Jobnews4u

KSCCF Jobs 2025| ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಬೇಗ ಅರ್ಜಿ ಸಲ್ಲಿಸಿ

KSCCF Jobs 2025: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ ಬೆಂಗಳೂರು(KSCCF) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಮತ್ತು ಅರ್ಹ ಅಭ್ಯರ್ಥಿಗಳಿಗಾಗಿ ‌ಅಧಿಕೃತ ಜಾಲತಾಣದಲ್ಲಿ ʼನೇಮಕಾತಿ ಪ್ರಕಟಣೆʼಯ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. 

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 14-ಸೆಪ್ಟೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ ʻಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ(KSCCF)ʼ ನ https://ksccsf.org/Recruitment ಪುಟದ ಮೂಲಕ ಆನ್‌ ಲೈನ್‌ ಅರ್ಜಿಯನ್ನು ಸಲ್ಲಿಸಬಹುದು.

KSCCF Jobs 2025ಉದ್ಯೋಗ ಮಾಹಿತಿ

KSCCF Jobs 2025
KSCCF Jobs 2025

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ(KSCCF) ಬೆಂಗಳೂರು ಸಂಸ್ಥೆ ಅಧಿಕೃತ ನೇಮಕಾತಿ ಪ್ರಕಟಣೆ 2025ಪ್ರಕಾರ, ಫಾರ್ಮಾಸಿಸ್ಟ್‌, ಪ್ರಥಮ ದರ್ಜೆ ಸಹಾಯಕರು ಹಾಗೂ ವಿಕ್ರಯ ಸಹಾಯಕರು ಒಟ್ಟು 34 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಮತ್ತು ಹುದ್ದೆಗಳಿಗೆ ಆನ್ಲೈನ್‌ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಕಂಡಂತೆ ವಿವರಿಸಲಾಗಿದೆ.

KSCCF Jobs 2025 ನ ಖಾಲಿ ಇರುವ ಹುದ್ದೆಯ ಹೆಸರು

  • ಫಾರ್ಮಾಸಿಸ್ಟ್‌
  • ಪ್ರಥಮ ದರ್ಜೆ ಸಹಾಯಕರು
  • ವಿಕ್ರಯ ಸಹಾಯಕರು

KSCCF Jobs 2025 ನ ಖಾಲಿ ಇರುವ ಹುದ್ದೆಗಳ ಸಂಖೈ

ಒಟ್ಟು – 34 ಹುದ್ದೆಗಳು

  • ಫಾರ್ಮಾಸಿಸ್ಟ್‌ – 07 ಹುದ್ದೆಗಳು
  • ಪ್ರಥಮ ದರ್ಜೆ ಸಹಾಯಕರು – 10 ಹುದ್ದೆಗಳು
  • ವಿಕ್ರಯ ಸಹಾಯಕರು – 17 ಹುದ್ದೆಗಳು

 ಶೈಕ್ಷಣಿಕ ಅರ್ಹತಾ ವಿವರಗಳು 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 14-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.

ಹುದ್ದೆಯ ಹೆಸರುಶೈಕ್ಷಣಿಕ ಅರ್ಹತೆ

ಫಾರ್ಮಾಸಿಸ್ಟ್‌

ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಪ್ಲೋಮಾ ಇನ್‌ ಫಾರ್ಮಾಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಕಂಪ್ಯೂಟರ್‌ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ನಲ್ಲಿ ಜ್ಞಾನ ಹೊಂದಿರಬೇಕು

ಕನ್ನಡವನ್ನು ಒದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ಪ್ರಥಮ ದರ್ಜೆ ಸಹಾಯಕರು

ಭಾರತದ ಕಾನೂನಿನಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.

ಕಂಪ್ಯೂಟರ್‌ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ನಲ್ಲಿ ಜ್ಞಾನ ಹೊಂದಿರಬೇಕು

ಕನ್ನಡವನ್ನು ಒದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ವಿಕ್ರಯ ಸಹಾಯಕರು

ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.

ಕಂಪ್ಯೂಟರ್‌ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ನಲ್ಲಿ ಜ್ಞಾನ ಹೊಂದಿರಬೇಕು

ಕನ್ನಡವನ್ನು ಒದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

 

ವಯಸ್ಸಿನ ಪರಿಮಿತಿ

KSCCF Jobs 2025 ನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 14-09-2025ಕ್ಕೆ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

  • ಸಾಮನ್ಯ ವರ್ಗದ  ಅಭ್ಯರ್ಥಿಗಳಿಗೆ –  ಕನಿಷ್ಥ18 ವರ್ಷಗಳಿಂದ ಗರಿಷ್ಟ 35 ವರ್ಷ ಮೀರಿರಬಾರದು
  • ಒ.ಬಿ.ಸಿ.(IIA, IIB, IIIA, IIIB) ಅಭ್ಯರ್ಥಿಗಳಿಗೆ – ಕನಿಷ್ಥ18 ವರ್ಷಗಳಿಂದ ಗರಿಷ್ಟ 38 ವರ್ಷ ಮೀರಿರಬಾರದು
  • ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ – ಕನಿಷ್ಥ18 ವರ್ಷಗಳಿಂದ ಗರಿಷ್ಟ 40 ವರ್ಷ ಮೀರಿರಬಾರದು
  • ವಿಕಲಚೇತನರು ಮತ್ತು ವಿಧವೆಯರಿಗೆ – 10 ವರ್ಷಗಳ ವಯೋಮಿತಿಯಲ್ಲಿ ಸಡಲಿಕೆ ಇದೆ

ಅರ್ಜಿ ಶುಲ್ಕದ ವಿವರಗಳು

➡️. ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 500/- ಗಳು ಜೊತೆಗೆ GATE WAY CHARES

➡️. ಇತರ ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,000/- ಗಳು ಜೊತೆಗೆ GATE WAY CHARES

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಲಿಖಿತ ಪರೀಕ್ಷೆ
  • ಸಂದರ್ಶನ
  • ಮೆರಿಟ್‌ ಪಟ್ಟಿ
 
KSCCF Jobs 2025 ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
  • ಅರ್ಜಿ ಸಲ್ಲಿಸುವ ಮುಂಚೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ(KSCCF) ಬೆಂಗಳೂರು ಸಂಸ್ಥೆ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
  • https://virtualofficeerp.com/ksccf2025/login ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ನಂತರ CONSUMERS FEDERATION RECRUITMENT2025 ಪೇಜ್‌ನ್ನು ಒಪೆನ್‌ ಮಾಡಿ ಮತ್ತು ಅದರಲ್ಲಿ ಅಪ್ಲೈ  ಬಟನ್ ಅನ್ನು ಒಪೆನ ಮಾಡಿ .
  • ಅರ್ಜಿ Open ಆದ ನಂತರ ಅರ್ಜಿಯಲ್ಲಿ ಕೇಳಲಾದ ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ಒದಗಿಸಿ.
  • ಪಾಸ್‌ ಪೋರ್ಟ ಸೈಜಿನ ಭಾವಚಿತ್ರ ಹಾಗೂ ಸಹಿ ಮಾಡಿದ ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು.
  • ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿಬೇಕು.
  • REGISTRATION ID, EMAIL, MOBILE ನಂಬರ್ ಅನ್ನು ಬರೆದಿಟ್ಟುಕೊಳ್ಳಿ.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

 

ಪ್ರಮುಖ ದಿನಾಂಕಗಳ ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ16-08-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ14-09-2025

 

ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment