವೈಯಕ್ತಿಕವಾಗಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವುದಿಲ್ಲ. 

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ🗓️18-08-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ🗓️01-09-2025 ಸಂಜೆ 5.00 ಗಂಟೆವರೆಗೆ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ ✔️
ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಲು 👉🏻 ಇಲ್ಲಿ ಕ್ಲಿಕ್ ಮಾಡಿ ✔️
ವೆಬ್ ಸೈಟ್ ವಿಳಾಸಕ್ಕಾಗಿ👉🏻 ಇಲ್ಲಿ ಕ್ಲಿಕ್ ಮಾಡಿ ✔️

 

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ ` CIMS ಚಿಕ್ಕಮಗಳೂರುನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: CIMS ಚಿಕ್ಕಮಗಳೂರು 2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ?

ಉತ್ತರ 1: ಸಹಾಯಕ ಗ್ರಂಥಪಾಲಕ, ಮೆಡಿಕಲ್ ರೆಕಾರ್ಡ್ ತಂತ್ರಜ್ಞ (Technician), ಆಡಿಯೋ ವಿಷುವಲ್ ತಂತ್ರಜ್ಞ (Technician), ಡೆಂಟಲ್ ತಂತ್ರಜ್ಞ (Technician), OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician), ಎಕ್ಸ್-ರೇ ತಂತ್ರಜ್ಞ (Technician), ವೆಂಟಿಲೇಟರ್ ತಂತ್ರಜ್ಞ (Technician), ಆಕ್ಸಿಜನ್ ತಂತ್ರಜ್ಞ (Technician), ಬ್ಲಡ್ ಬ್ಯಾಂಕ್  ತಂತ್ರಜ್ಞ (Technician), ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: CIMS ಚಿಕ್ಕಮಗಳೂರು 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 10-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ? ಉತ್ತರ 3: ಒಟ್ಟು 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ? ಉತ್ತರ 4: ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ. 

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: CIMS ಚಿಕ್ಕಮಗಳೂರು ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ಪದವಿ ಹಾಗೂ ಕೆಲಸದ ಅನುಭವ ಹೊಂದಿರಬೇಕು.

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ. 250/- ಗಳು ಮತ್ತು ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 500/- ಗಳು. 

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿ ಸಲ್ಲಿಸಲು ಅಧಿಕೃತ ನೇಮಕಾತಿ ನಮೂನೆಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಜೊತೆಗೆ ಡಿ. ಡಿ. ಯನ್ನು ಲಗತ್ತಿಸಿ ನೋಂದಾಯಿತ ಅಂಚೆ ಮುಖಾಂತರ ಮಾತ್ರ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 8: ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. 

Leave a Comment