Jobnews4u

Jobs in KSRLPS 2025| ವಿವಿಧ ಹುದ್ದೆಗಳ ನೇಮಕಾತಿ, ಬೇಗ ಅರ್ಜಿ ಸಲ್ಲಿಸಿ.

Jobs in KSRLPS 2025: ನೀವು ಉದ್ಯೋಗ ನಿರೀಕ್ಷೆಯಲ್ಲಿದ್ದೀರಾ? ಹಾಗಾದರೆ ನೇಮಕಾತಿ ಮಾಹಿತಿ ತಿಳಿಯೊಣ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘವು (KSRLPS)ಯು ಕರ್ನಾಟಕ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದೆ, ಈ ಸಂಸ್ಥೆಯು ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾಯ್ದೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಮತ್ತು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಬಹುದು. ಈ ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು, KSRLPS ಅಧಿಕೃತ ವೆಬ್‌ಸೈಟ್‌ ಆದ https://jobsksrlps.karnataka.gov.in ಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ 01-ಸೆಪ್ಟೆಂಬರ್-2025ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.  

Jobs in KSRLPS 2025 ಉದ್ಯೋಗ ಮಾಹಿತಿ

Jobs in KSRLPS 2025
Jobs in KSRLPS 2025

 

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ(KSRLPS) 2025 ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಬ್ಲಾಕ್ ಮ್ಯಾನೇಜರ್, ಕ್ಲಸ್ಟರ್ ಸೂಪರ್‌ವೈಸರ್ ಹಾಗೂ ವಿವಿಧ ಹುದ್ದೆಗಳಿಗೆ ಒಟ್ಟು 22 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಮತ್ತು ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೆಳಕಂಡಂತೆ ವಿವರಿಸಲಾಗಿದೆ.

 

ಖಾಲಿ ಇರುವ ಹುದ್ದೆಯ ಹೆಸರು

  • ಬ್ಲಾಕ್ ಮ್ಯಾನೇಜರ್ 
  • ಕ್ಲಸ್ಟರ್ ಸೂಪರ್ವೈಸರ್ ಕೌಶಲ್ಯ 
  • ಡಿಐಒ/ ಎಂ. ಐ. ಎಸ್. ಸಂಯೋಜಕ
  • ತಾಲೂಕ ಕಾರ್ಯಕ್ರಮ ಮ್ಯಾನೇಜರ್  

 

ಖಾಲಿ ಇರುವ ಹುದ್ದೆಗಳ ಸಂಖೈ

  • ಒಟ್ಟು – 22 ಹುದ್ದೆಗಳು, ಅದರಲ್ಲಿ 
  1. ಬ್ಲಾಕ್ ಮ್ಯಾನೇಜರ್ – 13 ಹುದ್ದೆಗಳು 
  2. ಕ್ಲಸ್ಟರ್ ಸೂಪರ್ವೈಸರ್ ಕೌಶಲ್ಯ – 3 ಹುದ್ದೆಗಳು 
  3. ಡಿಐಒ/ ಎಂ. ಐ. ಎಸ್. ಸಂಯೋಜಕ – 2 ಹುದ್ದೆಗಳು 
  4. ತಾಲೂಕ ಪ್ರೊಗ್ರಾಮ್ ಮ್ಯಾನೇಜರ್ – 4 ಹುದ್ದೆಗಳು 

 

ಆಯ್ಕೆಯ ಸ್ಥಳ

  • ಕರ್ನಾಟಕದ ಶಿವಮೊಗ್ಗ ಜಿಲ್ಲೆ  

ವೇತನದ ವಿವರಗಳು

  • ✔️ KSRLPS ಸಂಸ್ಥೆಯ ನಿಯಮಗಳ ಪ್ರಕಾರ ವೇತನ ಇರುತ್ತದೆ. 

ಶೈಕ್ಷಣಿಕ ಅರ್ಹತಾ ವಿವರಗಳು 

 ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವಅಭ್ಯರ್ಥಿಗಳು01-ಸೆಪ್ಟೆಂಬರ್-2025ಕೆಳಗೆತಿಳಿಸಿರುವಶೈಕ್ಷಣಿಕಅರ್ಹತಾಸ್ಥಳಗಳನ್ನು ಹೊಂದಿರಬೇಕು.,

  • ಬ್ಲಾಕ್ ಮ್ಯಾನೇಜರ್ ಹುದ್ದೆಗೆ 

ಎಂ.ಎಸ್ಸಿ.( ಕೃಷಿ)ಯ ಜೊತೆಗೆ 1 ವರ್ಷ ಅಥವಾ ಬಿ.ಎಸ್ಸಿ. (ಕೃಷಿ) ಜೊತೆಗೆ 3 ವರ್ಷಗಳು ಅಥವಾ ಸ್ನಾತಕೋತ್ತರ ಪದವಿ ಜೊತೆಗೆ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

  • ಕ್ಲಸ್ಟರ್ ಸೂಪರ್ವೈಸರ್ ಕೌಶಲ್ಯ ಹುದ್ದೆಗೆ

ಯಾವುದೇ ಪದವಿ

ಮತ್ತು 

2 ವರ್ಷಗಳ ಅನುಭವ, ಮತ್ತು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಓದಲು, ಬರೆಯಲು, ಮಾತನಾಡಲು ಉತ್ತಮ ಪರಿಣಿತಿ ಪಡೆದಿರಬೇಕು. 

  • ಡಿಐಒ/ ಎಂ. ಐ. ಎಸ್. ಸಂಯೋಜಕ ಹುದ್ದೆಗೆ 

ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ 

ಮತ್ತು 

3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. 

  • ತಾಲೂಕ ಪ್ರೊಗ್ರಾಮ್ ಮ್ಯಾನೇಜರ್   ಹುದ್ದೆಗೆ 

ಪೂರ್ಣ ಸಮಯದ ಸ್ನಾತಕೋತ್ತರ ಪದವಿ/ಪಿ. ಜಿ. ಡಿಪ್ಲೊಮಾ. 

ಮತ್ತು 

5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಓದಲು, ಬರೆಯಲು, ಮಾತನಾಡಲು ಉತ್ತಮ ಪರಿಣಿತಿ ಪಡೆದಿರಬೇಕು. ಕಂಪ್ಯೂಟರ್ ನಲ್ಲಿ ಕೆಲಸ ಮಾಡವ ಪರಿಣಿತಿ ಪಡೆದಿರಬೇಕು.

 

ವಯಸ್ಸಿನ ಪರಿಮಿತಿ

KSRLPS ಉದ್ಯೋಗಗಳು 2025 ನಲ್ಲಿ ನೇಮಕಾತಿಗಾ ಅರ್ಜಿಸಲ್ಲಿಸುವ ಅಭ್ಯರ್ಥಿಯ30-08-2025ಗೆ, ವಯಸ್ಸು ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷಗಳು ಮೀರಿರಬಾರದು. 

 

ಆಯ್ಕೆಯ ವಿಧಾನ

  • ಲಿಖಿತ ಪರೀಕ್ಷೆ
  • ಮೆರಿಟ್ ಪಟ್ಟಿ
  • ಪರೀಕ್ಷೆಯಲ್ಲಿ ಉತ್ತೀಣರಾದವರಿಗೆ ವ್ಯಕ್ತಿಕ ಸಂದರ್ಶನ

Jobs in KSRLPS 2025ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು

  • ಅರ್ಜಿ ಸಲ್ಲಿಸುವ ಮೊದಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ(KSRLPS)R ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • ಅಧಿಕೃತವಾದ https://jobsksrlps.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. 
  • ಮತ್ತು ಅದರ ಮುಖಪುಟದಲ್ಲಿ `ಇತ್ತೀಚಿನ ಉದ್ಯೋಗಗಳು’ ಓಪನ್’ ಆಗುತ್ತದೆ ಅದರಲ್ಲಿ ನಿಮಗೆ ಆಸಕ್ತಿ ಇರುವ ಜಿಲ್ಲೆಯ ಸ್ಥಳಕ್ಕೆ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ. 
  • ಅರ್ಜಿಯು ತೆರೆದ ನಂತರ ಅದರ ಮಾಹಿತಿಯನ್ನು ಸರಿಯಾಗಿ ಓದಿ ಅದರ ನಂತರ `ಈಗ ಅನ್ವಯಿಸು’ ಕ್ಲಿಕ್ ಮಾಡಿ.      
  • ತದನಂತರ ‘ಸೈನ್ ಇನ್’ ಮುಖಪುಟದಲ್ಲಿ ‘ ‘ಖಾತೆ ರಚಿಸಿ’ ಅನ್ನು ಮಾಡಿಕೊಳ್ಳಿ ಅಥವಾ ನಿಮಗೆ ಮುಂಚೆಯೇ ಎಕೌಂಟ್ ಇದ್ದಲ್ಲಿ ಲಾಗಿನ್ ಮಾಡಿಕೊಳ್ಳಿ.
  • ನಂತರದಲ್ಲಿ ಅರ್ಜಿ ಮಾಹಿತಿಯನ್ನು ಸರಿಯಾಗಿ ತುಂಬಿ ಅಪ್ಲೈ ಮಾಡಿ.
  • ಆ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಆಪ್ಲೈ ಮಾಡಿದ ಅರ್ಜಿಯ ಪ್ರತಿ ಪ್ರಿಂಟ್ ಔಟ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
Jobs in KSRLPS 2025ಕೆಲಸ ಕಾರ್ಯಗಳು
  • ಬ್ಲಾಕ್ ಮ್ಯಾನೇಜರ್ ಹುದ್ದೆಗೆ ಸಂಬಂದಿಸಿದಂತೆ ಕೆಲಸ ಕಾರ್ಯಗಳು

ಬ್ಲಾಕ್ ಮಟ್ಟದಲ್ಲಿ ಕೃಷಿ ಜೀವನೋಪಾಯಕ್ಕೆ ಸಂಬಂದಿಸಿದ ಎಲ್ಲಾ ವಿಷಯಗಳ ಬಗ್ಗೆ ಉತ್ತಮಗೊಳಿಸುವಿಕೆ, ಮಹಿಳಾ ಕಿಸಾನ್ಅನ್ನು ಮುಂಡಲೆಗೆತರುವುದು, ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಚಟುವಟಿಕೆಯಲ್ಲಿ ಸಮನ್ವಯ ನೋಡಿಕೊಳ್ಳುವುದು, ವಿವಿಧ ಲೈನ್ ಇಲಾಖೆಗಳ ಜೊತೆಗೆ ಬ್ಲಾಕ್ ಮಟ್ಟದಲ್ಲಿ ಸಮನ್ವಯ ಕಪಡಿಕೊಳ್ಳುವುದು, ನಿಯತಕಾಲಿಕ ವರದಿಗಳನ್ನು ಸಲ್ಲಿಕೆ, CRPS ವಿಷಯಗಳ ಬಗ್ಗೆ ಮೇಲ್ವಿಚಾರಣೆ ಮತ್ತು ಬೆಂಬಲ ನೀಡುವುದು, ಮಿಷನ್ ಉನ್ನತ ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದರು. 

  • ಕ್ಲಸ್ಟರ್ ಸೂಪರ್ವೈಸರ್ ಕೌಶಲ್ಯ ಹುದ್ದೆಗೆ ಸಂಬಂದಿಸಿದಂತೆ ಕೆಲಸ ಕಾರ್ಯಗಳು

ಸಮೂಹ ಮಾಧ್ಯಮಗಳ ಮುಖಾಂತರ ಜಾಗೃತಿ ಮೂಡಿಸುವುದು, ಜನಸಂದಣಿ ಶಿಬಿರದಲ್ಲಿ ಆಯೋಜನೆ ಮಾಡುವುದು, ಮಂಜೂರಾಗಿರುವ ಜಿಲ್ಲಾ ಗುರಿ, ತರಬೇತಿ ಕೇಂದ್ರದ ವಿವರಗಳು, ಕೋರ್ಸ್ ಕೆಲಸದ ವಿವರಗಳು ಮುಂತಾದ ವಿಷಯಗಳ ಬಗ್ಗೆ ಪಿಐಎ ಜೊತೆಗೆ ಸಮನ್ವಯವನ್ನು ಕಾಪಾಡುವುದು. 

  • ಡಿಐಒ/ ಎಂ. ಐ. ಎಸ್. ಸಂಯೋಜಕ ಹುದ್ದೆಗೆ ಸಂಬಂದಿಸಿದಂತೆ ಕೆಲಸ ಕಾರ್ಯಗಳು

ಯೋಜನೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ಯೋಜನೆ ಪ್ರಮುಖ ಮತ್ತು ದತ್ತಾಂಶದ ಮಾಹಿತಿ ಹರಿವನ್ನು ಸುಗಮ ದಾಖಲಿಸುವುದು, MIS ಡೇಟಾ ಮತ್ತು ನಿಖರವಾದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು, ದಾಖಲೆ ಸಾಮಗ್ರಿಗಳು ಮತ್ತು ಮಹಿತಿಯನ್ನು ಸಂಗ್ರಹಿಸಿ ಸಿದಡಪಡಿಸಬೇಕು, ಹಾಗೂ ಕಾಲಕಾಲಕ್ಕೆ ನಿಯೋಜಿಸಿರುವ ಇತರ ಕಾರ್ಯಗಳು. 

  • ತಾಲೂಕ ಪ್ರೊಗ್ರಾಂ ಮ್ಯಾನೇಜರ್ ಹುದ್ದೆಗೆ ಸಂಬಂದಿಸಿದಂತೆ ಕೆಲಸ ಕಾರ್ಯಗಳು

ಎಲ್ಲಾ ವಿಷಯಗಳ ಬಗ್ಗೆ ತಾಂತ್ರಿಕ ಮತ್ತು ನಿರ್ವಹಣೆಗೆ ಅಗತ್ಯವಿರುವ ಬೆಂಬಲವನ್ನು ನೀಡುವುದು, ಕ್ಷೇತ್ರಗಳಿಗೆ ಭೇಟಿಕೊಡುವುದು, ಮಹಿಳೆಯರು, SC/ST, ವಿಕಲಚೇತನರು ಮತ್ತು ಇತರ ಹಿಂದುಳಿದ ವರ್ಗಗಳ ಬ್ಲಾಕ್‌ನಲ್ಲಿರುವ ದುರ್ಬಲ ಪಾಲುದಾರರನ್ನು, ನೇಮಕ ಮಾಡುವುದು, ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ ಸಾಧಿಸಿಕೊಳ್ಳಬೇಕು, DMMUಗೆ ವರದಿ, DMMU ಸಂಬಂದಿಸಿರುವ ಇತರ ಕಾರ್ಯಗಳನ್ನು ಕೈಗೊಳ್ಳಬೇಕು.

 
ಪ್ರಮುಖ ದಿನಾಂಕಗಳ ಮಾಹಿತಿ 
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ18-08-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ01-09-2025
ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ವಿಳಾಸಕ್ಕಾಗಿಇಲ್ಲಿ ಕ್ಲಿಕ್ ಮಾಡಿ

 

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ ` KSRLPS’ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: KSRLPS  2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ?

ಉತ್ತರ 1: ಬ್ಲಾಕ್ ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್ , ಡಿಐಒ/ ಎಮ್. ಐ. ಎಸ್. ಸಂಯೋಜಕರು, ತಾಲೂಕ ಪ್ರೊಗ್ರಾಂ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: KSRLPS 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದಾಗಿದೆ?

ಉತ್ತರ 2: ಅರ್ಜಿ ಸಲ್ಲಿಸುವ 01-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 22 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಹಾಗೂ ಬ್ಲಾಕ್ ಮ್ಯಾನೇಜರ್ ಹುದ್ದೆಗೆ -13, ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗೆ -3 , ಡಿಐಒ/ ಎಂ. ಐ. ಎಸ್. ಸಂಯೋಜಕ ಹುದ್ದೆಗೆ -2, ತಾಲೂಕ ಪ್ರೊಗ್ರಾಮ್ ಮ್ಯಾನೇಜರ್ ಹುದ್ದೆಗೆ -4 ಹುದ್ದೆಗಳ ವರ್ಗೀಕರಣ ಮಾಡಲಾಗಿದೆ.

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 4: ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆ.

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: ಪದವಿ ತೇರ್ಗಡೆಯ ಪ್ರಕಾರ, KSRLPS ನೇಮಕಾತಿ ನಿಯಮಗಳ ಪ್ರಕಾರ ಕೆಲಸದ ಅನುಭವ ಹೊಂದಿರಬೇಕು.

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಈ ಹುದ್ದೆಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿ ಸಲ್ಲಿಸಲು ಸಂಪೂರ್ಣವಾಗಿ ಅಧಿಕೃತ ವೆಬ್‌ಸೈಟ್‌ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ಯಾವುದು?

ಉತ್ತರ 8: ಮೊದಲು ಪರೀಕ್ಷೆ ಇರುತ್ತದೆ ಅಥವಾ ನಂತರ ಅರ್ಹತೆ ಪಡೆದಿರುವವರು ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತರಿಸಿದವರ ಸಂದರ್ಶನ ಕರೆಯಲಾಗುವ ಅನಂತರ ಮೆರಿಟ್ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು.      

Leave a Comment