ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ,
ಜಮಖಂಡಿ ಬ್ಯಾಂಕ್ ನೇಮಕಾತಿ 2025: `ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್, ಜಮಖಂಡಿ’ನಲ್ಲಿ ಸಿಬ್ಬಂದಿಗಳ ನೇರ ನೇಮಕಾತಿಗಾಗಿ ಅಧಿಕೃತವಾಗಿ `ಜಾಬ್ ನೋಟಿಫಿಕೇಷನ್’ ಬಿಡುಗಡೆಮಾಡಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 27-ಸೆಪ್ಟೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ `ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್, ಜಮಖಂಡಿʼ(JMUCB) ನ https://thejamkhandiurbanbank.com ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
ಜಮಖಂಡಿ ಬ್ಯಾಂಕ್ ನೇಮಕಾತಿ 2025 ಉದ್ಯೋಗ ಮಾಹಿತಿ

`ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್, ಜಮಖಂಡಿ(JMUCB) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಕಿರಿಯ ಸಹಾಯಕರೂ, ಗಣಕಯಂತ್ರ ನಿರ್ವಾಹಕರು, ಸಿಪಾಯಿ, ರಾತ್ರಿ ಕಾವಲುಗಾರರು ಹಾಗೂ ವಿವಿಧ ಹುದ್ದೆಗಳಿಗೆ ಒಟ್ಟು 45 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 12ನೇ ತರಗತಿಯ ಜೊತೆಗೆ ಕೆಲಸಕ್ಕೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು. ನೇರ ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಕಿರಿಯ ಸಹಾಯಕರು | 14 |
| ಗಣಕಯಂತ್ರ ನಿರ್ವಾಹಕರು | 04 |
| ಸಿಪಾಯಿ | 16 |
| ರಾತ್ರಿ ಕಾವಲುಗಾರರು | 08 |
| ವಾಹನ ಚಾಲಕರು | 02 |
| ಗನ್ ಮ್ಯಾನ್ | 01 |
| ಒಟ್ಟು | 45 |
ಆಯ್ಕೆಯ ಸ್ಥಳ:
- ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್ ನ ಅಧಿಕೃತ ನೇಮಕಾತಿಯ ಆಯ್ಕೆಯ ಪ್ರಕಾರ ಕರ್ನಾಟಕದ ಬ್ಯಾಂಕ್ ನ ಕೇಂದ್ರ ಕಚೇರಿ ಅಥವಾ ಯಾವುದೇ ಶಾಖೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು:
`ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್, ಜಮಖಂಡಿ'(JMUCB) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.
| ಹುದ್ದೆಯ ಹೆಸರು | ವೇತನ |
| ಕಿರಿಯ ಸಹಾಯಕರು | ರೂ. 33450-62600 ಗಳು |
| ಗಣಕಯಂತ್ರ ನಿರ್ವಾಹಕರು | ರೂ. 33450-62600 ಗಳು |
| ಸಿಪಾಯಿ | ರೂ.21400-42000 ಗಳು |
| ರಾತ್ರಿ ಕಾವಲುಗಾರರು | ರೂ.21400-42000 ಗಳು |
| ವಾಹನ ಚಾಲಕರು | ರೂ.21400-42000 ಗಳು |
| ಗನ್ ಮ್ಯಾನ್ | ರೂ.21400-42000 ಗಳು |
ಶೈಕ್ಷಣಿಕ ಅರ್ಹತಾ ವಿವರಗಳು:
`ದಿ ಜಮಖಂಡಿ ಆರ್ಬನ್ ಕೋ-ಅಪರೀಟಿವ್ ಬ್ಯಾಂಕ್’ ಜಮಖಂಡಿ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 27-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಕಿರಿಯ ಸಹಾಯಕರು ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 12ನೇ ತರಗತಿಯಲ್ಲಿ ಉತ್ತೀರ್ಣ.
- ಕನ್ನಡವನ್ನು ಬರೆಯಲು, ಓದಲು, ಅರ್ಥಮಾಡಿಕೊಳ್ಳವ ಮತ್ತು ಸ್ಪಷ್ಟವಾಗಿ ಮತನಾಡಬೇಡುವ ಸಾಮರ್ಥ್ಯ ಹೊಂದಿರಬೇಕು.
- ಕಂಪ್ಯೂಟರ್ನಲ್ಲಿ ಅಪ್ಲಿಕೇಷನ್ ನಲ್ಲಿ ಜ್ಞಾನದ ಅಗತ್ಯವಿದೆ.
ಗಣಕಯಂತ್ರ ನಿರ್ವಾಹಕರು ಹುದ್ದೆಗೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 12ನೇ ತರಗತಿಯಲ್ಲಿ ಉತ್ತೀರ್ಣ.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿ/ಸಂಸ್ಥೆಯಿಂದ ಮೂರು ವರ್ಷದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಪದವಿ.
- ಕನ್ನಡವನ್ನು ಬರೆಯಲು, ಓದಲು, ಅರ್ಥಮಾಡಿಕೊಳ್ಳವ ಮತ್ತು ಸ್ಪಷ್ಟವಾಗಿ ಮತನಾಡಬೇಡುವ ಸಾಮರ್ಥ್ಯ ಹೊಂದಿರಬೇಕು.
- ಕಂಪ್ಯೂಟರ್ನಲ್ಲಿ ಅಪ್ಲಿಕೇಷನ್ ನಲ್ಲಿ ಜ್ಞಾನದ ಅಗತ್ಯವಿದೆ.
ಸಿಪಾಯಿ ಹುದ್ದೆಗೆ :
- 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು.
ರಾತ್ರಿ ಕಾವಲುಗಾರರು ಹುದ್ದೆಗೆ :
- 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು.
- ಮಾಜಿ ಸೈನಿಕರಿಗೆ ಆದ್ಯತೆ ಇರುತ್ತದೆ.
ವಾಹನ ಚಾಲಕರು ಹುದ್ದೆಗೆ :
- 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು
- ಕಾನೂನುಬದ್ದ ಲಘು ಮತ್ತು ಭಾರಿ ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.
- ಲಘು ಮತ್ತು ಭಾರಿ ವಾಹನ ಚಾಲನೆಯಲ್ಲಿ 5 ವರ್ಷದ ಅನುಭವ ಅಗತ್ಯವಿದೆ.
ಗನ್ ಮ್ಯಾನ್ ಹುದ್ದೆಗೆ :
- 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕು.
ಮಾಜಿ ಸೈನಿಕರಿಗೆ ಆದ್ಯತೆ ಇರುತ್ತದೆ
ವಯಸ್ಸಿನ ಪರಿಮಿತಿ:
`ದಿ ಜಮಖಂಡಿ ಆರ್ಬನ್ ಕೋ-ಅಪರೀಟಿವ್ ಬ್ಯಾಂಕ್’ ಜಮಖಂಡಿ 2025 ನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 27-09-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.
- ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 40 ವರ್ಷ ಮೀರಿರಬಾರದು
- ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 38 ವರ್ಷ ಮೀರಿರಬಾರದು
- ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷಗಳಿಂದ ಗರಿಷ್ಟ 35 ವರ್ಷ ಮೀರಿರಬಾರದು
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷಗಳ ಸೇವೆ ಸಲ್ಲಿಸಿರಬೇಕು. – ಗರಿಷ್ಟ 45 ವರ್ಷ ಮೀರಿರಬಾರದು
ಅರ್ಜಿ ಶುಲ್ಕದ ವಿವರಗಳು:
| ಹುದ್ದೆಯ ಹೆಸರು | ವರ್ಗದ ವಿಂಗಡಣೆ | ಅರ್ಜಿ ಶುಲ್ಕ |
| ಕಿರಿಯ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ | ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 1,000/- ಗಳು + GST 18% |
| ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ ಹಾಗೂ ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 2,000/- ಗಳು + GST 18% | |
| ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕರು ಮತ್ತು ಗನ್ ಮ್ಯಾನ್ ಹುದ್ದೆಗಳಿಗೆ | ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 500/- ಗಳು + GST 18% |
| ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ ಹಾಗೂ ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 1,000/- ಗಳು + GST 18% |
ಜಮಖಂಡಿ ಬ್ಯಾಂಕ್ ನೇಮಕಾತಿ 2025 ಆಯ್ಕೆಯ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ
ಲಿಖಿತ ಪರೀಕ್ಷೆಯ ವಿಷಯಗಳ ಹುದ್ದೆವಾರು ವಿವರಗಳು ಕೆಳಗೆನಂತಿವೆ.
- ಕಿರಿಯ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ:
ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ,
ಕನ್ನಡ 50 ಅಂಕಗಳು
ಸಾಮಾನ್ಯ ಇಂಗ್ಲೀಷ್ 50 ಅಂಕಗಳು
ಸಾಮಾನ್ಯ ಜ್ಞಾನ 25 ಅಂಕಗಳು
ಸಹಕಾರಿ ವಿಷಯಗಳಿಗಾಗಿ 50 ಅಂಕಗಳು
ಭಾರತದ ಸಂವಿಧಾನ 25 ಅಂಕಗಳು
ಸಮಾಜದ ಯುಕ್ತವಾದ ಚಟುವಟಿಕೆಗಳು ಮತ್ತು ವಸ್ತುನಿಷ್ಠೆ ವಿಷಯ ವಸ್ತುಗಳು 25 ಅಂಕಗಳು
ಲಿಖಿತ ಪರೀಕ್ಷೆಯ ನಂತರದಲ್ಲಿ ಸಂದರ್ಶನಕ್ಕೆ ಆಯ್ಕೆಯಾದ 1:5 ಅನುಪಾತದಲ್ಲಿ ಅಭ್ಯರ್ಥಿಗಳಿಗೆ `Computer Practical Test’ ಪರೀಕ್ಷೆ ನಡೆಸಲಾಗುವುದು.
- ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕರು,ಗನ್ ಮ್ಯಾನ್ ಹುದ್ದೆಗಳಿಗೆ:
ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ
ಕನ್ನಡ ಭಾಷೆಗಾಗಿ 50 ಅಂಕಗಳು
ಸಾಮಾನ್ಯ ಜ್ಞಾನಕ್ಕಾಗಿ 50 ಅಂಕಗಳು ಹೊಂದಿರುತ್ತದೆ.
ಜಮಖಂಡಿ ಬ್ಯಾಂಕ್ ನೇಮಕಾತಿ 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ” ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್, ಜಮಖಂಡಿನಲ್ಲಿ“ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://thejamkhandiurbanbank.com/ ವೆಬ್ ಸೈಟ್ಗೆ ಭೇಟಿ ನೀಡಿ.
- ಆನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ನ ಸಹಾಯದಿಂದ ರಿಜಿಸ್ಟರ್ ಮಾಡಿಕೊಳ್ಳಿ.
- ಅರ್ಜಿ ಹಾಕಲು ಬಯಸಿರುವ ಹುದ್ದೆಯನ್ನು ಆಯ್ಕೆ ಮಾಡಿ ಅಪ್ಪ್ಲೈ ಮೇಲೆ ಕ್ಲಿಕ್ ಮಾಡಿ.
- ನಂತರದಲ್ಲಿ ವಿದ್ಯಾರ್ಹತೆ, ಸೇವಾ ಅನುಭವ ಹಾಗೂ ಹುದ್ದೆಗೆ ಸಂಬಂದಿಸಿರುವ ಎಲ್ಲಾ ದಾಖಲಾತಿ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಆಯಾ ಹುದ್ದೆಗೆ ಸಂಬಂದಿಸಿರುವ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿಬೇಕು.
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಬ್ಯಾಂಕ್ ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 28 -08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 27-09-2025 ಸಂಜೆ 5.00 ಗಂಟೆವರೆಗೆ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | |
| ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು | |
ನೇಮಕಾತಿ ವೆಬ್ಸೈಟ್ ವಿಳಾಸ : https://thejamkhandiurbanbank.com | |
FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ `ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್’, ಜಮಖಂಡಿ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: `ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್’’ ನಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1: ಕಿರಿಯ ಸಹಾಯಕರು, ಗಣಕಯಂತ್ರ ನಿರ್ವಾಹಕರು, ಸಿಪಾಯಿ, ರಾತ್ರಿ ಕಾವಲುಗಾರರು, ವಾಹನ ಚಾಲಕರು ಹಾಗೂ ಗನ್ ಮ್ಯಾನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2: `ದಿ ಜಮಖಂಡಿ ಅರ್ಬನ್ ಕೋ-ಆಪರೀಟಿವ್ ಬ್ಯಾಂಕ್ ಲಿಮಿಟೆಡ್’, ಜಮಖಂಡಿ 2025 ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 27-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಕಿರಿಯ ಸಹಾಯಕರು 14 ಹುದ್ದೆಗಳು, ಗಣಕಯಂತ್ರ ನಿರ್ವಾಹಕರು 4 ಹುದ್ದೆಗಳು, ಸಿಪಾಯಿ, 16 ಹುದ್ದೆಗಳು, ರಾತ್ರಿ ಕಾವಲುಗಾರರು 8 ಹುದ್ದೆಗಳು, ವಾಹನ ಚಾಲಕರು 02 ಹುದ್ದೆಗಳು ಹಾಗೂ ಗನ್ ಮ್ಯಾನ್ 01 ಹುದ್ದೆ ಒಟ್ಟು 45 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ ಇದೆ?
ಉತ್ತರ 4: ಕರ್ನಾಟಕ ರಾಜ್ಯದ JMUCBಯ ಕೇಂದ್ರ ಕಚೇರಿ ಅಥವಾ ಬ್ಯಾಂಕ್ ಗೆ ಸಂಬಂದಿಸಿರುವ ಬ್ರಾಂಚ್ ಗಳಲ್ಲಿ ಉದ್ಯೋಗದ ಸ್ಥಳವಾಗಿದೆ.
ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5: JMUCB ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವಂತೆ 12ನೇ ತರಗತಿ ಹಾಗೂ ಕೆಲಸದ ಅನುಭವ ಹೊಂದಿರಬೇಕು.
ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?
ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ. 500/- ಗಳು ಮತ್ತು ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 1,000/- ಗಳು.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿಯನ್ನು ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8: ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

