Jobnews4u

Department of Treasuries Jobs 2025| ವಿವಿಧ ಸಲಹೆಗಾರರಿಗಾಗಿ ಅರ್ಜಿ ಆಹ್ವಾನ, ಕೊನೆಯ ದಿನಾಂಕ 10 Sep 2025

Department of Treasuries Jobs 2025: ಖಜಾನೆಯ ಆಯುಕ್ತರ ಕಚೇರಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿಗೆ ನೀವು ಅರ್ಹ ಮತ್ತು ಆಸಕ್ತಿ ಹೊಂದಿದ್ದರೆ, ಅರ್ಜಿ ನಮೂನೆಯು ಅಧಿಕೃತ ವೆಬ್ಸೈಟ್‌ ನಲ್ಲಿ ಇರುತ್ತದೆ ಎಂದು ನೀವು ತಿಳಿದಿರಬೇಕು. 

ಕರ್ನಾಟಕ ಸರ್ಕಾರದ ಒಳಪಟ್ಟಿರುವ ಸಂಸ್ಥೆಯಾಗಿದೆ. ಇದರಲ್ಲಿ ʻವಿವಿಧ ಸಲಹೆಗಾರರುʼ ಹುದ್ದೆಗಳಿಗೆ ಸೇರ ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು 10-ಸೆಪ್ಟೆಂಬರ್-2025 ರ ಮೊದಲು ಅಥವಾ ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಸಂಪೂರ್ಣವಿವರಗಳೊಂದಿಗೆ CV/Resume ಅನ್ನು ಆಫ್ಲೈನ್‌ ಮೂಲಕ ನಿಗದಿತ ಅಧಿಕೃತ ವಿಳಾಸಕ್ಕೆ ಕಳಿಹಿಸಬೇಕು.

Department of Treasuries Jobs 2025 ಉದ್ಯೋಗ ಮಾಹಿತಿ

B.E Jobs 2025
B.E Jobs 2025

ಖಜಾನೆಯ ಆಯುಕ್ತರ ಕಚೇರಿ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ʻವಿವಿಧ ಸಲಹೆಗಾರರುʼ ಹುದ್ದೆಗಳಿಗೆ ಒಟ್ಟು 4 ಹುದ್ದೆಗಳನ್ನು ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಹಾಗೂ ಅರ್ಹತೆಯ ಮಾನದಂಡಗಳು, ಕೊನೆಯ ದಿನಾಂಕ, ಆಯ್ಕೆಯ ವಿಧಾನ ಹಾಗೂ ಹೆಚ್ಚಿನದಾಗಿ ಅರಿತುಕೊಳ್ಳಲು ಈ ಲೇಖನವನ್ನುಓದಿ.

 

ಖಾಲಿ ಇರುವ ಹುದ್ದೆಯ ಹೆಸರು

  • ಸೊಲ್ಯುಷನ್‌ ಅರ್ಕಿಟೆಕ್‌
  • ಬ್ಯುಜಿನೆಸ್‌ ಪ್ರೊಸೆಸ್‌ ರಿ-ಇನ್ಜಿಯರಿಂಗ್‌ (BPR)
  • ಡೊಮೆನ್‌ ಎಕ್ಸ್‌ಪರ್ಟ್‌
  • ಪ್ರೊಜೆಕ್ಟ್‌ ಮ್ಯಾನೆಜರ್

ಖಾಲಿ ಇರುವ ಹುದ್ದೆಗಳ ಸಂಖೈ

  • ಒಟ್ಟು – 4 ಹುದ್ದೆಗಳು
  • ಸೊಲ್ಯುಷನ್‌ ಅರ್ಕಿಟೆಕ್‌ – 1 ಹುದ್ದೆ
  • ಬ್ಯುಜಿನೆಸ್‌ ಪ್ರೊಸೆಸ್‌ ರಿ-ಇನ್ಜಿಯರಿಂಗ್‌ (BPR) – 1 ಹುದ್ದೆ
  • ಡೊಮೆನ್‌ ಎಕ್ಸ್‌ಪರ್ಟ್‌ – 1 ಹುದ್ದೆ
  • ಪ್ರೊಜೆಕ್ಟ್‌ ಮ್ಯಾನೆಜರ್ – 1 ಹುದ್ದೆ

ಆಯ್ಕೆಯ ಸ್ಥಳ

  • ಬೆಂಗಳೂರು – ಕರ್ನಾಟಕ

 ಶೈಕ್ಷಣಿಕ ಅರ್ಹತಾ ವಿವರಗಳು 

 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 10-ಸೆಪ್ಟಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
  • ಸೊಲ್ಯುಷನ್‌ ಅರ್ಕಿಟೆಕ್‌
  1. B.E. ಅಥವಾ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು.
  2. 10 ವರ್ಷಗಳ ಕಾಲ ಉತ್ತಮ ಪರಿಹಾರ ವಾಸ್ತುಶಿಲ್ಪಿ ( Solution Architect) ಆಗಿ ಕೆಲಸದ ಅನುಭವ ಇರಬೇಕು. 

                          ಅಥವಾ

     ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳಲ್ಲಿ 5-7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರಬೇಕು.

  • ಬ್ಯುಜಿನೆಸ್‌ ಪ್ರೊಸೆಸ್‌ ರಿ-ಇನ್ಜಿಯರಿಂಗ್‌ (BPR)
  1. B.E. ಅಥವಾ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು.
  2. IFMS ಅಥವಾ BFSI ಪರಿಹಾರಗಳ ವಿನ್ಯಾಸ, ಅನುಷ್ಠಾನ ಮತ್ತು ಬೆಂಬಲದಲ್ಲಿ 5 ವರ್ಷಗಳ ಕಾಲ ಕೆಲಸದ ಅನುಭವ ಇರಬೇಕು. 
  • ಡೊಮೆನ್‌ ಎಕ್ಸ್‌ಪರ್ಟ್‌
  1. B.E. ಅಥವಾ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು.
  2. IFMS ಅಥವಾ BFSI ಪರಿಹಾರಗಳ ವಿನ್ಯಾಸ, ಅನುಷ್ಠಾನ ಮತ್ತು ಬೆಂಬಲದಲ್ಲಿ 5 ವರ್ಷಗಳ ಕಾಲ ಕೆಲಸದ ಅನುಭವ ಇರಬೇಕು. IFMS ವ್ಯವಹಾರ ಪ್ರಕ್ರಿಯೆ ಮ್ಯಾಪಿಂಗ್‌, ವರ್ಕಫ್ಲೋ , ಡೇಟಾ ಮಾದರಿ, ಕ್ರಿಯಾತ್ಮಕ ವಿನ್ಯಾಸ ಮತ್ತು ಎಂರ್ಟಪ್ರೈಸ್‌ ಫಂಕ್ಷನಲ್‌ ಆರ್ಕಿಟೆಕ್ಚರ್‌ ನಲ್ಲಿ ಉತ್ತಮ ತಿಳಿವಳಿಕೆ ಹೊಂದಿರಬೇಕು.
  • ಪ್ರೊಜೆಕ್ಟ್‌ ಮ್ಯಾನೆಜರ್ – 1 ಹುದ್ದೆ
  • B.E. ಅಥವಾ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು.
  • IFMS ಅಥವಾ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಪ್ರೊಜೆಕ್ಟ್‌ ಡೆಲಿವರಿ, ಪ್ರೊಜೆಕ್ಟ್‌ ಮ್ಯಾನೆಜ್ ಮೆಂಟ್‌ ನಲ್ಲಿ 10 ವರ್ಷಗಳ ಕಾಲ ಕೆಲಸದ ಅನುಭವ ಇರಬೇಕು. 

ವಯಸ್ಸಿನ ಪರಿಮಿತಿ

  • ಖಜಾನೆಯ ಆಯುಕ್ತರ ಕಚೇರಿ ನಿಯಮಗಳ ಪ್ರಕಾರ ಇರುತ್ತದೆ.
ʻವಿವಿಧ ಕನ್ಸ್‌ಲ್ಟ್‌ಂಟ್ʼ ಹುದ್ದೆಗಳಿಗೆ ಜವಾಬ್ದಾರಿಗಳು ಮತ್ತು ಷರತ್ತುಗಳು

ಖಜಾನೆಯ ಆಯುಕ್ತರ ಕಚೇರಿಯು ಪ್ರತಿಯೊಂದು ಹುದ್ದೆಗೆ  ʻಜವಾಬ್ದಾರಿಗಳು ಮತ್ತು ಷರತ್ತುಗಳುʼ ಒಳಗೊಂಡಿದೆ, ಅವುಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ.

ಸೊಲ್ಯುಷನ್‌ ಅರ್ಕಿಟೆಕ್‌ ರವರ ಜವಾಬ್ದಾರಿಗಳು ಮತ್ತು ಷರತ್ತುಗಳು

  • ಜವಾಬ್ದಾರಿಗಳು: IFMS ವ್ಯವಸ್ಥೆ ಖಜಾನೆ 2.0ಯ ಸಂಪೂರ್ಣ ಅಧ್ಯಯನ ಮತ್ತು ಈ ವ್ಯವಸ್ಥೆಯ ವಿನ್ಯಾಸ, ತಂತ್ರಜ್ಞಾನ, ಕಾರ್ಯಾತ್ಮಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು SI ಜೊತೆ ಕೆಲಸ ಮಾಡುವುದು, ಹಾಗೂ ಸಂಭವನೀಯ ಅಪಾಯಗಳನ್ನು ಗುರುತಿಸುವುದು.
  • ಷರತ್ತುಗಳು: ಸಂಪತ್ತು ಆಯುಕ್ತರು ಅಥವಾ ಸಂಪತ್ತು ಆಯುಕ್ತರಿಂದ ಗುರುತಿಸಲಾದ ಯಾವುದೇ ಪ್ರತಿನಿಧಿಗಳಿಗೆ ವರದಿ ಮಾಡಬೇಕಾಗುತ್ತದೆ. ಈ ಹುದ್ದೆಯು ಒಂದು ವರ್ಷದ ಒಪ್ಪಂದ ಸಂಭಂದಿತವಾಗಿದೆ. ಅಗತ್ಯ ಆಧಾರವಾಗಿ ಕಾರ್ಯನಿರ್ವಹಣೆಯು ಸಮಾಧಾನಕರವಾಗಿದ್ದರೆ ಇನ್ನೊಂದು ವರ್ಷ ವಿಸ್ತಾರಗೊಳ್ಳುವುದು.

ಬ್ಯುಜಿನೆಸ್‌ ಪ್ರೊಸೆಸ್‌ ರಿ-ಇನ್ಜಿಯರಿಂಗ್‌ (BPR) ರವರ ಜವಾಬ್ದಾರಿಗಳು ಮತ್ತು ಷರತ್ತುಗಳು

  • ಜವಾಬ್ದಾರಿಗಳು: ವ್ಯಾಪಾರವಾಗಿ ಪ್ರಕ್ರಿಯೆ ವಿಶ್ಲೇಷಣೆ ಮತ್ತು ನಕ್ಷೆ: ಅಸ್ತಿತ್ವದಲ್ಲಿರುವ IFMS ಮೊಡ್ಯೂಲ್‌ ಗಳ, ವ್ಯವಹಾರ ಪ್ರಕ್ರಿಯೆಗಳ, ಡೇಟಾ ಮಾದರಿಯಿಂದ ಕಾರ್ಯದೋಷ ನಕ್ಷೆ, ಆಂತರಿಕ ಮತ್ತು ವಿಚಾರಣಾ ಏಕೀಕರಣ ಅಗತ್ಯವಿರುವ ಕಾರ್ಯಕ್ರಮವನ್ನು ಗುರುತಿಸುವುದು 
  • ಷರತ್ತುಗಳು: ಆರ್ಥಿಕ ನೆಲೆಯ ಆಯುಕ್ತರಿಗೆ ಅಥವಾ ಆರ್ಥಿಕ ನೆಲೆಯ ಆಯುಕ್ತರಿಂದ ಗುರುತಿಸಲಾದ ಯಾವುದೇ ಪ್ರತಿನಿಧಿಗಳಿಗೆ ವರದಿ ಮಾಡಬೇಕಾಗುತ್ತದೆ. ಈ ಹುದ್ದೆಯು ಒಂದು ವರ್ಷದ ಒಪ್ಪಂದ ಸಂಭಂದಿತವಾಗಿದೆ. ಅಗತ್ಯ ಆಧಾರವಾಗಿ ಕಾರ್ಯನಿರ್ವಹಣೆಯು ಸಮಾಧಾನಕರವಾಗಿದ್ದರೆ ಇನ್ನೊಂದು ವರ್ಷ ವಿಸ್ತಾರಗೊಳ್ಳುವುದು. 

ಡೊಮೆನ್‌ ಎಕ್ಸ್‌ಪರ್ಟ್‌ರವರ ಜವಾಬ್ದಾರಿಗಳು ಮತ್ತು ಷರತ್ತುಗಳು

  • ಜವಾಬ್ದಾರಿಗಳು: ಪ್ರಸ್ತುತ IFMS ವ್ಯವಸ್ಥೆಯ, ಕಾರ್ಯತ್ಮಕ ಮಾದರಿಗಳು, ಮುಖ್ಯ ಮತ್ತು ಮುಖ್ಯವಲ್ಲದ ಕಾರ್ಯಕ್ಷಮತೆಗಳು, ಡೇಟಾ ಮಾದರಿ, ವ್ಯಾಪಾರ ಪ್ರಕ್ರಿಯೆ ಕುರಿತ ಮೂಲಭೂತ ಅಧ್ಯಯನ, ಹಾಗೂ IFMS ಪರಿಹಾರಗಳ ಅರಿವು ಮತ್ತು ಮಾರ್ಗದರ್ಶನ ನಿಡಬೇಕು.
  • ಷರತ್ತುಗಳು: ಖಜಾನೆಯ ಆಯುಕ್ತರಿಗೆ ಅಥವಾ ಖಜಾನೆಯ ಆಯುಕ್ತರಿಂದ ಗುರುತಿಸಲಾದ ಪ್ರತಿನಿಧಿಗಳಿಗೆ ವರದಿ ಮಾಡಬೇಕಾಗುತ್ತದೆ. ಈ ಹುದ್ದೆಯು ಒಂದು ವರ್ಷದ ಒಪ್ಪಂದ ಸಂಭಂದಿತವಾಗಿದೆ. ಅಗತ್ಯ ಆಧಾರವಾಗಿ ಕಾರ್ಯನಿರ್ವಹಣೆಯು ಸಮಾಧಾನಕರವಾಗಿದ್ದರೆ ಇನ್ನೊಂದು ವರ್ಷ ವಿಸ್ತಾರಗೊಳ್ಳುವುದು. 

ಪ್ರೊಜೆಕ್ಟ್‌ ಮ್ಯಾನೆಜರ್ ರವರ ಜವಾಬ್ದಾರಿಗಳು ಮತ್ತು ಷರತ್ತುಗಳು

  • ಜವಾಬ್ದಾರಿಗಳು: ಖಜಾನೆ 2.0 ಮತ್ತು ಖಜಾನೆ 3.0 ಯ ವಿವಿಧ ಚಟುವಟಿಕೆಗಳು ಮತ್ತು ಯೋಜನೆ ಪಟ್ಟಿ ತಯಾರಿಸುವುದು, ಹಾಗೂ ಕಾಲಕಾಲಕ್ಕೆ ಸ್ಥಿತಿ ನವೀಕರಣಗೊಳಿಸುವುದು.
  • ಷರತ್ತುಗಳು: ಪ್ರೊಜೆಕ್ಟ್‌ ಮ್ಯಾನೇಜರ್‌ ಅಥವಾ ಖಜಾನೆಯ ಆಯುಕ್ತರಿಂದ ಗುರುತಿಸಲಾದ ಪ್ರತಿನಿಧಿಗಳಿಗೆ ವರದಿ ಮಾಡಬೇಕಾಗುತ್ತದೆ. ಈ ಹುದ್ದೆಯು ಒಂದು ವರ್ಷದ ಒಪ್ಪಂದ ಸಂಭಂದಿತವಾಗಿದೆ. ಅಗತ್ಯ ಆಧಾರವಾಗಿ ಕಾರ್ಯನಿರ್ವಹಣೆಯು ಸಮಾಧಾನಕರವಾಗಿದ್ದರೆ ಇನ್ನೊಂದು ವರ್ಷ ವಿಸ್ತಾರಗೊಳ್ಳುವುದು. 

B.E. Jobs 2025 ಆಯ್ಕೆಯ ವಿಧಾನ

  • ಸಂದರ್ಶನ ಮೂಲಕ ನೇಮಕ ಮಾಡಲಾಗುವುದು.
🔶Imp : ಸಂದರ್ಶನ ಹಾಜರಾಗಲು ಯಾವುದೇ ರೀತಿಯ TA/DA ಒದಗಿಸಲಾಗುವುದಿಲ್ಲ.
 
Department of Treasuries Jobs 2025 ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ
    • ಅರ್ಜಿ ಸಲ್ಲಿಸುವ ಮುಂಚೆ ʻಖಜಾನೆಯ ಆಯುಕ್ತರ ಕಚೇರಿʼಯ ʻವಿವಿಧ ಸಲಹೆಗಾರರುʼ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
    • https://khajane.karnataka.gov.in ವೆಬ್‌ ಸೈಟ್‌ಗೆ ಭೇಟಿ ನೀಡಿ.
    • ವೆಬ್‌ ಸೈಟ್‌ ಒಪೆನ್‌ ಆದನಂತರ ಮುಖಪುಟದಲ್ಲಿ ಸುದ್ದಿ ಮತ್ತು ಘಟನೆಗಳು ಕಾಣಿಸುತ್ತದೆ. 
    • ಅದರಲ್ಲಿ ಕೊಟ್ಟ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೊಡ್‌ ಮಾಡಿಕೊಳ್ಳಿ. ಅದರಲ್ಲಿ ತಿಳಿಸಿರುವ ಅರ್ಹತೆ ಇರುವುದಾದರೆ       
    • ನಿಮ್ಮ CV ಅಥವಾ Resume ಅನ್ನು ಖಜಾನೆಯ ಆಯುಕ್ತರ ಕಚೇರಿಯ ಅಧಿಕೃತ ವಿಳಾಸಕ್ಕೆ ಕಳಿಹಿಸಬೇಕಾಗುತ್ತದೆ.
    • ಖಜಾನೆಯ ಆಯುಕ್ತರ ಕಚೇರಿಯ ಅಧಿಕೃತ ವಿಳಾಸ 
  • Office of the Commissioner of Treasuries,
  • 6th Floor, KPCL Green Bulding,
  • Palace Road, Bengalore – 560001
  •      
  •  ಅಥವಾ

 

  • e-mail ಮುಖಾಂತರ ಸಲ್ಲಿಸಬಹುದು
  •  e-Mail : commr.pa@Karnataka.gov.in
  •  
ಪ್ರಮುಖ ದಿನಾಂಕಗಳ ಮಾಹಿತಿ 
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ19-08-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಮತ್ತು ಸಮಯ10-09-2025 ಮತ್ತು 5 PM ಒಳಗಾಗಿ ಸಲ್ಲಿಸಬೇಕು

 

ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಕಿರು ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್ ಗಾಗಿಇಲ್ಲಿ ಕ್ಲಿಕ್‌ ಮಾಡಿ

 

FAQs ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ ʻ ಖಜಾನೆಯ ಆಯುಕ್ತರ ಕಚೇರಿʼಯಲ್ಲಿ ʻವಿವಿಧʼ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಕೊಡಲಾಗಿದೆ.

ಪ್ರಶ್ನೆ 1: ಖಜಾನೆಯ ಆಯುಕ್ತರ ಕಚೇರಿ 2025 ರಲ್ಲಿ ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?

ಉತ್ತರ 1: ಸೊಲ್ಯುಷನ್‌ ಅರ್ಕಿಟೆಕ್‌, ಬ್ಯುಜಿನೆಸ್‌ ಪ್ರೊಸೆಸ್‌ ರಿ-ಇನ್ಜಿಯರಿಂಗ್‌ (BPR), ಡೊಮೆನ್‌ ಎಕ್ಸ್‌ಪರ್ಟ್‌, ಪ್ರೊಜೆಕ್ಟ್‌ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶ್ನೆ 2: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಉತ್ತರ 2: ಅರ್ಜಿ ಸಲ್ಲಿಸುವ 10-ಸೆಪ್ಟೆಂಬರ್-2025‌ ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ‌, ತಲಾ ಒಂದರಂತೆ 4 ಹುದ್ದೆಗಲ ವರ್ಗಿಕರಣ ಮಾಡಲಾಗಿದೆ.

ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಎನು?

ಉತ್ತರ 4: B.E ವಿದ್ಯಾರ್ಹತೆ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು, ಹುದ್ದೆಯವಾರು ಕೆಲಸದ ಅನುಭವ ಕೂಡ ಹೊಂದಿದೆ.

ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಠಿರುತ್ತದೆ?

ಉತ್ತರ 5: ಅರ್ಜಿ ಶುಲ್ಕ ಇರುವುದಿಲ್ಲ

ಪ್ರಶ್ನೆ 6: ವಯೋಮಿತಿ ಎಷ್ಟು?

ಉತ್ತರ 6: ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 22 ವರ್ಷಗಳಿಂದ ಗರಿಷ್ಠ 35 ವರ್ಷಗಳು ಹಾಗೂ ವರ್ಗದವಾರು ವಯೊಮಿತಿ ಸಡಲಿಕೆ ಇರುತ್ತದೆ.

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿ ಸಲ್ಲಿಕೆಯು ನಿಮ್ಮ C.V. / Resume ಅನ್ನು ಅಧಿಕೃತವಾದ‌ ಇಲಾಖೆಯ ವಿಳಾಸಕ್ಕೆ ರಿಜಿಸ್ಟರ್‌ ಪೊಸ್ಟ್‌ ‌ಕಳಿಸುವ ಮೂಲಕ ಅಥವಾ ಇ-ಮೇಲ್ ಮುಖಾಂತರ ಮಾತ್ರ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ವಿಧಾನವನ್ನು ತಿಳಿಸಿ?

ಉತ್ತರ 8: ಸಂದರ್ಶನ ಮುಖಾಂತರ ಆಯ್ಕೆ ಮಾಡಲಾಗುವುದು.

ಪ್ರಶ್ನೆ 8: ಸಂದರ್ಶನದ ದಿನಾಂಕ ಯಾವುದು?

ಉತ್ತರ 8: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಿಂದ 15 ರಿಂದ 20 ದಿನಗಳವರೆಗೆ ಸಂದರ್ಶನದ ದಿನಾಂಕವಾಗಿದೆ.

 

 

Leave a Comment